ಬ್ರೇಕಿಂಗ್ ನ್ಯೂಸ್
30-01-22 08:39 pm HK Desk news ದೇಶ - ವಿದೇಶ
ಪ್ರಯಾಗರಾಜ್, ಜ.30 : ಇಸ್ಲಾಮೀಕರಣದ ಅಪಾಯ ತಪ್ಪಿಸಲು ಭಾರತ ದೇಶವನ್ನು ಆದಷ್ಟು ಬೇಗ ಹಿಂದು ರಾಷ್ಟ್ರವೆಂದು ಘೋಷಣೆ ಮಾಡಬೇಕು. ಅಲ್ಲದೆ, ಇತಿಹಾಸದ ತಪ್ಪನ್ನು ಅಳಿಸಿ ಹಾಕಲು ಸುಭಾಶ್ಚಂದ್ರ ಬೋಸರನ್ನು ದೇಶದ ಮೊದಲ ಪ್ರಧಾನ ಮಂತ್ರಿ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಸಂತರ ಸಮ್ಮೇಳನ ಆಗ್ರಹಿಸಿದೆ.
ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದ ಸುಮೇರು ಪೀಠಾಧಿಪತಿ ಜಗದ್ಗುರು ನರೇಂದ್ರಾನಂದ ಸರಸ್ವತಿ, ಭಾರತ ಸರಕಾರ ದೇಶವನ್ನು ಹಿಂದು ರಾಷ್ಟ್ರ ಎಂದು ಘೋಷಣೆ ಮಾಡದೇ ಇದ್ದರೆ, ದೇಶದ ಹಿಂದುಗಳೆಲ್ಲ ಸ್ವಯಂಪ್ರೇರಿತರಾಗಿ ಭಾರತವನ್ನು ಹಿಂದು ದೇಶವೆಂದು ಕರೆಯುವುದು ಮತ್ತು ದಾಖಲಾತಿಗಳಲ್ಲಿ ಬರೆಯುವುದನ್ನು ಆರಂಭಿಸಬೇಕು. ಈಮೂಲಕ ಹಿಂದು ರಾಷ್ಟ್ರವೆಂದು ಘೋಷಣೆ ಮಾಡುವಂತಾಗಲು ಸರಕಾರಕ್ಕೆ ಒತ್ತಡ ಹೇರಿದಂತಾಗುತ್ತದೆ ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಜಿಹಾದಿ ಎನ್ನುವುದು ಜಗತ್ತಿಗೆ ಮತ್ತು ಮನುಕುಲಕ್ಕೆ ದೊಡ್ಡ ಬೆದರಿಕೆ. ಇದನ್ನು ಹಿಮ್ಮೆಟ್ಟಿಸಲು ಚೀನಾದಲ್ಲಿ ಕೈಗೊಂಡ ಕ್ರಮಗಳನ್ನು ಭಾರತದಲ್ಲಿಯೂ ಜಾರಿಗೆ ತರಬೇಕು. ದೇಶದಲ್ಲಿ ಸನಾತನಿ ಹಿಂದುಗಳೇ ಎಲ್ಲರಿಗೂ ಟಾರ್ಗೆಟ್ ಆಗಿದ್ದಾರೆ. ಇದನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಸಮಾನ ಶಿಕ್ಷಣ ಮತ್ತು ಸಮಾನ ನ್ಯಾಯ ಸಿಗುವಂತಾಗಲು ಭಾರತ ಹಿಂದು ರಾಷ್ಟ್ರ ಆಗಬೇಕು. ದೇಶದಲ್ಲಿ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣವನ್ನು ಕೊನೆಗೊಳಿಸಬೇಕು. ದೇವಸ್ಥಾನದ ನಿಯಂತ್ರಣ ಹೊಂದುವುದಾದರೆ, ಚರ್ಚ್ ಮತ್ತು ಮಸೀದಿಗಳ ಮೇಲೂ ಅದೇ ರೀತಿಯ ನಿಯಂತ್ರಣ ಹೇರಬೇಕು ಎಂದು ನರೇಂದ್ರಾನಂದ ಸರಸ್ವತಿ ಹೇಳಿದರು.
