ಕರ್ನಾಟಕದ ಹಿಜಾಬ್ ಹೋರಾಟಕ್ಕೆ ತಾಲಿಬಾನ್ ಉಗ್ರರ ಬೆಂಬಲ ! ಹಿಜಾಬ್ ಸಂಸ್ಕೃತಿ, ಧಾರ್ಮಿಕ ಮೌಲ್ಯ ಎಂದ ತಾಲಿಬಾನ್ ವಕ್ತಾರ !  

13-02-22 04:06 pm       HK Desk news   ದೇಶ - ವಿದೇಶ

ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು ಹೊತ್ತಿಕೊಂಡಿರುವ ಮಧ್ಯೆಯೇ ಜಗತ್ತಿನಲ್ಲಿ ಉಗ್ರವಾದಿಗಳ ರಾಷ್ಟ್ರ ಎಂದೇ ಗುರುತಿಸಿರುವ ತಾಲಿಬಾನ್, ಹಿಜಾಬ್ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು ಹೋರಾಟಗಾರರ ಪರ ಟ್ವೀಟ್ ಮಾಡಿದೆ. 

ನವದೆಹಲಿ, ಫೆ.13 : ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು ಹೊತ್ತಿಕೊಂಡಿರುವ ಮಧ್ಯೆಯೇ ಜಗತ್ತಿನಲ್ಲಿ ಉಗ್ರವಾದಿಗಳ ರಾಷ್ಟ್ರ ಎಂದೇ ಗುರುತಿಸಿರುವ ತಾಲಿಬಾನ್, ಹಿಜಾಬ್ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು ಹೋರಾಟಗಾರರ ಪರ ಟ್ವೀಟ್ ಮಾಡಿದೆ. 

ತಾಲಿಬಾನ್ ಸರಕಾರದ ವಕ್ತಾರ ಇನಾಮುಲ್ಲಾ ಸಮಾಂಗನಿ ಎಂಬಾತ ಈ ಬಗ್ಗೆ ಟ್ವೀಟ್ ಮಾಡಿದ್ದು ಮುಸ್ಲಿಂ ಯುವತಿಯರ ಧಾರ್ಮಿಕ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಆದ್ಯತೆ ಎಂದು ಹೇಳಿದ್ದಾನೆ. ಇದೊಂದು ಹಿಜಾಬ್ ಪರವಾದ ಹೋರಾಟ. ಹಿಜಾಬ್ ಅನ್ನುವುದು ಸಂಸ್ಕೃತಿ. ಅದು ಅರಬ್, ಇರಾನಿ, ಈಜಿಪ್ಟ್ ಅಥವಾ ಪಾಕಿಸ್ಥಾನಿ ಸಂಸ್ಕೃತಿ ಅಲ್ಲ. ಅದು ಇಸ್ಲಾಂ ಧರ್ಮದ ಮೌಲ್ಯ ಎಂದು ಬಣ್ಣಿಸಿದ್ದಾನೆ. 

ತಾಲಿಬಾನ್ ಆಡಳಿತದಲ್ಲಿ ಯಾವುದೇ ಮಹಿಳೆಗೂ ಸ್ಥಾನ ನೀಡಿಲ್ಲ.‌ ಅಷ್ಟೇ ಅಲ್ಲ, ಅಲ್ಲಿನ ಮಹಿಳೆಯರು ಶಿಕ್ಷಣ ಪಡೆಯುವಂತಿಲ್ಲ. ಒಬ್ಬಂಟಿ ತಿರುಗಾಡುವಂತಿಲ್ಲ. ಹೊರಗೆ ಹೋಗುವಾಗ ಜೊತೆಗೆ ಪುರುಷನ ಸಹಚರ್ಯ ಇರಲೇಬೇಕು. ಮಹಿಳೆಯ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ, ಕೈದಿಗಳ ರೀತಿ ನೋಡುವ ತಾಲಿಬಾನ್, ಭಾರತದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಮರುಕ ಪಟ್ಟು ಟ್ವೀಟ್ ಮಾಡಿರುವುದು, ಕರ್ನಾಟಕದ ಹಿಜಾಬ್ ಹೋರಾಟಕ್ಕೆ ಬೆಂಬಲ‌ ಸಾರಿರುವುದು ಸಹಜವಾಗೇ ಕುತೂಹಲಕ್ಕೆ ಕಾರಣವಾಗಿದೆ.

Amid the ongoing Hijab row in India, the Taliban has now waded into the controversy and backed the Hijab-wearing protestors in Karnataka. Taliban's Deputy spokesperson Inamullah Samangani took to Twitter and hailed the Muslim girls for wearing the Hijab and "defending their religious value".