ಬ್ರೇಕಿಂಗ್ ನ್ಯೂಸ್
22-02-22 10:53 pm HK Desk news ದೇಶ - ವಿದೇಶ
ನವದೆಹಲಿ, ಫೆ.22 : ತನ್ನನ್ನು ತಾನು ಅಮೆರಿಕ ಮೂಲದ ಪತ್ರಕರ್ತ ಎಂದು ಹೇಳಿಕೊಳ್ಳುವ ಮತ್ತು ಮುಸ್ಲಿಂ ಉಗ್ರವಾದದ ಪರ ಸಹಾನುಭೂತಿ ಹೊಂದಿರುವ ವಿದೇಶಿ ವ್ಯಕ್ತಿಯೊಬ್ಬ ಕರ್ನಾಟಕದ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಎಂಬ ಯುವಕನನ್ನು ಹಿಂದು ಉಗ್ರ ಎಂದು ಟ್ವೀಟ್ ಮಾಡಿದ್ದ ಪೋಸ್ಟ್ ವೈರಲ್ ಆಗಿದೆ. ಆತನ ಟ್ವೀಟನ್ನು ವಿಶ್ವಾದ್ಯಂತ ಇರುವ ಮುಸ್ಲಿಮ್ ಫಾಲೋವರ್ ಗಳು ರೀಟ್ವೀಟ್ ಮಾಡಿದ್ದು, ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾಗುತ್ತಿದ್ದಂತೆ ಕರ್ನಾಟಕದ ಪೊಲೀಸ್ ಮುಖ್ಯಸ್ಥ ಡಿಜಿಪಿ ಪ್ರವೀಣ್ ಸೂದ್, ಆತನ ಆರೋಪವನ್ನು ಅಲ್ಲಗಳೆದಿದ್ದು, ತಪ್ಪು ಸುದ್ದಿ ಎಂದು ಆತನಿಗೇ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಬಾರಿ ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದ ಬಜರಂಗದಳ ಎಂಬ ಉಗ್ರವಾದಿ ಸಂಘಟನೆಗೆ ಸೇರಿದ ವ್ಯಕ್ತಿ ಕರ್ನಾಟಕದಲ್ಲಿ ಕೊಲೆಯಾಗಿದ್ದಾನೆ ಎಂದು ಸಿ.ಜೆ.ವರ್ಲ್ ಮನ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದ. ಇದನ್ನು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದ ಡಿಜಿಪಿ ಪ್ರವೀಣ್ ಸೂದ್, ಪೂರ್ತಿಯಾಗಿ ತಪ್ಪಾಗಿ ಬಿಂಬಿಸಲಾಗಿದೆ. ಈ ಕೊಲೆ ಘಟನೆಗೂ ತ್ರಿಪುರಾ ಘಟನೆಗಾಗಲೀ, ಉಗ್ರವಾದಕ್ಕಾಗಲೀ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಇದಲ್ಲದೆ, ವರ್ಲ್ ಮನ್ ತನ್ನ ಇತರ ಟ್ವೀಟ್ ಗಳಲ್ಲಿ ಬಜರಂಗದಳ ಸಂಘಟನೆಯನ್ನು ಅಮೆರಿಕದ ಸರಕಾರ ಉಗ್ರವಾದಿ ಸಂಘಟನೆಯೆಂದು ಘೋಷಿಸಿದ್ದಾಗಿ ಬರೆದುಕೊಂಡಿದ್ದಾನೆ. ಅಲ್ಲದೆ, ನಾಝಿಗಳಿಂದ ಪ್ರೇರಿತ ಬಜರಂಗದಳ ಯುಕೆ ಮತ್ತು ಅಮೆರಿಕದಲ್ಲಿಯೂ ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕಾಗಿ ಹರಡಿಕೊಂಡಿದೆ ಎಂದು ಬರೆದಿದ್ದಾನೆ. ಶಿವಮೊಗ್ಗದಲ್ಲಿ ನಡೆದಿರುವ ಕಲ್ಲು ತೂರಾಟದ ವಿಡಿಯೋವನ್ನು ಹಂಚಿಕೊಂಡು ಹಿಂದು ಗೂಂಡಾಗಳ ವರ್ತನೆ ನೋಡಿ, ಹಿಜಾಬ್ ಪರ ಹೋರಾಟಗಾರರಿಂದ ಕೊಲೆಯಾಗಿದ್ದಾನೆ ಎಂದು ಬಿಂಬಿಸಿ ಗಲಭೆ ನಡೆಸುತ್ತಿದ್ದಾರೆ ಎಂದು ಬರೆದಿದ್ದಾನೆ.
ವರ್ಲ್ ಮನ್ ಬಗ್ಗೆ ಮಾಹಿತಿ ಕೆದಕಿದರೆ ಆತನ ಬಗ್ಗೆ ಖಚಿತ ಮಾಹಿತಿಗಳು ಸಿಗುವುದಿಲ್ಲ. ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಎನ್ನುವ ಮಾಹಿತಿ ಗೂಗಲ್ ನಲ್ಲಿದೆ. ಹಿಂದೊಮ್ಮೆ ಶೇಖರ್ ಗುಪ್ತಾ ಅವರ ದಿ ಪ್ರಿಂಟ್ ಅನ್ನುವ ವೆಬ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆನಂತರ, ತನ್ನ ಪ್ರೊಫೈಲ್ ನಲ್ಲಿ ಕಾಲಮಿಸ್ಟ್ ಎಂದು ಹಾಕ್ಕೊಂಡಿದ್ದ. ಕಳೆದ 2021ರ ನವೆಂಬರ್ ತಿಂಗಳಲ್ಲಿ ಭಾರತ ಮತ್ತು ಕಾಶ್ಮೀರದ ಮುಸ್ಲಿಮರ ಪರ ನಿಲ್ಲುವುದಕ್ಕಾಗಿ ಭಾರತದ ಸಾಮಗ್ರಿಗಳನ್ನು ಬಹಿಷ್ಕರಿಸುವಂತೆ ಕರೆ ಕೊಟ್ಟಿದ್ದ. ಇದರ ನಡುವೆ, ಕರ್ನಾಟಕದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಸ್ಲಿಮರ ಬಗ್ಗೆ ಕಿಡಿಕಾರುವ ವಿಡಿಯೋ ಒಂದನ್ನು ಷೇರ್ ಮಾಡಿ, ಮಸೀದಿಯನ್ನು ಒಡೆದು ಹಾಕಲು ಹೇಳುತ್ತಿರುವುದನ್ನು ಖಂಡಿಸಿ ಪೋಸ್ಟ್ ಮಾಡಿದ್ದ.
A terrorist belonging to the Hindu extremist group #BajrangDal, which carried out a wave of terrorist attacks against Muslims in Tripura in November, was killed in Karnataka - last night.
— CJ Werleman (@cjwerleman) February 21, 2022
ಕಳೆದ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಆಡಳಿತಕ್ಕೆ ಬಂದಾಗ, ತಾಲಿಬಾನ್ ಪರವಾಗಿ ಪೋಸ್ಟ್ ಹಾಕಿದ್ದ. ತಾಲಿಬಾನ್ ಪರ ಸಹಾನುಭೂತಿ ತೋರಿಸುವ ರೀತಿ ಅಲ್ಲಿನ ಪರಿಸ್ಥಿತಿಯ ಫೋಟೋಗಳನ್ನು ಷೇರ್ ಮಾಡಿದ್ದ. ಅಲ್ಲಿಂದ ತಪ್ಪಿಸಿಕೊಂಡು ಪಾರಾಗುವ ಯತ್ನದಲ್ಲಿ ವಿಮಾನದಿಂದ ಕೆಳಗೆ ಬೀಳುವ ಜನರ ವಿಡಿಯೋ ಹಂಚಿಕೊಂಡು, ತಾಲಿಬಾನ್ ಕೈಯಿಂದ ಪಾರಾಗಿ ಹೋಗಲು ಯಾರಿಂದಲೂ ಸಾಧ್ಯವಾಗದು ಎಂದು ಹೇಳಿಕೊಂಡಿದ್ದ. ತಾಲಿಬಾನ್ ಗೆ ಹೋಲಿಸಿದರೆ ಅಮೆರಿಕದಲ್ಲಿಯೇ ಕ್ರೈಮ್ ರೇಟ್ ಹೆಚ್ಚಿದೆ ಎಂದು ಹೇಳಿ ತಾಲಿಬಾನಿಗಳನ್ನು ಸಮರ್ಥಿಸಿದ್ದ.
Bajrang Dal is the youth wing of VHP, which the US government has identified as a “militant religious outfit” aka terrorist organization.https://t.co/azjFAW4Emy
— CJ Werleman (@cjwerleman) February 21, 2022
ಚೀನಾದ ಉಯಿಗುರ್ ಮುಸ್ಲಿಮರು, ಭಾರತದ ಮುಸ್ಲಿಮರು ಸೇರಿದಂತೆ ವಿಶ್ವಾದ್ಯಂತ ಇರುವ ಮುಸ್ಲಿಮರ ಬಗ್ಗೆ ಸಹಾನುಭೂತಿ ತೋರಿಸಿ ಪೋಸ್ಟ್ ಹಾಕುವ ವರ್ಲ್ ಮನ್ ನನ್ನು ಟ್ವಿಟರ್ ನಲ್ಲಿ ಎರಡು ಲಕ್ಷ 91 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ತನ್ನನ್ನು ತಾನು ಪತ್ರಕರ್ತ, ಗ್ಲೋಬಲ್ ಕರೆಸ್ಪಾಂಡೆಂಟ್ ಬೈಲೈನ್ ಟೈಮ್ಸ್, ಕಾಲಮಿಸ್ಟ್ ಎಂದು ಹೇಳಿಕೊಂಡಿದ್ದಾನೆ. ಪ್ರೊಫೈಲ್ ಹಿನ್ನೆಲೆಯಲ್ಲಿ ದಿ ಟ್ರಿಬ್ಯುನ್, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಫೋಟೋಗಳನ್ನು ಇಟ್ಟುಕೊಂಡಿದ್ದಾನೆ. ಅಲ್ಲದೆ, ಇಸ್ಲಾಮೋಫೋಬಿಯಾ ಹರಡುವುದರ ವಿರುದ್ಧ ಕಾರ್ಯನಿರ್ವಹಿಸುವ ಕಾರ್ಯಕರ್ತ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಇಂಥ ವ್ಯಕ್ತಿ ಶಿವಮೊಗ್ಗ ವಿಡಿಯೋ ಹಂಚಿದ್ದಲ್ಲದೆ, ಕೊಲೆಯಾದ ಯುವಕನನ್ನು ಉಗ್ರನೆಂದು ಬಿಂಬಿಸಿದ್ದು ಕನ್ನಡಿಗರ ಗಮನ ಸೆಳೆದಿದೆ.
Karnataka's police chief has called out a foreign journalist for referring to Harsha, the Bajrang Dal activist killed in Shivamogga on Sunday, as a "terrorist". Calling Harsha a "terrorist", journalist CJ Werleman had claimed in a tweet that Bajrang Dal was behind the communal violence that broke out in Tripura in October of last year.
"A terrorist belonging to the Hindu extremist group #BajrangDal, which carried out a wave of terrorist attacks against Muslims in Tripura in November, was killed in Karnataka - last night," Werleman wrote on Twitter
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm