ಖ್ಯಾತ ಗಾಯಕ, ಬಾಲಿವುಡ್‌ ಚಿತ್ರರಂಗದ ಗೋಲ್ಡ್ ಮ್ಯಾನ್ ಬಪ್ಪಿ ಲಹಿರಿ ನಿಧನ 

16-02-22 11:31 am       HK Desk news   ದೇಶ - ವಿದೇಶ

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶರಾದರು. ನವೆಂಬರ್ 27, 1952ರಲ್ಲಿ ಕೋಲ್ಕತ್ತಾದಲ್ಲಿ ಬಪ್ಪಿ ಲಹರಿ ಜನಿಸಿದ್ದರು.

ಮುಂಬೈ, ಫೆ 16 : ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶರಾದರು. ನವೆಂಬರ್ 27, 1952ರಲ್ಲಿ ಕೋಲ್ಕತ್ತಾದಲ್ಲಿ ಬಪ್ಪಿ ಲಹರಿ ಜನಿಸಿದ್ದರು.

69 ವರ್ಷದ ಬಪ್ಪಿ ಲಹರಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸಂಗೀತ ನಿರ್ದೇಶಕ ಬಪ್ಪಿ ಲಹರಿ ತಮ್ಮ ವಿವಿಧ ಹಾಡುಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದರು. ಚಲ್ತೆ-ಚಲ್ತೆ, ಡಿಸ್ಕೋ ಡ್ಯಾನ್ಸರ್‌ ಸೇರಿದಂತೆ ವಿವಿಧ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.

Bappi Lahiri's last Instagram post, shared 2 days before his death, was a  reminder that 'old is always gold'. See here | Entertainment News,The  Indian Express

Bappi Lahiri, composer who popularised disco music in Bollywood, dies at 69

1970ರ ದಶಕದಲ್ಲಿ ಬಾಲಿವುಡ್‌ಗೆ ಡಿಸ್ಕೋ ಮತ್ತು ರಾಕ್‌ ಸಂಗೀತವನ್ನು ಪರಿಚಯಿಸಿದ ಖ್ಯಾತಿ ಬಪ್ಪಿ ಲಹರಿ ಅವರದ್ದು. 1952ರ ನವೆಂಬರ್ 27ರಂದು ಕೋಲ್ಕತ್ತಾದಲ್ಲಿ ಬಪ್ಪಿ ಲಹರಿ ಜನಿಸಿದ್ದರು. ತಮ್ಮ ವಿಶಿಷ್ಟವಾದ ಸಂಗೀತ ಶೈಲಿ ಇಂದ ಪ್ರಸಿದ್ಧಿ ಪಡೆದಿದ್ದ ಬಪ್ಪಿ ಲಹರಿ ಚಿನ್ನಾಭರಣ ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದರು. ಅವರು ಅಷ್ಟೊಂದು ಆಭರಣಗಳನ್ನು ಧರಿಸಲು ಕಾರಣವೇನು? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

Film History Pics on Twitter: "Birthday wishes to BAPPI LAHIRI: Born as  Alokesh Lahiri, child prodigy, disco king, singer, percussionist & Tabla  player. He became an independent composer at 20 with Bengali

Lata Mangeshkar wishes Bappi Lahiri on birthday; treats fans with his  childhood pics

ಬಪ್ಪಿ ಲಹರಿ 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ 967 ಗ್ರಾಂ ಚಿನ್ನ, 8.9 ಕೆ. ಜಿ. ಬೆಳ್ಳಿ, 4 ಕೋಟಿ ರೂ. ಮೌಲ್ಯದ ವಜ್ರವಿದೆ ಎಂದು ಹೇಳಿದ್ದರು. ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಹಲವು ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆದರೆ ಅವರ ಜನಪ್ರಿಯತೆ ರಾಜಕೀಯ ವಲಯದಲ್ಲಿ ಕೆಲಸ ಮಾಡಲಿಲ್ಲ.

Film History Pics on Twitter: "Birthday wishes to BAPPI LAHIRI: Born as  Alokesh Lahiri, child prodigy, disco king, singer, percussionist & Tabla  player. He became an independent composer at 20 with Bengali

2014ರಲ್ಲಿ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದು ಅವರು ಸೋಲು ಕಂಡಿದ್ದರು. ಬಪ್ಪಿ ಲಹರಿ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಶಿಕ್ಷಣ ಪಡೆದರು. ಅವರ ತಂದೆ ಅಪರೇಶ್ ಲಾಹಿರಿ ಬಂಗಾಳಿ ಗಾಯಕ ಹಾಗೂ ತಾಯಿ ಬನ್ಸಾರಿ ಲಾಹಿರಿ ಕೂಡ ಸಂಗೀತಗಾರ್ತಿ.

Music composer and singer Bappi Lahiri, who popularised disco music in India in the 80s and 90s, died at Mumbai's CritiCare Hospital today. He was 69. Bappi Lahiri delivered popular songs in several films of the late 1970s-80s like 'Chalte Chalte', 'Disco Dancer', and 'Sharaabi'. His last Bollywood song titled Bhankas was for the 2020 film 'Baaghi 3'.