ಪಾಣತ್ತೂರು ; ಮರದ ದಿಮ್ಮಿ ಒಯ್ಯುತ್ತಿದ್ದ ಲಾರಿ ಪಲ್ಟಿ- ನಾಲ್ವರು ಕಾರ್ಮಿಕರು ಸಾವು

23-12-21 08:52 pm       HK Desk news   ದೇಶ - ವಿದೇಶ

ಸುಳ್ಯ ಗಡಿಭಾಗ ಕಲ್ಲಪಳ್ಳಿಯಿಂದ ಪಾಣತ್ತೂರು ನಡುವಿನ ಹೆದ್ದಾರಿಯಲ್ಲಿ ಪೆರಿಯಾರಂ ಎಂಬಲ್ಲಿ ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ದುರಂತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಾಸರಗೋಡು, ಡಿ.23 : ಸುಳ್ಯ ಗಡಿಭಾಗ ಕಲ್ಲಪಳ್ಳಿಯಿಂದ ಪಾಣತ್ತೂರು ನಡುವಿನ ಹೆದ್ದಾರಿಯಲ್ಲಿ ಪೆರಿಯಾರಂ ಎಂಬಲ್ಲಿ ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ದುರಂತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಲ್ಲಪಳ್ಳಿಯ ದೊಡ್ಡಮನೆ ಎಂಬಲ್ಲಿಂದ ಕಟ್ಟಿಂಗ್ ಮಾಡಿದ ಮರದ ದಿಮ್ಮಿಗಳನ್ನು ಹೇರಿಕೊಂಡು ಕೇರಳದ ಪಾಣತ್ತೂರು ಕಡೆಗೆ ತೆರಳುತ್ತಿದ್ದ ಲಾರಿ ಬ್ರೇಕ್ ಫೈಲ್ ಆಗಿದ್ದು, ಪೆರಿಯಾರಂ ಎಂಬಲ್ಲಿನ ತಿರುವಿನಲ್ಲಿ ಪಲ್ಟಿಯಾಗಿದೆ. ಕಳೆದ ವರ್ಷ ಮದುವೆ ದಿಬ್ಬಣ ಸಾಗುತ್ತಿದ್ದ ಬಸ್ ಪಲ್ಟಿಯಾಗಿದ್ದ ಸ್ಥಳದಲ್ಲೇ ದುರಂತ ನಡೆದಿದೆ.

ಲಾರಿಯ ಮೇಲೆ ಮರದ ದಿಮ್ಮಿಗಳನ್ನು ಹೇರಿದ ಬಳಿಕ ಅದರ ಮೇಲೆಯೇ ಕಾರ್ಮಿಕರು ಕುಳಿತಿದ್ದರು. ಒಟ್ಟು ಒಂಬತ್ತು ಕಾರ್ಮಿಕರು ಲಾರಿಯಲ್ಲಿದ್ದರು ಎನ್ನಲಾಗುತ್ತಿದ್ದು, ಕೆಲವರು ಲಾರಿ ಪಲ್ಟಿಯಾಗುತ್ತಲೇ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಕೆಲವರು ಲಾರಿ ಪಲ್ಟಿಯಾದ ವೇಳೆ ಮರದ ದಿಮ್ಮಿಗಳೆಡೆಗೆ ಸಿಲುಕಿದ್ದು ಗಂಭೀರ ಗಾಯಗೊಂಡಿದ್ದಾರೆ. ನಾಲ್ವರು ಸಾವು ಕಂಡಿದ್ದಾರೆ.

ಸ್ಥಳೀಯರು ಕೂಡಲೇ ಮರದ ದಿಮ್ಮಿಗಳನ್ನು ಎತ್ತಿ ಗಾಯಾಳುಗಳನ್ನು ಕಾಞಂಗಾಡು ಬಳಿ ಪೂಡಂಗಲ್ ಆಸ್ಪತ್ರೆಗೆ ದಾಖಲಿಸಿದರು. ಲಾರಿ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ಬ್ರೇಕ್ ವೈಫಲ್ಯಕ್ಕೀಡಾಗಿ ವೇಗವಾಗಿ ಧಾವಿಸಿ, ಕೆಳಭಾಗದಲ್ಲಿದ್ದ ಮನೆಯೊಂದಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಕಳೆದ ಬಾರಿ ಇದೇ ಭಾಗದ ಇಳಿಜಾರಿನಲ್ಲಿ ಮದುವೆ ದಿಬ್ಬಣದ ಬಸ್ ಸಾಗುತ್ತಿದ್ದಾಗ ಬ್ರೇಕ್ ವೈಫಲ್ಯಕ್ಕೀಡಾಗಿ ಹಲವರು ಸಾವಿಗೀಡಾಗಿದ್ದರು.

Four people were killed after a lorry carrying timber overturned at Panathur here on Thursday. According to reports, the lorry got stuck on a huge bend and plunged into a canal after demolishing the sheets of a nearby house.