ದೇಶದಲ್ಲೀಗ ಮುಸ್ಲಿಮರು ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಅವರಿಗೆ ನೀಡಲಾಗುತ್ತಿರುವ ಅಲ್ಪಸಂಖ್ಯಾತ ಕೋಟಾವನ್ನು ತೆಗೆದು ಹಾಕಲು ಒತ್ತಡ ಹೇರಬೇಕು ಎಂದು ಹೇಳಿದ ಸ್ವಾಮೀಜಿ, ಸ್ವಾತಂತ್ರ್ಯ ವೀರ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅಂತಹ ಮಹನೀಯರ ಪಠ್ಯಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಸುವಂತಾಗಬೇಕು. ಇದಲ್ಲದೆ, ಮತಾಂತರ ಮಾಡುವುದನ್ನು ದೇಶದ್ರೋಹ ಎಂದು ಪರಿಗಣಿಸಿ ದೇಶಾದ್ಯಂತ ಒಂದೇ ರೀತಿಯ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ದೇಶಕ್ಕೆ ಯಾರು ಕೂಡ ರಾಷ್ಟ್ರಪಿತರಿಲ್ಲ
ಈ ದೇಶಕ್ಕೆ ಯಾರು ಕೂಡ ತಂದೆಯ ಸಮಾನರಿಲ್ಲ. ರಾಷ್ಟ್ರಪಿತ ಅನ್ನುವ ಪರಿಕಲ್ಪನೆಯೇ ತಪ್ಪು. ದೇಶಕ್ಕೆ ಮಗ ಇರಬಹುದು. ದೇಶಕ್ಕೆ ತಂದೆ ಇರುವುದಿಲ್ಲ. ಕ್ರಾಂತಿಕಾರಿ ಸುಭಾಶ್ಚಂದ್ರ ಬೋಸರು ಮೊದಲ ಪ್ರಧಾನಿ ಆಗಬೇಕಿತ್ತು. ಅವರನ್ನು ಭಾರತದ ನಾಯಕನೆಂದು ಹಲವು ದೇಶಗಳು ಒಪ್ಪಿಕೊಂಡಿದ್ದವು. ಬೋಸರ ಹೆಸರನ್ನೇ ಮೊದಲ ಪ್ರಧಾನಿ ಸ್ಥಾನಕ್ಕೆ ಹೆಸರಿಸಲಾಗಿತ್ತು. ಹಾಗಾಗಿ ಬೋಸರನ್ನೇ ಭಾರತದ ಮೊದಲ ಪ್ರಧಾನ ಮಂತ್ರಿಯೆಂದು ಘೋಷಿಸಬೇಕು. ಇತಿಹಾಸಕಾರರು ಮಾಡಿದ ತಪ್ಪಿನಿಂದಾಗಿ ಇಂದಿನ ಜನರು ಇತಿಹಾಸದ ತಪ್ಪುಗಳನ್ನೇ ಸತ್ಯವೆಂದು ಭಾವಿಸಿದ್ದಾರೆ ಎಂದು ನರೇಂದ್ರಾನಂದ ಸರಸ್ವತಿ ಹೇಳಿದರು.
ಒವೈಸಿಯನ್ನು ಯಾಕೆ ಜೈಲಿಗೆ ಹಾಕಿಲ್ಲ ?
