ಬ್ರೇಕಿಂಗ್ ನ್ಯೂಸ್
28-01-22 07:32 pm HK Desk news ದೇಶ - ವಿದೇಶ
ತಿರುವನಂತಪುರ, ಜ.28 : ಹೈಸ್ಕೂಲಿನಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಮವಸ್ತ್ರದಲ್ಲಿ ಹಿಜಾಬ್ ಅಥವಾ ಇನ್ನಿತರ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಕೇರಳ ಸರಕಾರ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಮಾಡಿದೆ.
ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಅದನ್ನು ವಜಾ ಮಾಡಿದ್ದ ಕೋರ್ಟ್ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಯಾವುದೇ ಸಮವಸ್ತ್ರದ ಮೇಲೆ ಧಾರ್ಮಿಕ ಚಿಹ್ನೆ ತೋರಬಲ್ಲ ವಸ್ತ್ರಗಳನ್ನು ಧರಿಸುವುದು ಸರಿಯಲ್ಲ. ಅದರಿಂದ ಇತರ ಧರ್ಮೀಯರು ಕೂಡ ತಮ್ಮ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ನೀಡಬೇಕೆಂದು ಕೇಳುವ ಪ್ರಮೇಯ ಬರುತ್ತದೆ. ಎನ್ ಸಿಸಿ, ಸ್ಕೌಟ್, ಗೈಡ್ಸ್ ಸಮವಸ್ತ್ರದಲ್ಲಿಯೂ ಯಾವುದೇ ಹೆಚ್ಚುವರಿ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಇರುವುದಿಲ್ಲ. ಅದೇ ರೀತಿ ಪೊಲೀಸ್ ಕೆಡೆಟ್ ಸಮವಸ್ತ್ರದಲ್ಲಿಯೂ ಹಿಜಾಬ್ ಅಥವಾ ತೋಳನ್ನು ಮುಚ್ಚುವ ವಸ್ತ್ರಗಳನ್ನು ಧರಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿತ್ತು. ಕೋರ್ಟ್ ನಿರ್ದೇಶನವನ್ನು ಆಧರಿಸಿ ರಾಜ್ಯ ಸರಕಾರ ಹೈಸ್ಕೂಲಿನಲ್ಲಿ ಸಮವಸ್ತ್ರದ ಮೇಲೆ ಹಿಜಾಬ್ ಅಥವಾ ಇನ್ನಿತರ ಧಾರ್ಮಿಕ ಸಂಕೇತಗಳಡಿ ಯಾವುದೇ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಆದೇಶ ಮಾಡಿದೆ.
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅನ್ನುವುದು ಇತರೆಲ್ಲಾ ಮೇಲು- ಕೀಳುಗಳ ಮುಂದೆ ದೇಶ ಹೆಚ್ಚಿನದ್ದು ಎನ್ನುವ ಭಾವನೆ ಸೃಷ್ಟಿಸುವ ಪರಿಕಲ್ಪನೆ ಎಂದು ಆದೇಶದಲ್ಲಿ ತಿಳಿಸಿದೆ. ಇದರ ರಾಜ್ಯ ನೋಡಲ್ ಅಧಿಕಾರಿ ಕೂಡ, ಸಮವಸ್ತ್ರದ ಮೇಲೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸುವ ವಿಚಾರದಲ್ಲಿ ವಿರೋಧ ಸೂಚಿಸಿದ್ದರು. ಈ ರೀತಿಯ ಬೇಡಿಕೆಗೆ ಅನುಮತಿ ನೀಡುವುದು ವಿವಾದಕ್ಕೆ ಕಾರಣವಾಗುತ್ತದೆ ಎನ್ನುವ ಬಗ್ಗೆ ಬೊಟ್ಟು ಮಾಡಿದ್ದರು.
ಕಳೆದ ಹತ್ತು ವರ್ಷಗಳಲ್ಲಿ ಪೊಲೀಸ್ ಕೆಡೆಟ್ ವಿಚಾರದಲ್ಲಿ ಈ ರೀತಿಯ ಪ್ರಶ್ನೆ ಬಂದಿರಲಿಲ್ಲ. ಇದೇ ರೀತಿಯ ಬೇಡಿಕೆಯನ್ನು ಎನ್ ಸಿಸಿ, ಸ್ಕೌಟ್ಸ್ ಇನ್ನಿತರ ವಿಭಾಗದಲ್ಲಿಯೂ ಮುಂದಿಟ್ಟರೆ ಸಮಾನತೆ, ಶಿಸ್ತಿನ ಮೇಲೆ ಧಕ್ಕೆಯಾಗುತ್ತದೆ. ಇದರಿಂದ ಜಾತ್ಯತೀತ ತತ್ವಗಳಿಗೆ ಧಕ್ಕೆ ಬರುತ್ತದೆ ಎಂದು ರಾಜ್ಯ ಸರಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಕುತ್ತಿಯಾಡಿ ಸರಕಾರಿ ಹೈಸ್ಕೂಲಿನ ರಿಜಾ ನಹಾನ್ ಎಂಬ ಎಂಟನೇ ತರಗತಿ ವಿದ್ಯಾರ್ಥಿನಿ, ಹಿಜಾಬ್ ಧರಿಸುವುದು ಮತ್ತು ತೋಳು ಮುಚ್ಚುವ ರೀತಿ ವಸ್ತ್ರ ಧರಿಸುವುದು ತನ್ನ ಧಾರ್ಮಿಕ ನಂಬಿಕೆಯಾಗಿದ್ದು, ಭಾರತದ ಸಂವಿಧಾನದ ಪ್ರಕಾರ ಧಾರ್ಮಿಕ ನಂಬಿಕೆ ಮೂಲಭೂತ ಹಕ್ಕಾಗಿರುತ್ತದೆ ಎಂದು ವಾದಿಸಿದ್ದರು.
Thiruvananthapuram, Students will not be allowed to wear hijab or full sleeve dress as part of the uniform of Student Police Cadets project, the Kerala government said today. Initiated by the Kerala Police, the Student Police Cadets trains high school students to evolve as future leaders of a democratic society and act as a feeder organisation for the state police.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm