ಬ್ರೇಕಿಂಗ್ ನ್ಯೂಸ್
24-12-21 12:22 pm HK Desk news ದೇಶ - ವಿದೇಶ
ಲೂಧಿಯಾನ, ಡಿ.24 : ಲೂಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಬಾಂಬ್ ಸ್ಫೋಟ ಆಗೋದಕ್ಕೂ ಮುನ್ನ ಗುಪ್ತಚರ ಇಲಾಖೆಯಿಂದ ವಿಧ್ವಂಸಕ ಕೃತ್ಯದ ಬಗ್ಗೆ ಪಂಜಾಬ್ ಪೊಲೀಸರಿಗೆ ಅಲರ್ಟ್ ಸೂಚನೆ ನೀಡಲಾಗಿತ್ತು. ಕಳೆದ ಡಿ.7ರಂದು ಮತ್ತು ಡಿ.23ರಂದು ಗುಪ್ತಚರ ಇಲಾಖೆ ಅಲರ್ಟ್ ಸೂಚನೆ ನೀಡಿತ್ತು. ಆದರೆ ಅಲರ್ಟ್ ಸೂಚನೆ ನೀಡಿರುವ ದಿನವೇ ಕೋರ್ಟ್ ಕಟ್ಟಡದಲ್ಲಿ ಬಾಂಬ್ ಸ್ಫೋಟ ಆಗಿರುವ ವಿದ್ಯಮಾನ ಹೊರಬಂದಿದೆ.
ಇದೇ ವೇಳೆ, ಕೃತ್ಯದ ಹಿಂದೆ ಪಾಕಿಸ್ಥಾನದ ಐಎಸ್ಐ ಮತ್ತು ಪಾಕಿಸ್ಥಾನ ಪ್ರೇರಿತ ಖಾಲಿಸ್ತಾನ್ ಉಗ್ರರ ಕೈವಾಡ ಇರುವ ಬಗ್ಗೆ ಗುಪ್ತಚರ ಪಡೆ ಶಂಕೆ ವ್ಯಕ್ತಪಡಿಸಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಇತರ ಐದು ಮಂದಿ ಗಾಯಗೊಂಡಿದ್ದಾರೆ. ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡದ ಎರಡನೇ ಅಂತಸ್ತಿನಲ್ಲಿ ವಾಶ್ ರೂಮಿನಲ್ಲಿ ಬಾಂಬ್ ಇಡಲಾಗಿತ್ತು ಎನ್ನೋದನ್ನು ಪತ್ತೆ ಮಾಡಲಾಗಿದೆ. ಅಲ್ಲಿನ ಗೋಡೆ, ಕಿಟಕಿ ಛಿದ್ರಗೊಂಡಿದ್ದು, ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.
ಕಳೆದ ಜುಲೈ 9, ಡಿಸೆಂಬರ್ 9 ಮತ್ತು ಡಿ.23ರಂದು ಗುಪ್ತಚರ ಇಲಾಖೆಯಿಂದ ಪಂಜಾಬ್ ರಾಜ್ಯಕ್ಕೆ ವಿಧ್ವಂಸಕ ಕೃತ್ಯದ ಸಂಚಿನ ಬಗ್ಗೆ ಅಲರ್ಟ್ ನೀಡಲಾಗಿತ್ತು. ಅಲ್ಲದೆ, ಐಇಡಿ ಮಾದರಿಯ ಪ್ರಬಲ ಸ್ಫೋಟಕಗಳನ್ನು ಬಳಸುವ ಬಗ್ಗೆ ಸುಳಿವು ನೀಡಿತ್ತು. ಲೂಧಿಯಾನ ಕೋರ್ಟ್ ಕಟ್ಟಡದಲ್ಲಿ ಐಇಡಿಗಿಂತಲೂ ಹೆಚ್ಚು ಪ್ರಬಲ ಸ್ಫೋಟಕ ಬಳಸಿರುವುದನ್ನು ಪತ್ತೆ ಮಾಡಲಾಗಿದೆ. ಬಾಂಬ್ ಸ್ಕ್ವಾಡ್ ನೀಡಿರುವ ಪ್ರಾಥಮಿಕ ಮೂಲಗಳ ಪ್ರಕಾರ, ಅತಿ ಹೆಚ್ಚು ಪ್ರಬಲವಾಗಿರುವ ಸ್ಫೋಟಕಗಳನ್ನು ಬಳಸಿರುವ ಬಗ್ಗೆ ಶಂಕೆ ಮಾಡಿದ್ದಾರೆ. ಇದರಿಂದಾಗಿ ಅತ್ಯಂತ ಪ್ರಬಲ ಎನ್ನಲಾಗಿರುವ ಪಿಇಟಿಎನ್ ಅಥವಾ ಆರ್ ಡಿಎಕ್ಸ್ ಬಳಸಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ, ಪಾಕಿಸ್ಥಾನ ಮೂಲದ ಬಬ್ಬರ್ ಖಲ್ಸಾ ಉಗ್ರರು ಕೃತ್ಯದ ಹಿಂದಿದ್ದಾರೆ ಎನ್ನುವ ಬಗ್ಗೆ ಗಂಭೀರ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತ ವ್ಯಕ್ತಿಯೇ ಬಾಂಬ್ ತಂದಿಟ್ಟಿರುವಾತ ಎನ್ನುವ ಬಗ್ಗೆಯೂ ಸುಳಿವು ಪತ್ತೆ ಮಾಡಿದ್ದಾರೆ. ಬಾಂಬ್ ತಂದು ಇಡುವಾಗಲೇ ಸ್ಫೋಟ ಸಂಭವಿಸಿರುವ ಸಾಧ್ಯತೆ ಕಂಡುಬಂದಿದ್ದು, ಬಾಂಬ್ ಇಟ್ಟಿರುವಾತನೇ ಸಾವನ್ನಪ್ಪಿದ ವ್ಯಕ್ತಿಯೇ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ದೇಹ ಗುರುತು ಸಿಗದ ರೀತಿ ಛಿದ್ರವಾಗಿದ್ದು, ಕೈಯಲ್ಲಿ ಟ್ಯಾಟೂ ಹಾಕ್ಕೊಂಡಿದ್ದ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಇದನ್ನು ಆಧರಿಸಿ ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆದಿದೆ.
ಲೂಧಿಯಾನ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಬಾಂಬ್ ಸ್ಫೋಟ ; ಇಬ್ಬರು ಸಾವು, ಉಗ್ರವಾದಿ ಕೃತ್ಯ ಶಂಕೆ
Intelligence agencies had issued at least three alerts this year about the possibility of Pakistan’s ISI and pro-Khalistan terror outfits carrying out multiple terror attacks in Punjab. The latest alert was issued on Thursday.
06-01-25 09:41 pm
Bengaluru Correspondent
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 08:29 pm
Mangalore Correspondent
Beary community, convention, Mangalore: ಬ್ಯಾ...
06-01-25 08:04 pm
Naxal Surrender, Vikram Gowda, Mangalore: ವಿಕ...
06-01-25 03:59 pm
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm