ಬಜೆಟ್ 2022; LPG ಸಿಲಿಂಡರ್‌ ಬೆಲೆ 91.50 ರೂ. ಕಡಿತ ! 

01-02-22 01:27 pm       HK Desk news   ದೇಶ - ವಿದೇಶ

ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, 19 ಕೆಜಿಯ ಪ್ರತೀ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ.

ನವದೆಹಲಿ, ಫೆ 01: ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, 19 ಕೆಜಿಯ ಪ್ರತೀ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ.

ಎಲ್​ಪಿಜಿ ಸಿಲಿಂಡರ್​ಗಳ ನವೀಕೃತ ಬೆಲೆಯನ್ನು ತೈಲು ಮಾರುಕಟ್ಟೆ ಕಂಪನಿಗಳು (OMCs)ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆ 1,907 ರೂಪಾಯಿ ಆಗಿದೆ.

ಡಿಸೆಂಬರ್​ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್​, ಹೋಟೆಲ್​ ಮಾಲೀಕರಿಗೆ ನಿರಾಳತೆ ಮೂಡಿಸಿದೆ.

ಡಿಸೆಂಬರ್​ 1ರಂದು 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆ 100 ರೂಪಾಯಿ ಏರಿಕೆಯಾಗಿತ್ತು. ಅಲ್ಲಿಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2101 ರೂಪಾಯಿ ಆಗಿತ್ತು. ಡಿಸೆಂಬರ್​​ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 2101 ರೂಪಾಯಿ ಆಗಿದ್ದು ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿತ್ತು. 2012-13ರಲ್ಲಿ 2,200ರೂ.ಗೆ ತಲುಪಿದ ಮೇಲೆ ಅಷ್ಟೆಲ್ಲ ಏರಿಕೆಯಾಗಿರಲಿಲ್ಲ.

ಆದರೆ ಜನವರಿ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 102.50 ರೂಪಾಯಿ ಕಡಿತಗೊಳಿಸಿದರೂ, ಸಿಲಿಂಡರ್​ ಬೆಲೆ 2 ಸಾವಿರ ರೂಪಾಯಿ ಮೇಲ್ಪಟ್ಟೇ ಇತ್ತು. ಇನ್ನು ಸಬ್ಸಿಡಿ ರಹಿತ (14.KG) ಇಂಡೇನ್​ ಎಲ್​ಪಿಜಿ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 899.50 ರೂಪಾಯಿ ಇದೆ. ಮುಂಬೈನಲ್ಲಿ ಈ ಬೆಲೆ ದೆಹಲಿಯಲ್ಲದ್ದಷ್ಟೇ ಇದ್ದರೆ, ಕೋಲ್ಕತ್ತದಲ್ಲಿ 14 ಕೆಜಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ ಬೆಲೆ 926 ರೂಪಾಯಿ ಇದೆ ಎಂದು ತಿಳಿದುಬಂದಿದೆ.

LPG Cylinder Rates- Hours ahead of Union Budget 2022, when Finance Minister Nirmala Sitharaman is ready for presenting the paperless budget in the parliament today. In a big relief to all, the prices of LPG Cylinders have been slashed.