ಶೋರೂಮ್‍ನಲ್ಲಿ ರೈತನಿಗೆ ಅವಮಾನ ; ಗ್ರಾಹಕರ ಘನತೆ ನಮ್ಮ ಹೊಣೆ ಎಂದ ಮಹೀಂದ್ರ ಕಂಪನಿ CEO ಆನಂದ್ ಮಹೀಂದ್ರಾ

26-01-22 12:11 pm       HK Desk news   ದೇಶ - ವಿದೇಶ

ಇತ್ತೀಚೆಗೆ ತುಮಕೂರಿನಲ್ಲಿ ರೈತನೊಬ್ಬ ಬೊಲೆರೋ ಪಿಕ್‍ಅಪ್ ಖರೀದಿಸಲು ಶೋರೂಮ್‍ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್‍ಮ್ಯಾನ್ ರೈತನ ಯೋಗ್ಯತೆ ಬಗ್ಗೆ ಪ್ರಶ್ನಿಸಿದ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು.

ನವದೆಹಲಿ, ಜ 26 : ಇತ್ತೀಚೆಗೆ ತುಮಕೂರಿನಲ್ಲಿ ರೈತನೊಬ್ಬ ಬೊಲೆರೋ ಪಿಕ್‍ಅಪ್ ಖರೀದಿಸಲು ಶೋರೂಮ್‍ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್‍ಮ್ಯಾನ್ ರೈತನ ಯೋಗ್ಯತೆ ಬಗ್ಗೆ ಪ್ರಶ್ನಿಸಿದ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು.

ಇದೀಗ ಸ್ವತ ಮಹೀಂದ್ರ ಕಂಪನಿಯ ಸಿಇಒ ಆನಂದ್ ಮಹಿಂದ್ರಾ ಈ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ್ದು ಟ್ವೀಟ್ ನಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. 

ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮಹತ್ವದ ಬಗ್ಗೆ ಆನಂದ್ ಮಹಿಂದ್ರಾ ಒತ್ತಿ ಹೇಳಿದ್ದಾರೆ. ಮಹಿಂದ್ರಾ ಕಂಪನಿಯ ಮುಖ್ಯ ಉದ್ದೇಶ ಸಮುದಾಯ ಹಾಗೂ ಎಲ್ಲಾ ಪಾಲುದಾರರನ್ನು ಹೆಚ್ಚಿಸಲು ಅನುವು ಮಾಡಿ ಕೊಡುವುದು. ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಗ್ರಾಹಕರನ್ನು ಗೌರವಿಸುವ ನಮ್ಮ ನಿಯಮದಿಂದ ಯಾವುದೇ ಡೀಲರ್ ದೂರ ಸರಿದಿರುವುದು ದೃಢಪಟ್ಟರೆ ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸುವುದು, ಕೌನ್ಸೆಲಿಂಗ್ ಮಾಡಿಸುವುದು ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಕಳೆದ ವಾರ ತುಮಕೂರು ಮೂಲದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ತೆರಳಿದ್ದ. ಆದರೆ ಶೋರೂಮ್‍ನ ಸೇಲ್ಸ್‍ಮ್ಯಾನ್ 10 ಲಕ್ಷ ರೂ.ಯ ಕಾರ್ ಅನ್ನು ಖರೀದಿಸಲು 10 ರೂ. ನಿನ್ನ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದ್ದ. ಇದನ್ನು ರೈತ ಸವಾಲಾಗಿ ತೆಗೆದುಕೊಂಡು ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ರೂ. ಯೊಂದಿಗೆ ಶೋರೂಮ್‍ಗೆ ಮರಳಿದ್ದ.  ಆಕ್ರೋಶಗೊಂಡಿದ್ದ ರೈತನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. 

ಇನ್ನೂ ಟ್ವಿಟ್ಟರ್‍ನಲ್ಲಿ ಆನಂದ್ ಮಹಿಂದ್ರಾ ಅವರನ್ನು ಟ್ಯಾಗ್ ಮಾಡಿರುವ ಸಾವಿರಾರು ಮಂದಿ ಸೇಲ್ಸ್ ಮ್ಯಾನ್ ನನ್ನ  ಕೂಡಲೇ ಅಮಾನತುಗೊಳಿಸಿ ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿದ್ದಾರೆ.

 

Anand Mahindra Reaction on Tumkuru Show room incident, A farmer had gone to a car showroom to buy a vehicle when he was sent sneering by the staff. The customer, who was humiliated, paid Rs 10 lakh in one hour. He had taken it away.