ಬ್ರೇಕಿಂಗ್ ನ್ಯೂಸ್
14-12-21 08:25 pm HK Desk news ದೇಶ - ವಿದೇಶ
ನವದೆಹಲಿ, ಡಿ. 14 : ಮುಂದಿನ 6 ತಿಂಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದರ್ ಪೂನಾವಾಲಾ ತಿಳಿಸಿದ್ದಾರೆ. ಮಕ್ಕಳ ವಿಷಯದಲ್ಲಿ ಆತಂಕದ ಪರಿಸ್ಥಿತಿ ಈಗ ಇಲ್ಲ, ಆದರೂ, ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಲಸಿಕೆಯನ್ನು ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಕೊವೊವ್ಯಾಕ್ಸ್ ಲಸಿಕೆಯು ಸದ್ಯ ಪ್ರಯೋಗ ಹಂತದಲ್ಲಿದೆ, ಇದು ಮಕ್ಕಳಿಗೆ ಮೂರು ವರ್ಷದವರೆಗೂ ರಕ್ಷಣೆ ಒದಗಿಸಲಿದೆ ಎಂದರು.
ಲಸಿಕೆ ಪರಿಣಾಮಕಾರಿ ಹಾಗೂ ಮಕ್ಕಳಿಗೆ ಸೋಂಕಿನ ವಿರುದ್ಧ ರಕ್ಷಣೆ ಒದಗಿಸಲಿದೆ ಎಂಬುದಕ್ಕೆ ಪೂರಕ ಅಂಕಿ ಅಂಶಗಳು ಲಭ್ಯವಿದೆ. ಮಕ್ಕಳಿಗೆ ಲಸಿಕೆ ಕೊಡಿಸಬೇಕು, ಇವುಗಳಿಂದ ಅಡ್ಡಪರಿಣಾಮಗಳಿಲ್ಲ, ಸರ್ಕಾರ ಈ ಕುರಿತು ಹೊರಡಿಸಿರುವ ಪ್ರಕಟಣೆ ಆಧರಿಸಿ, ಅದರಂತೆಯೇ ಕ್ರಮಕೈಗೊಳ್ಳಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ. ಕೋವಿಡ್‌ನ ರೂಪಾಂತರಿಯಾಗಿರುವ ಓಮಿಕ್ರಾನ್ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದು ಈಗಾಲೇ ಹೇಳಲಾಗದು, ಆದರೆ ಗಂಭೀರ ಪರಿಣಾಮ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ 18 ವರ್ಷ ಮೀರಿದವರಿಗೆ ಮಾತ್ರ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ನೀಡುವ ಲಸಿಕೆಗೆ ಸಂಬಂಧಿಸಿದಂತೆ ಈಗಾಗಲೇ ಭಾರತದಲ್ಲಿ ಎರಡು ಕಂಪನಿಗಳು ಪರವಾನಗಿ ಪಡೆದಿವೆ. ಈ ಕಂಪನಿಗಳ ಲಸಿಕೆಗಳೂ ಶೀಘ್ರವೇ ಲಭ್ಯವಾಗಬಹುದು ಎಂದು ತಿಳಿಸಿದರು.