ನಿರಂಜನ ಅಖಾಡದ ಮಹಾಮಂಡಲೇಶ್ವರ ಅನ್ನಪೂರ್ಣ ಭಾರತಿ ಮಾತನಾಡಿ, ಕಳೆದ ಬಾರಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಕೆಲವರು ತಮ್ಮ ಸ್ವಧರ್ಮ ರಕ್ಷಣೆಗಾಗಿ ನೀಡಿದ್ದ ಹೇಳಿಕೆಗಾಗಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಇದರಿಂದ ನಿರ್ದಿಷ್ಟ ಸಮುದಾಯ, ಧರ್ಮದ ಜನರ ಭಾವನೆಗಳನ್ನು ಅವಮಾನಿಸಲಾಗಿದೆ. ಇದೇ ನೀತಿಯಾದರೆ, ಬರೇಲಿಯಲ್ಲಿ 20 ಸಾವಿರ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ತಕೀರ್ ರಾಜಾ ಎಂಬವರು ಸನಾತನ ಧರ್ಮೀಯರನ್ನು ತುಚ್ಛವಾಗಿ ಮಾತನಾಡಿದ್ದು, ಮುಸ್ಲಿಮರಲ್ಲಿ ವಿಷ ಬೀಜ ಬಿತ್ತುವ ರೀತಿ ಮಾತನಾಡಿದ್ದು ನಮಗೆ ನೋವು ನೀಡಿಲ್ಲವೇ.. ಅದು ಕಾನೂನಿನಲ್ಲಿ ತಪ್ಪೆಂದು ಕಂಡಿಲ್ಲ ಯಾಕೆ..? ಒವೈಸಿ ಬಹಿರಂಗವಾಗಿ ಒಂದು ಧರ್ಮದ ಜನರನ್ನುದ್ದೇಶಿಸಿ ಬೆದರಿಕೆ ಹಾಕಿದ್ದ ವಿಡಿಯೋ ಇದ್ದರೂ ಅದನ್ನು ಯಾಕೆ ತಪ್ಪೆಂದು ಪರಿಗಣಿಸಿಲ್ಲ. ಅವರ ವಿರುದ್ಧ ಯಾಕೆ ಅದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
40 ಕೋಟಿ ಜನಸಂಖ್ಯೆ ಇದ್ದವರು ಅಲ್ಪಸಂಖ್ಯಾತರೇ..?
ಸ್ವಾಮಿ ಆನಂದ್ ಸ್ವರೂಪ್ ಮಾತನಾಡಿ, ದೇಶ ವಿಭಜನೆಯ ಸಂದರ್ಭದಲ್ಲಿ ದೇಶದಲ್ಲಿ 9 ಕೋಟಿ ಮುಸ್ಲಿಮರು ಇದ್ದರು. ಆದರೆ, ಈಗ ದೇಶದಲ್ಲಿ 40 ಕೋಟಿ ಮುಸ್ಲಿಮರು ಇದ್ದಾರೆ. ಹಾಗಿದ್ದರೂ ಅವರಿಗೆ ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿ ನೀಡಲಾಗಿದೆ. ನಮ್ಮ ದೇಶದಲ್ಲಿ ಸಂತ ಸಮ್ಮೇಳನ ನಡೆಸುವುದನ್ನು ನಿಷೇಧಿಸಲು ಅವರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣನೂ ಜೈಲಿನಲ್ಲಿ ಹುಟ್ಟಿದ್ದ. ಆದರೆ, ಆತನಿಗಾಗಿ ಜೈಲಿನ ಬಾಗಿಲು ತೆರೆದಿದ್ದವು. ಅದೇ ರೀತಿ ಸಂತರಿಗಾಗಿ ಬಾಗಿಲು ತೆರೆದುಕೊಳ್ಳಲಿದೆ. ಇಟ್ಟ ಗುರಿಯನ್ನು ಈಡೇರಿಸಲು ಬಾಗಿಲು ತೆರೆಯಲಿದೆ. ದೇಶದ ಬಹುತೇಕ ಎಲ್ಲ ಮುಸ್ಲಿಮರು ಕೂಡ ಹಿಂದುಗಳೇ. ಅವರೆಲ್ಲ ಮತಾಂತರಗೊಂಡು ಮುಸ್ಲಿಂ ಆಗಿದ್ದಾರೆ. ದೇಶದಲ್ಲಿರುವ ಮುಸ್ಲಿಮರು ಮತ್ತು ಹಿಂದುಗಳಲ್ಲಿ ಹರಿಯುವ ರಕ್ತ ಒಂದೇ ಎಂದು ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಹೇಳಿದರು.
The Dharma Sansad in the ongoing Magh Mela in Prayagraj, Uttar Pradesh had 'demanded' that India should be declared a Hindu Rashtra, Subhash Chandra Bose should be named as the first Prime Minister of the country.
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm