ಬ್ರೇಕಿಂಗ್ ನ್ಯೂಸ್
31-01-22 10:45 pm HK Desk news ದೇಶ - ವಿದೇಶ
ತಿರುವನಂತಪುರ, ಜ.31 : ಕೇರಳದ ಮೀಡಿಯಾ ವನ್ ಮಲಯಾಳಂ ಸುದ್ದಿ ವಾಹಿನಿಯ ಪ್ರಸಾರಕ್ಕೆ ಕೇಂದ್ರ ಸರಕಾರ ಭದ್ರತಾ ಕಾರಣವೊಡ್ಡಿ ತಡೆ ಒಡ್ಡಿದೆ. ಆದರೆ, ಮೀಡಿಯಾ ವನ್ ಸಂಸ್ಥೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಎರಡು ದಿನಕ್ಕೆ ರಿಲೀಫ್ ಕೊಟ್ಟಿದೆ.
ಮೀಡಿಯಾ ವನ್ ವಾಹಿನಿಯು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಜಮಾತ್ ಇ-ಇಸ್ಲಾಮಿ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಕಾರಣವೊಡ್ಡಿ ವಾಹಿನಿಯ ಪ್ರಸಾರದ ಹಕ್ಕನ್ನು ನವೀಕರಣ ಮಾಡಿರಲಿಲ್ಲ ಎನ್ನಲಾಗುತ್ತಿದೆ. ಮೀಡಿಯಾ ವನ್ ವಾಹಿನಿಯನ್ನು ಪ್ರಸಾರ ಮಾಡುತ್ತಿದ್ದ ಮಾಧ್ಯಮಂ ಬ್ರಾಡ್ ಕಾಸ್ಟಿಂಗ್ ಸಂಸ್ಥೆಗೆ ನೀಡಿದ್ದ ಹತ್ತು ವರ್ಷಗಳ ಪ್ರಸಾರದ ಹಕ್ಕು 2021ರ ಸೆಪ್ಟಂಬರ್ ತಿಂಗಳಿಗೆ ಕೊನೆಯಾಗಿದ್ದು, ಅದನ್ನು ನವೀಕರಣ ಮಾಡಲು ಕೇಂದ್ರ ನಿರಾಕರಿಸಿತ್ತು. ಇದೀಗ ಪ್ರಸಾರ ತಡೆಯುವಂತೆ ಮಾಹಿತಿ ಮತ್ತು ಪ್ರಸಾರ ಖಾತೆಯಿಂದ ಆದೇಶ ಮಾಡಲಾಗಿತ್ತು. ಈ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ವಿಚಾರಣೆ ದಿನಾಂಕ ಫೆ.2ರ ವರೆಗೆ ಮೀಡಿಯಾ ವನ್ ಸಂಸ್ಥೆಯ ಪ್ರಸಾರ ತಡೆಯುವ ಕೇಂದ್ರ ಸರಕಾರದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಮಾಧ್ಯಮಂ ಸಂಸ್ಥೆಯನ್ನು ಭಾರತದಲ್ಲಿ ನಿಷೇಧ ಆಗಿರುವ ಜಮಾತ್ ಇ- ಇಸ್ಲಾಮಿ ಸಂಘಟನೆಯು ನಡೆಸುತ್ತಿದೆ ಎನ್ನುವ ಮಾಹಿತಿಗಳಿವೆ. ಈ ಬಗ್ಗೆ ಕಳೆದ ಜುಲೈನಲ್ಲಿ ಕೇರಳದ ಪತ್ರಕರ್ತರೊಬ್ಬರು, ಕೆಲವು ರಹಸ್ಯ ಮಾಹಿತಿಗಳನ್ನು ಬಹಿರಂಗ ಮಾಡಿದ್ದರು. ಅದರಂತೆ, ಸೌದಿ ಅರೇಬಿಯಾದ ಯೂನಿವರ್ಸಿಟಿಗಳು ಜಮಾತೆ ಇಸ್ಲಾಮಿ ಸಂಘಟನೆಗೆ ಭಾರೀ ಪ್ರಮಾಣದ ಫಂಡಿಂಗ್ ಮಾಡುತ್ತಿದೆ. ಭಾರತವನ್ನು ಇಸ್ಲಾಮಿಕ್ ಮಾಡುವ ಉದ್ದೇಶದಿಂದ ಈ ಹಣವನ್ನು ಜಮಾತ್ ಸಂಘಟನೆ ಪಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿಗಳನ್ನು ನೀಡಿದ್ದರು. ಇದೀಗ ಕೇರಳದಲ್ಲಿ ಮೀಡಿಯಾ ವನ್ ಸಂಸ್ಥೆಯನ್ನು ಜಮಾತೆ ಇಸ್ಲಾಮಿ ಸಂಘಟನೆ ನಡೆಸುತ್ತಿದೆ ಎನ್ನುವ ಮಾಹಿತಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಅದರ ಪ್ರಸಾರದ ಹಕ್ಕನ್ನೇ ಕಸಿದುಕೊಂಡಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೇವಲ ಭದ್ರತಾ ಕಾರಣಗಳನ್ನು ಮುಂದಿಟ್ಟು ಲೈಸನ್ಸ್ ನವೀಕರಣ ಮಾಡಲಾಗುತ್ತಿಲ್ಲ ಎಂದು ಹೇಳಿತ್ತು.
ಜಮಾತೆ ಇಸ್ಲಾಮಿ ಸಂಘಟನೆಯನ್ನು ಭಾರತದಲ್ಲಿ 2019ರ ಫೆಬ್ರವರಿ 28ರಂದು ನಿಷೇಧ ಮಾಡಲಾಗಿತ್ತು. ಪುಲ್ವಾಮಾ ದಾಳಿ ಘಟನೆಗೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಿಂದ ಫಂಡಿಂಗ್ ಮಾಡಲಾಗಿತ್ತು ಅನ್ನುವ ಮಾಹಿತಿಗಳಿದ್ದವು. ಅದೇ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಸಂಘಟನೆಯ ಫಂಡಿಂಗ್ ವಿಚಾರ ತಿಳಿದು ನಿಷೇಧ ಹೇರಲಾಗಿತ್ತು.
ಕೇಂದ್ರ ಪ್ರಸಾರ ಹಕ್ಕು ತಡೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೀಡಿಯಾ ವನ್ ವಾಹಿನಿಯ ಸಂಪಾದಕ ಪ್ರಮೋದ್ ರಮಣ್, ಭದ್ರತಾ ಕಾರಣಗಳನ್ನು ಮುಂದಿಟ್ಟು ನಿಷೇಧ ಹಾಕಿರುವ ಬಗ್ಗೆ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಆದರೆ ಈ ಕುರಿತು ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ. ಈ ಬಗ್ಗೆ ಕಾನೂನು ಹೋರಾಟ ಕೈಗೆತ್ತಿಕೊಂಡಿದ್ದು, ಅದರ ಪ್ರಕ್ರಿಯೆ ನಡೆದ ಬಳಿಕ ನಾವು ಪ್ರಸಾರವನ್ನು ಮತ್ತೆ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಬಾರಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ವಿವಾದಾತ್ಮಕ ರೂಪದಲ್ಲಿ ಪ್ರಸಾರ ಮಾಡಲಾಗಿತ್ತು ಅನ್ನುವ ಆರೋಪದ ಹಿನ್ನೆಲೆಯಲ್ಲಿ ಮೀಡಿಯಾ ವನ್ ಮತ್ತು ಏಶ್ಯಾನೆಟ್ ಮಲಯಾಳದ ವಿರುದ್ಧ 2020ರಲ್ಲಿ 48 ಗಂಟೆಗಳ ನಿಷೇಧ ಹೇರಲಾಗಿತ್ತು. ಸದ್ಯದ ಕಾನೂನಿನ ಪ್ರಕಾರ, ಖಾಸಗಿ ಸುದ್ದಿ ವಾಹಿನಿಗಳು ಗೃಹ ಸಚಿವಾಲಯದಿಂದ ಸೆಕ್ಯುರಿಟಿ ಕ್ಲಿಯರೆನ್ಸ್ ಪಡೆಯಬೇಕು. ಅದನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ಸಲ್ಲಿಸಿ ಹತ್ತು ವರ್ಷಗಳ ಪ್ರಸಾರಕ್ಕೆ ಅನುಮತಿ ಪಡೆಯಬೇಕು. ಆದರೆ ಮೀಡಿಯಾ ವನ್ ಸಂಸ್ಥೆಗೆ ಗೃಹ ಸಚಿವಾಲಯದಿಂದ ಸೆಕ್ಯುರಿಟಿ ಕ್ಲಿಯರೆನ್ಸ್ ಕೊಟ್ಟಿಲ್ಲ ಎನ್ನಲಾಗುತ್ತಿದೆ.
The Union government on Monday barred the telecast of Malayalam news channel MediaOne citing "security reasons", but the Kerala High Court stayed the implementation of the order for two days.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm