ಬ್ರೇಕಿಂಗ್ ನ್ಯೂಸ್
10-01-22 10:50 pm HK Desk news ದೇಶ - ವಿದೇಶ
ನವದೆಹಲಿ, ಜ.10 : ಪ್ರಧಾನಿ ಮೋದಿ ತೆರಳುತ್ತಿದ್ದ ಎಸ್ ಪಿಜಿ ಭದ್ರತೆಯ ಕಾರನ್ನು ಬ್ಲಾಕ್ ಮಾಡಿ, ಭದ್ರತಾ ಲೋಪಕ್ಕೆ ಕಾರಣವಾದ ಘಟನೆಗೆ ತಾವೇ ಹೊಣೆಯೆಂದು ಖಲೀಸ್ತಾನಿ ಉಗ್ರರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ವಕೀಲರೊಬ್ಬರಿಗೆ ಬೆದರಿಕೆ ಕರೆಯ ವಾಯ್ಸ್ ಮೆಸೇಜ್ ಬಂದಿದ್ದು, ಆ ಘಟನೆಯನ್ನು ನಾವೇ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಮೆಸೇಜನ್ನು ಬ್ರಿಟನ್ ದೇಶದಿಂದ ಕಳುಹಿಸಲಾಗಿತ್ತು ಅನ್ನೋದನ್ನು ಪತ್ತೆ ಮಾಡಲಾಗಿದೆ.
ಈ ಬಗ್ಗೆ ಬೆದರಿಕೆ ಕರೆ ಸ್ವೀಕರಿಸಿರುವ ವಕೀಲ ನಿಶಾಂತ್ ಕಾಂತೇಶ್ವರ್, ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸದಂತೆ ಬೆದರಿಕೆ ಒಡ್ಡಿದ್ದಾರೆ. ಈ ಕರೆಯನ್ನು ಸಿಖ್ ಫಾರ್ ಜಸ್ಟಿಸ್ ಸಂಘಟನೆಯಿಂದ ಬ್ರಿಟನ್ ದೇಶದಿಂದ ಮಾಡಿದ್ದಾಗಿ ತಿಳಿಸಿದ್ದಾರೆ ಎಂದು ಟೈಮ್ಸ್ ನೌ ವಾಹಿನಿಗೆ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಇನ್ನೊಬ್ಬ ವಕೀಲ ವಿಷ್ಣು ಜೈನ್ ಅವರಿಗೂ ಇದೇ ಮಾದರಿಯ ಧ್ವನಿ ಮುದ್ರಿತ ಬೆದರಿಕೆ ಕರೆ ಎರಡು ಬಾರಿ ಬಂದಿದೆ. ಬೆಳಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 12.30ಕ್ಕೆ ಕರೆ ಬಂದಿತ್ತು. ಇದರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಈ ಬಗ್ಗೆ ವಾದ ಮಂಡನೆ ಮಾಡದಂತೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, 1984ರ ಸಿಖ್ ವಿರೋಧಿ ದಂಗೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಕೊಡಿಸಿಲ್ಲ. ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಒಬ್ಬ ಅಪರಾಧಿಯನ್ನೂ ಪತ್ತೆ ಮಾಡಲಾಗದ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ತನಿಖೆ ಮಾಡಬಾರದು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸೋಮವಾರ, ಪ್ರಧಾನಿಯ ಭದ್ರತಾ ಲೋಪದ ಪ್ರಕರಣದಲ್ಲಿ ತನಿಖೆಗೆ ಪ್ರತ್ಯೇಕ ತಂಡವನ್ನು ನೇಮಕ ಮಾಡಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಚಂಡೀಗಢ ಡಿಜಿಪಿ, ಎನ್ಐಎ ತನಿಖಾ ದಳದ ಐಜಿ ಸೇರಿದಂತೆ ಹಲವು ಪ್ರಮುಖರನ್ನು ಸೇರಿಸಿ ಪ್ರತ್ಯೇಕ ತಂಡ ರಚನೆ ಮಾಡಿದೆ. ಇದಲ್ಲದೆ, ಪಂಜಾಬ್ ಸರಕಾರ ಮತ್ತು ಗೃಹ ಸಚಿವಾಲಯ ನಡೆಸುತ್ತಿರುವ ತನಿಖೆಯನ್ನು ರದ್ದುಪಡಿಸಿದೆ. ಯಾವುದೇ ಪ್ರತ್ಯೇಕ ತನಿಖೆ ಅಗತ್ಯವಿಲ್ಲ. ಇದು ಗಂಭೀರವಾದ ವಿಚಾರವಾಗಿದ್ದು, ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಮುಖ್ಯ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
Even as the Supreme Court agreed to constitute a committee to probe the security breach involving Prime Minister Narendra Modi's convoy on January 5, Times Now has received inputs from at least 15 lawyers, claiming that they received calls from a UK number- reportedly belonging to the banned outfit Sikhs for Justice (SFJ) - taking responsibility for the blockade of the convoy.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 08:39 pm
Mangalore Correspondent
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm