ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ವದಂತಿ, ಸುಳ್ಳು ಸುದ್ದಿ ಹರಡದಿರಿ ; ವೈದ್ಯರು, ಕುಟುಂಬಸ್ಥರ ಮನವಿ

23-01-22 12:24 pm       HK Desk news   ದೇಶ - ವಿದೇಶ

ದೇಶ ಕಂಡ ಪ್ರಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ವದಂತಿ, ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಬಗ್ಗೆ ಅವರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ, ಜ.23 : ದೇಶ ಕಂಡ ಪ್ರಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ವದಂತಿ, ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಬಗ್ಗೆ ಅವರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಕಾರಣದಿಂದ ಐಸಿಯು ವಿಭಾಗದಲ್ಲಿ ದಾಖಲಾಗಿರುವ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ದಯವಿಟ್ಟು ವದಂತಿ ಹರಡದಿರಿ. ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಲತಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬ್ರೀಚ್ ಕ್ಯಾಂಡಿ ಹಾಸ್ಪಿಟಲ್ ವೈದ್ಯ ಡಾ.ಪ್ರತೀತ್ ಸಮಾಧಾನಿ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆರೋಗ್ಯ ಸ್ಥಿತಿ ಬಗ್ಗೆ ವದಂತಿ ಹರಡದಿರಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಲತಾ ಮಂಗೇಶ್ಕರ್ ಅವರ ಟ್ವಿಟರ್ ಹ್ಯಾಂಡಲ್ ನಲ್ಲಿಯೂ ಈ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ. ದಯವಿಟ್ಟು ಅಭಿಮಾನಿಗಳು ಲತಾ ಮಂಗೇಶ್ಕರ್ ಬಗ್ಗೆ ವದಂತಿ, ಗೊಂದಲದ ಮಾಹಿತಿ ನೀಡುವುದನ್ನು ನಿಲ್ಲಿಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅದರಂತೆ, ಆದಷ್ಟು ಬೇಗ ಆರೋಗ್ಯದಿಂದ ಆಸ್ಪತ್ರೆಯಿಂದ ಹಿಂತಿರುಗಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ಕುಟುಂಬಸ್ಥರು ನೀಡಿರುವ ಸ್ಪಷ್ಟನೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಟ್ವಿಟರ್ ನಲ್ಲಿ ಹಾಕ್ಕೊಂಡಿದ್ದು, ಯಾರು ಕೂಡ ವದಂತಿ ಹರಡದಂತೆ ಮನವಿ ಮಾಡಿದ್ದಾರೆ. ಸುಳ್ಳು ಸುದ್ದಿಗಳಿಗೆ ಕಿವಿ ಕೊಡುವುದು ಬೇಡ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಭರವಸೆ ತೋರಿದ್ದಾರೆ. ಶೀಘ್ರ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಜನವರಿ 11ರಂದು ಲತಾ ಮಂಗೇಶ್ಕರ್ ಅವರನ್ನು ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 92 ವರ್ಷದ ಲತಾ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವರ್ಷದ ಹಿಂದೆಯೂ ಇದೇ ರೀತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಬಳಿಕ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದರು. ಲತಾ ಮಂಗೇಶ್ಕರ್ ನಿಧನರಾಗಿದ್ದಾರೆಂದು ಕೆಲವರು ವಾಟ್ಸಪ್ ಗಳಲ್ಲಿ ಹಾಕ್ಕೊಂಡಿದ್ದು, ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.

Bollywood singer Lata Mangeshkar is currently hospitalized. She was hit by a corona and since then she has been hospitalized and is currently under the supervision of doctors. There has been a lot of speculation about Lata Mangeshkar's health for the past several days as she has been in ICU for a long time. Lata Mangeshkar's health updates are constantly coming out from the team of doctors and doctors also say that prayers should be offered for Lata Mangeshkar.