ಮುಂಬೈನಲ್ಲಿ ಭಾರೀ ಬೆಂಕಿ ಅವಘಡ ; ಏಳು ಮಂದಿ ಸಾವು, ಹಲವರು ಅಸ್ವಸ್ಥ, ಬೆಳ್ಳಂಬೆಳಗ್ಗೆ ಬೆಂಕಿಯಲ್ಲಿ ಬೆಂದ ಜನ !

22-01-22 03:01 pm       HK Desk news   ದೇಶ - ವಿದೇಶ

ಅಪಾರ್ಟ್ಮೆಂಟ್ ಒಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ, 26 ಮಂದಿ ಸುಟ್ಟ ಗಾಯಗೊಂಡಿದ್ದಾರೆ.

ಮುಂಬೈ, ಜ.21 : ಅಪಾರ್ಟ್ಮೆಂಟ್ ಒಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ, 26 ಮಂದಿ ಸುಟ್ಟ ಗಾಯಗೊಂಡಿದ್ದಾರೆ. ಮುಂಬೈನ ಗೊವಾಲಿಯಾ ಟ್ಯಾಂಕ್ ಬಳಿಯ ಗಾಂಧಿ ಹಾಸ್ಪಿಟಲ್ ಮುಂಭಾಗದಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದ್ದು, 18ನೇ ಮಹಡಿಯಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹೊತ್ತಿಕೊಂಡಿದೆ.

20 ಮಹಡಿಗಳ ಕಮಲಾ ಬಿಲ್ಡಿಂಗ್ ಅಪಾರ್ಟ್ಮೆಂಟ್ ಸಮುಚ್ಚಯವಾಗಿದ್ದು, ಬೆಳ್ಳಂಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. 13 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ. 18ನೇ ಮಹಡಿಯ 1904 ನಂಬರಿನ ಮನೆಯೊಂದರಲ್ಲಿ ಬೆಂಕಿ ಹತ್ತಿದ್ದು, ಕೂಡಲೇ ಹೊಗೆ ಆವರಿಸಿದೆ. ಕಟ್ಟಡದಲ್ಲಿ ಹೊಗೆ ಆವರಿಸಿದ್ದು, ಕೆಲವು ಮನೆಗಳಲ್ಲಿ ಇನ್ನೂ ಜನರು ಮಲಗಿದಲ್ಲಿಂದ ಎದ್ದಿರಲಿಲ್ಲ. ಹೀಗಾಗಿ ಏಳುವಾಗದಲೇ ಉಸಿರು ಕಟ್ಟುವ ವಾತಾವರಣ ಉಂಟಾಗಿತ್ತು.

ಆರು ಮಂದಿ ಹಿರಿಯ ನಾಗರಿಕರು ಉಸಿರು ಕಟ್ಟಿ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಬೆಂಕಿ ಹತೋಟಿಗೆ ಬಂದಿದ್ದು, ಹೊಗೆ ಇನ್ನೂ ಆವರಿಸಿಕೊಂಡಿದೆ ಎಂದು ಮುಂಬೈ ಮೇಯರ್ ಕಿಶೋರಿ ಪಾಂಡೇಕರ್ ಹೇಳಿದ್ದಾರೆ. 18 ಮತ್ತು 19ನೇ ಮಹಡಿಯಲ್ಲಿ ಬೆಂಕಿ ಹರಡಿತ್ತು. ಕೂಡಲೇ ಅಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಒಂದು ಮಹಡಿಯಲ್ಲಿ ಆರು ಮನೆಗಳಿದ್ದು, ಅಲ್ಲಿನ ಕುಟುಂಬಗಳ ಕೆಲವು ಮಂದಿ ಸಿಕ್ಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದ್ದಾರೆ. ಅಪಾರ್ಟ್ಮೆಂಟಿನಲ್ಲಿದ್ದ ಬೆಂಕಿ ನಿರೋಧಕ ಯಂತ್ರಗಳು ಉಪಯೋಗಕ್ಕೆ ಬಾರದೇ ಇದ್ದುದು ಬೆಂಕಿ ಹತ್ತಿಕೊಳ್ಳಲು ಕಾರಣವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Six people were killed and at least 27 injured after a massive fire (Level 3) broke out on the 18th floor of 20-storey Kamla building located opposite Gandhi Hospital at Gowalia Tank in Mumbai Tardeo around 7:30 am on Saturday. The Brihanmumbai Municipal Corporation said that 13 fire engines were rushed to the spot. The injured have been admitted to nearby hospitals.