ಇಂಗ್ಲೆಂಡ್ ಸೇರಿ ಹೈ ರಿಸ್ಕ್ ದೇಶಗಳಿಂದ ನೇರ ವಿಮಾನಗಳಿಗೆ ಪಶ್ಚಿಮ ಬಂಗಾಳ ಸರಕಾರ ಬ್ರೇಕ್  

30-12-21 08:50 pm       HK Desk news   ದೇಶ - ವಿದೇಶ

ಇಂಗ್ಲೆಂಡಿನಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಕೊಲ್ಕತ್ತಾಗೆ ಬರುವ ನೇರ ವಿಮಾನಗಳನ್ನು ಪಶ್ಚಿಮ ಬಂಗಾಳ ಸರಕಾರ ರದ್ದುಪಡಿಸಿದೆ.

ಕೊಲ್ಕತ್ತಾ, ಡಿ.30 : ಇಂಗ್ಲೆಂಡಿನಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಕೊಲ್ಕತ್ತಾಗೆ ಬರುವ ನೇರ ವಿಮಾನಗಳನ್ನು ಪಶ್ಚಿಮ ಬಂಗಾಳ ಸರಕಾರ ರದ್ದುಪಡಿಸಿದೆ. ಅಲ್ಲದೆ, ಅಪಾಯಕಾರಿ ಎಂದು ಭಾರತ ಸರಕಾರ ಪರಿಗಣಿಸಿರುವ ಇತರ ದೇಶಗಳಿಂದಲೂ ನೇರ ವಿಮಾನ ಸಂಚಾರಕ್ಕೆ ಕಡಿವಾಣ ಹಾಕಿದೆ.

ಜನವರಿ 3ರಿಂದ ಈ ಆದೇಶ ಜಾರಿಗೆ ಬರಲಿದೆ. ಕೇವಲ ಹೈ ರಿಸ್ಕ್ ಇಲ್ಲದ ದೇಶಗಳಿಂದ ಮಾತ್ರ ಜನರು ಕೋವಿಡ್ ಮಾರ್ಗದರ್ಶಿ ಅನುಸರಿಸಿ ಪಶ್ಚಿಮ ಬಂಗಾಳಕ್ಕೆ ಬರಬಹುದಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಪಿ.ಗೋಪಾಲಿಕಾ ಆದೇಶ ಹೊರಡಿಸಿದ್ದಾರೆ.

ದೇಶದಲ್ಲಿ ಗುರುವಾರದ ಅಂಕಿ ಅಂಶದಲ್ಲಿ 13,154 ಮಂದಿಗೆ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ದೇಶದ ಎಂಟು ಜಿಲ್ಲೆಗಳಲ್ಲಿ ವಾರದ ಪಾಸಿಟಿವ್ ರೇಟ್ ಹತ್ತಕ್ಕಿಂತ ಹೆಚ್ಚಿದೆ. ಮಿಜೋರಾಂ ರಾಜ್ಯದ ಆರು ಜಿಲ್ಲೆಗಳು, ಅರುಣಾಚಲ ಪ್ರದೇಶದ ಒಂದು, ಪಶ್ಚಿಮ ಬಂಗಾಳದ ಒಂದು ಜಿಲ್ಲೆಯಲ್ಲಿ ಈ ಪಟ್ಟಿಯಲ್ಲಿದೆ. ಕೊಲ್ಕತಾದಲ್ಲಿ ವಾರದ ಪಾಸಿಟಿವ್ ರೇಟ್ 12.5 ಶೇಕಡಾ ಇದೆ. ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ಇಡುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. 

The West Bengal government has decided to temporarily suspend direct flights arriving to Kolkata from the UK from January 3 due to the prevailing Omicron situation.