ಸಾಲದ ಕಿರುಕುಳದಿಂದ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ 

08-01-22 08:50 pm       HK Desk news   ದೇಶ - ವಿದೇಶ

ಸಾಲಬಾಧೆಯಿಂದಾಗಿ ತೆಲಂಗಾಣದ ಕುಟುಂಬವೊಂದರ ನಾಲ್ವರು ಸದಸ್ಯರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶ, ಜ 08: ಸಾಲಬಾಧೆಯಿಂದಾಗಿ ತೆಲಂಗಾಣದ ಕುಟುಂಬವೊಂದರ ನಾಲ್ವರು ಸದಸ್ಯರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀಲತಾ(54), ಆಶಿಷ್​(22), ಸುರೇಶ್​ (56) ಹಾಗೂ ಅಖಿಲ್​(28) ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ತೆಲಂಗಾಣದ ಈ ಕುಟುಂಬ ಆಂಧ್ರಪ್ರದೇಶದ ವಿಜಯವಾಡದಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿತ್ತು. ಇಲ್ಲಿನ ಹೋಟೆಲ್​ ಒಂದರಲ್ಲಿ ರೂಮ್ ​ಬಾಡಿಗೆಗೆ ಪಡೆದುಕೊಂಡಿದ್ದರು. ಕೆಲ ದಿನಗಳಿಂದ ಇಲ್ಲೇ ಇದ್ದ ಕುಟುಂಬಸ್ಥರು, 'ಸಾಲಬಾಧೆಯಿಂದ ಜೀವನ ಕಷ್ಟವಾಗುತ್ತಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ' ಎಂದು ತಮ್ಮ ಸಂಬಂಧಿಯೊಬ್ಬರಿಗೆ ವಾಯ್ಸ್​ ಸಂದೇಶ ಕಳುಹಿಸಿದ್ದರು. ಇದರಿಂದ ಗಾಬರಿಯಾದ ಸಂಬಂಧಿಕರು ಹೋಟೆಲ್​ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸಿಬ್ಬಂದಿ ಅವರಿದ್ದ ರೂಮ್​ಗೆ ಬಂದು ಪರಿಶೀಲಿಸಿದಾಗ ತಾಯಿ ಶ್ರೀಲತಾ ಮತ್ತು ಪುತ್ರ ಆಶಿಷ್​ ವಿಷ ಸೇವನೆಯಿಂದ ಸಾವನ್ನಪ್ಪಿದ್ದು ದೃಢಪಟ್ಟಿದೆ.

ವಿಷಯ ತಿಳಿದ ಪೊಲೀಸರು ರೂಮ್​ ತಪಾಸಣೆ ನಡೆಸಿದಾಗ 20ಕ್ಕೂ ಅಧಿಕ ಇನ್ಸುಲಿನ್​ ಬಾಟಲ್​ಗಳು ಪತ್ತೆಯಾಗಿವೆ. ಮೃತಪಟ್ಟ ಆಶಿಷ್​ ಬಿ-ಫಾರ್ಮ್​ ವಿದ್ಯಾರ್ಥಿಯಾಗಿದ್ದು, ಇವುಗಳ ಬಗ್ಗೆ ಅರಿವಿದ್ದ ಕಾರಣ ಹೆಚ್ಚಾಗಿ ಇನ್ಸುಲಿನ್​ ಇಂಜೆಕ್ಟ್​ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇದೇ ವೇಳೆ ತಂದೆ ಸುರೇಶ್​ ಮತ್ತು ಇನ್ನೊಬ್ಬ ಪುತ್ರ ಅಖಿಲ್​ ಕೃಷ್ಣಾ ನದಿಯಲ್ಲಿ ಧುಮುಕಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

In yet another family suicide, four members of a family from Nizamabad district committed suicide in Vijayawada here on Friday night. The deceased were – Suresh, Srilatha and their two sons Ashish and Akhil who came to Vijayawada to have a darshan of Goddess Kanaka Durga. They checked into Sri Kanyakaparameswari cottage.