ಬ್ರೇಕಿಂಗ್ ನ್ಯೂಸ್
11-01-22 08:19 pm HK Desk news ದೇಶ - ವಿದೇಶ
ಮುಂಬೈ, ಜ.11 : ಗಾಯನ ಲೋಕದ ಜೀವಂತ ದಂತಕತೆ, ಗಾನ ಕೋಗಿಲೆ ಎಂದೇ ಹೆಸರು ಪಡೆದಿರುವ ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ತಮ್ಮ 92ನೇ ವಯಸ್ಸಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಯಸ್ಸಿನ ಕಾರಣದಿಂದ ಅವರಿಗೆ ಇತರ ಅನಾರೋಗ್ಯವೂ ಇದ್ದು, ಅವರನ್ನು ತಜ್ಞ ವೈದ್ಯರು ನಿಗಾ ವಹಿಸಿದ್ದಾರೆ. 2019ರ ನವೆಂಬರ್ ನಲ್ಲಿಯೂ ಮಂಗೇಶ್ಕರ್ ಅವರನ್ನು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಚೇತರಿಕೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಕಳೆದ ಸೆಪ್ಟಂಬರ್ ತಿಂಗಳಲ್ಲಿ 92ನೇ ವರ್ಷದ ಜನ್ಮದಿನ ಆಚರಿಸಿದ್ದ ಲತಾ ಮಂಗೇಶ್ಕರ್ ಜೊತೆಗೆ ಹತ್ತಿರದ ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು. ಗಾಯನ ಲೋಕದ ದಂತಕತೆಯ ಬಗ್ಗೆ ದೇಶ- ವಿದೇಶದಿಂದ ಹಾರೈಕೆಗಳು ಬಂದಿದ್ದವು. ಪ್ರಧಾನಿ ಮೋದಿ ಕೂಡ ದೀರ್ಘಾಯುಷ್ಯ ನೀಡುವಂತೆ ಕೋರಿ ಟ್ವೀಟ್ ಮಾಡಿದ್ದರು.
ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದ್ದ ಲತಾ ಮಂಗೇಶ್ಕರ್, ಸಿನಿಮಾ ಪಯಣದಲ್ಲಿ ಸುದೀರ್ಘ ಏಳು ದಶಕದ ಯಾತ್ರೆ ನಡೆಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಧ್ವನಿ ನೀಡಿರುವ ಹಿರಿಮೆ ಅವರದ್ದು. ಅಲ್ಲದೆ, ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲೂ ಲತಾ ಮಂಗೇಶ್ಕರ್ ಹಾಡಿದ್ದಾರೆ. 2004ರಲ್ಲಿ ಯಶ್ ಚೋಪ್ರಾ ನಿರ್ಮಾಣದಲ್ಲಿ ಮಂಗೇಶ್ಕರ್ ಕಂಠದಲ್ಲಿ ಪೂರ್ಣ ಮಟ್ಟದ ಆಲ್ಬಂ ವೀರ್ ಝಾರಾ ಕೊನೆಯ ಬಾರಿಗೆ ಬಿಡುಗಡೆಯಾಗಿತ್ತು. ಆನಂತರವೂ ಇಳಿ ವಯಸ್ಸಿನಲ್ಲೂ ಸಿರಿಕಂಠವನ್ನು ಹಾಗೇ ಉಳಿಸಿಕೊಂಡಿದ್ದ ಲತಾ ಅವರು ಹಾಡಿದ್ದ ಹಾಡು 2021ರ ಮಾರ್ಚ್ 30ರಂದು ಬಿಡುಗಡೆಯಾಗಿತ್ತು. ಭಾರತೀಯ ಯೋಧರ ಬಗೆಗಿನ ‘ಸೌಗಂಧ್ ಮುಝೆ ಇಸ್ ಮಿಟ್ಟೀ ಕೀ’ ಹಾಡನ್ನು ಅವರು ಕೊನೆಯ ಬಾರಿಗೆ ಹಾಡಿದ್ದರು.
2001ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನದಿಂದ ಲತಾ ಮಂಗೇಶ್ಕರ್ ಪುರಸ್ಕೃತರಾಗಿದ್ದರು. ಅದಲ್ಲದೆ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಸೇರಿದಂತೆ ಅವರು ಪಡೆದಿರುವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೆ ಲೆಕ್ಕವಿಲ್ಲ.
Legendary singer Lata Mangeshkar is in hospital in Mumbai after being diagnosed with the novel coronavirus. The 92-year-old singer, who is also known as the nightingale of India, is currently undergoing treatment at the intensive care unit (ICU) of Mumbai’s Breach Candy hospital.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm