ಹಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ರೈಲು ನಿಲ್ಲಿಸಿದ ಲೋಕೋ ಪೈಲಟ್ ! ಸೆಕೆಂಡ್ ಅಂತರದಲ್ಲಿ ಸಾವಿನಿಂದ ಪಾರು 

03-01-22 10:48 pm       HK Desk news   ದೇಶ - ವಿದೇಶ

ರೈಲ್ವೇ ಹಳಿಯಲ್ಲಿ ಅಡ್ಡಲಾಗಿ ಮಲಗಿದ್ದ ವ್ಯಕ್ತಿಯನ್ನು ನೋಡಿ, ರೈಲಿನ ಚಾಲಕ ರೈಲನ್ನು ನಿಲ್ಲಿಸಿ ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯನ್ನು ಸಾವಿನಿಂದ ಬಚಾವ್ ಮಾಡಿದ ಘಟನೆಯ ವಿಡಿಯೋವನ್ನು ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಮುಂಬೈ, ಜ.3 : ರೈಲ್ವೇ ಹಳಿಯಲ್ಲಿ ಅಡ್ಡಲಾಗಿ ಮಲಗಿದ್ದ ವ್ಯಕ್ತಿಯನ್ನು ನೋಡಿ, ರೈಲಿನ ಚಾಲಕ ರೈಲನ್ನು ನಿಲ್ಲಿಸಿ ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯನ್ನು ಸಾವಿನಿಂದ ಬಚಾವ್ ಮಾಡಿದ ಘಟನೆಯ ವಿಡಿಯೋವನ್ನು ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಮುಂಬೈ ನಗರದ ಶಿವಾಡಿ ರೈಲ್ವೇ ಸ್ಟೇಶನ್ ಬಳಿ ನಡೆದಿದೆ. ಸಿಸಿಟಿವಿಯ ವಿಡಿಯೋದಲ್ಲಿ ದೂರದಲ್ಲಿ ರೈಲು ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಹಳಿಯಲ್ಲಿ ಮಲಗಿದ್ದಾನೆ. ಇದನ್ನು ದೂರದಿಂದ ಗಮನಿಸಿದ ರೈಲಿನ ಲೋಕೋ ಪೈಲಟ್, ಎಮರ್ಜೆನ್ಸಿ ಬ್ರೇಕ್ ಒತ್ತಿದ್ದು ರೈಲು ವ್ಯಕ್ತಿಯ ಸಮೀಪಕ್ಕೆ ಬಂದು ನಿಂತು ಬಿಟ್ಟಿದೆ. ಕೂಡಲೇ ದೂರದಲ್ಲಿದ್ದ ರೈಲ್ವೇ ಸಿಬಂದಿ ಓಡಿ ಬಂದಿದ್ದು, ಹಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಕರೆತಂದಿದ್ದಾರೆ. ಬೆಳಗ್ಗೆ 11.45ರ ಸುಮಾರಿಗೆ ಘಟನೆ ನಡೆದಿದೆ.

ಇದರ ವಿಡಿಯೋವನ್ನು ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದ್ದು, ಲೋಕೋ ಪೈಲಟ್ ಆಗಿದ್ದ ವ್ಯಕ್ತಿ ಅಸಾಧಾರಣ ಕೆಲಸ ಮಾಡಿದ್ದಾರೆ. ದೂರದಿಂದ ರೈಲು ಸಾಗುತ್ತಿದ್ದಾಗಲೇ ಹಳಿಯಲ್ಲಿ ವ್ಯಕ್ತಿ ಮಲಗಿದ್ದನ್ನು ನೋಡಿ, ರೈಲಿನ ಎಮರ್ಜೆನ್ಸಿ ಬ್ರೇಕ್ ಅದುಮಿದ್ದಾನೆ. ನಿಮ್ಮ ಜೀವ ಅಮೂಲ್ಯ, ನಿಮಗಾಗಿ ಮನೆಯಲ್ಲಿ ಸಂಬಂಧಿಕರು ಕಾದಿರುತ್ತಾರೆ ಎಂದು ಬರೆದು ಮೋಟರ್ ಮೇನ್ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲ್ವೇ ಸಚಿವಾಲಯದ ಕ್ರಮ ಮತ್ತು ಮೋಟರ್ ಮೇನ್ ಅಧಿಕಾರಿಯ ಸಕಾಲಿಕ ಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

The video shows a CCTV footage of a man escaping death by mere inches after the alert train driver pulled the emergency brakes right on time. A shocking video shared by the Ministry of Railways has gone viral on Twitter. The video shows a CCTV footage of a man escaping death by mere inches after the alert train driver pulled the emergency brakes right on time. The video was shot at the Shivdi station in Mumbai.