ಸದ್ಯ ಝೈಕೋವ್-ಡಿ ಲಸಿಕೆಯನ್ನು (12 ವರ್ಷ ಮೇಲ್ಪಟ್ಟಎಲ್ಲಾ ಮಕ್ಕಳಿಗೂ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮತ್ತೊಂದೆಡೆ ಕೋವ್ಯಾಕ್ಸಿನ್ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿದೆ. ಅದಕ್ಕೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನು 60 ವರ್ಷದ ದಾಟಿದವರು ಈಗಾಗಲೇ ಎರಡೂ ಡೋಸ್ ಪಡೆದುಕೊಂಡು 6-9 ತಿಂಗಳು ತುಂಬುತ್ತಾ ಇರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಈ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ತನ್ನ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
12 ವರ್ಷ ಮೇಲ್ಪಟ್ಟಮಕ್ಕಳು ಸೇರಿ ಎಲ್ಲರಿಗೂ ನೀಡಬಹುದಾದ ದೇಶೀಯ 'ಝೈಕೋವ್ ಡಿ' ಲಸಿಕೆಯ ಪ್ರತೀ ಡೋಸ್‌ಗೆ 265 ರು. ದರ ನಿಗದಿ ಪಡಿಸಲಾಗಿದೆ. ಇದು ಸಿರಿಂಜ್‌ರಹಿತವಾಗಿದ್ದು, ಈ ಲಸಿಕೆ ನೀಡಲು ಫಾರ್ಮಾಜೆಟ್ ಎಂಬ ಅಪ್ಲಿಕೇಟರ್ ಬಳಸಲಾಗುತ್ತದೆ. ಇದಕ್ಕೆ ಪ್ರತ್ಯೇಕ 93 ರು. ಇದೆ. ಹೀಗಾಗಿ ಒಂದು ಡೋಸ್‌ಗೆ ಒಟ್ಟಾರೆ 358 ರು. ಆಗಲಿದೆ. ಇದು ಮೂರು ಡೋಸ್‌ನ ಲಸಿಕೆಯಾದ ಕಾರಣ, ಮೂರೂ ಡೋಸ್‌ಗೆ ಒಟ್ಟಾರೆ 1058 ರು. ಆಗಲಿದೆ. ಕೋವಿಶೀಲ್ಡ್‌ನ 1 ಡೋಸ್‌ಗೆ 215 ರು. ದರ ನಿಗದಿ: ಈಗಾಗಲೇ ಭಾರತದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್‌ನ 1 ಡೋಸ್‌ಗೆ 215 ರು. ದರ ನಿಗದಿ ಮಾಡಲಾಗಿದೆ. ಅಂದರೆ 2 ಡೋಸ್‌ಗೆ 430 ರು. ಆಗುತ್ತದೆ. ಇನ್ನು ಕೋವ್ಯಾಕ್ಸಿನ್ ಪ್ರತಿ ಡೋಸ್ ಅನ್ನು ಸರ್ಕಾರ 225 ರು. ನಂತೆ ಖರೀದಿಸಿತ್ತು. ಅಂದರೆ 2 ಡೋಸ್‌ಗೆ 450 ರು. ಹೀಗಾಗಿ ಈ ಲಸಿಕೆಗಳಿಗೆ ಹೋಲಿಸಿದರೆ ಸರ್ಕಾರ ಪ್ರತಿ ವ್ಯಕ್ತಿಗೆ ನೀಡಲು ಝೈಡಸ್ ಲಸಿಕೆಗೆ ಕನಿಷ್ಠ 600 ರು. ಹೆಚ್ಚು ಹಣ ಪಾವತಿ ಮಾಡಬೇಕಾಗಲಿದೆ. ಈಗಾಗಲೇ ಇದೇ ದರದಲ್ಲಿ 1 ಕೋಟಿ ಡೋಸ್ ಝೈಡಸ್ ಲಸಿಕೆ ಖರೀದಿಗೆ ಸರ್ಕಾರ ಬೇಡಿಕೆ ಸಲ್ಲಿಸಿದೆ.
ಝೈಕೋವ್ -ಡಿ ವಿಶ್ವದ ಮೊಟ್ಟಮೊದಲ ಪ್ಲಾಸ್ಮಾಯ್ಡ್ ಡಿಎನ್‌ಎ ಲಸಿಕೆಯಾಗಿದೆ. ಪ್ರತಿ ಡೋಸ್ ಅನ್ನು 28 ದಿನಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಭಾರತದಲ್ಲಿ ಮಕ್ಕಳಿಗೆ ನೀಡಲು ಬಳಸಲು ಅನುಮತಿ ಪಡೆದ ಮೊದಲ ಲಸಿಕೆ ಇದು. ಸಂಭವನೀಯ ಮೂರನೇ ಕೊರೊನಾ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿದೆ. ಇದೀಗ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ನೀಡಲು ತಜ್ಞರ ಸಮಿತಿ ಮಕ್ಕಳ ಮೇಲೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ನಿಟ್ಟಿಸಿರುವ ಬಿಡುವಂತಾಗಿದೆ.
The Serum Institute of India (SII) plans to launch the Novavax (NVAX.O) COVID-19 vaccine for children in the country in six months, its CEO said on Tuesday, adding global vaccine supplies were outstripping the absorption capacity of many countries.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm