ಬ್ರೇಕಿಂಗ್ ನ್ಯೂಸ್
30-12-21 02:13 pm HK Desk news ದೇಶ - ವಿದೇಶ
ಸೂರತ್, ಡಿ.30 : ಐದು ವರ್ಷದ ಹೆಣ್ಮಗುವನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಘೋಷಣೆ ಮಾಡುತ್ತಿದ್ದಾಗಲೇ ಕಟಕಟೆಯಲ್ಲಿ ನಿಂತಿದ್ದ ಆರೋಪಿ ತನ್ನ ಚಪ್ಪಲಿಯನ್ನು ನ್ಯಾಯಾಧೀಶರತ್ತ ತೂರಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಸೂರತ್ ನಗರದ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಘಟನೆ ನಡೆದಿದ್ದು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶ ಪಿ.ಎಸ್.ಕಾಳ ಶಿಕ್ಷೆಯ ತೀರ್ಪು ಓದಿದ್ದಾರೆ. ಇಷ್ಟಾಗುತ್ತಲೇ ವ್ಯಗ್ರನಾದ ಆರೋಪಿ ಸುಜಿತ್ ಸಾಕೇತ್, ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ಕಿತ್ತು ನ್ಯಾಯಪೀಠದತ್ತ ಎಸೆದಿದ್ದಾನೆ. ಚಪ್ಪಲಿ ಗುರಿತಪ್ಪಿ ನ್ಯಾಯಾಧೀಶರ ಬದಿಯಲ್ಲಿರುವ ಸಾಕ್ಷ್ಯ ಪ್ರಮಾಣದ ಪೆಟ್ಟಿಗೆಯ ಮೇಲೆ ಬಿದ್ದಿದೆ. ಆರೋಪಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸುಜಿತ್ ಸಾಕೇತ್ ಮಧ್ಯಪ್ರದೇಶ ಮೂಲದವನಾಗಿದ್ದು, 2021ರ ಎಪ್ರಿಲ್ 30ರಂದು ವಲಸೆ ಕಾರ್ಮಿಕ ದಂಪತಿಯ ಮಗುವೊಂದನ್ನು ಚಾಕಲೇಟ್ ಕೊಡುವ ನೆಪದಲ್ಲಿ ಹತ್ತಿರಕ್ಕೆ ಕರೆದು ಅತ್ಯಾಚಾರಗೈದು ಕೊಲೆ ಮಾಡಿದ್ದ. ಮಗುವನ್ನು ಚಾಕಲೇಟ್ ತಿನ್ನಿಸಿ ನಿಗೂಢ ಜಾಗಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದು, ಆನಂತರ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ. ಘಟನೆ ಬಗ್ಗೆ ಎಫ್ಐಆರ್ ದಾಖಲಿಸಿದ್ದ ಸೂರತ್ ಪೊಲೀಸರು ಆರೋಪಿಯನ್ನು ಬಂಧಿಸಿ, ಚಾರ್ಜ್ ಶೀಟ್ ಹಾಕಿದ್ದರು.
ಕೋರ್ಟಿನಲ್ಲಿ ವಿಚಾರಣೆ ನಡೆದಿದ್ದು 26 ಸಾಕ್ಷಿಗಳ ಹೇಳಿಕೆ ಮತ್ತು 56 ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ, ನ್ಯಾಯಾಧೀಶರು 27 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.
A court in Surat today sentenced a 27-year-old man to life imprisonment "for the remainder of his natural life" in a case of rape and murder of a five-year-old girl in April this year.
18-12-25 02:26 pm
HK News Desk
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
ಕೊಪ್ಪಳ ; ಬೈಕ್ - ಬೊಲೆರೋ ಡಿಕ್ಕಿ , ಮೂವರು ಯುವಕರ...
18-12-25 12:37 pm
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm