ಕಡೆಗೂ ರಷ್ಯಾ ಯುದ್ಧ ಘೋಷಣೆ ; ಯುಕ್ರೇನ್ ನಗರಗಳ ಮೇಲೆ ಬಾಂಬ್, ಕ್ಷಿಪಣಿ ದಾಳಿ! ಏಟಿಗೆ ಎದಿರೇಟು ಎಂದ ಅಮೆರಿಕ, ಮೂಗುತೂರಿಸಲು ಬಂದ್ರೆ ನೆಟ್ಟಗಿರಲ್ಲ ಎಂದ ಪುತಿನ್

24-02-22 11:58 am       HK Desk news   ದೇಶ - ವಿದೇಶ

ಯುಕ್ರೇನ್ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಂದಿರುವ ರಷ್ಯಾ ಕಡೆಗೂ ಯುದ್ಧ ಘೋಷಣೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಟೆಲಿವಿಷನ್ ಒಂದರಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ.

ನವದೆಹಲಿ, ಫೆ.24 : ಯುಕ್ರೇನ್ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಂದಿರುವ ರಷ್ಯಾ ಕಡೆಗೂ ಯುದ್ಧ ಘೋಷಣೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಟೆಲಿವಿಷನ್ ಒಂದರಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅತ್ತ ಪುತಿನ್ ಘೋಷಣೆ ಹೊರಬೀಳುತ್ತಿದ್ದಂತೆ ಯುಕ್ರೇನ್ ರಾಜಧಾನಿ ಕೀವ್ ಮತ್ತು ರಷ್ಯಾ ಗಡಿಭಾಗದಿಂದ 35 ಕಿಮೀ ದೂರವಿರುವ ನಗರ ಖಾರ್ಕಿವ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಲಾಗಿದೆ. ಜನವಸತಿ ಇರುವ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಿದೆ.

ಪುತಿನ್ ಘೋಷಣೆ ಬೆನ್ನಲ್ಲೇ ಯುಕ್ರೇನ್ ತನ್ನ ಕೀವ್ ನಗರದಲ್ಲಿರುವ ಏರ್ಪೋರ್ಟ್ ನಲ್ಲಿ ವಿಮಾನಗಳು ಮತ್ತು ಜನರನ್ನು ಖಾಲಿ ಮಾಡಿದೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ತಮ್ಮ ವಿಮಾನಗಳನ್ನು ಅಲ್ಲಿಂದ ತೆರವು ಮಾಡಿದೆ. ಇದರ ನಡುವೆ ಯುಕ್ರೇನ್ ಕೂಡ ರಷ್ಯಾಕ್ಕೆ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ನಾವು ಸುಮ್ಮನೇ ಇರುವುದಿಲ್ಲ, ರಷ್ಯಾಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ಯುಕ್ರೇನ್ ಪ್ರತಿನಿಧಿಗಳು ಹೇಳಿದ್ದಾರೆ. ಕಳೆದೊಂದು ವಾರದಿಂದಲೂ ಯುಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಕಾರ್ಮೋಡ ಕವಿದಿತ್ತು. ಯುಕ್ರೇನ್ ಕಡೆಯಿಂದ ಜಗತ್ತಿನ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಸಹಾಯ ಯಾಚನೆ ಮಾಡಿದ್ದು, ಯುದ್ಧ ಭೀತಿಯಿಂದ ರಷ್ಯಾವನ್ನು ತಡೆಯುವಂತೆ ಮನವಿ ಮಾಡಿತ್ತು.

US President Joe Biden sure Putin will invade Ukraine - BusinessToday

ಆದರೆ, ಈ ನಡುವೆ ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ರಷ್ಯಾಕ್ಕೇ ಎಚ್ಚರಿಕೆ ರವಾನೆ ಮಾಡಿದ್ದವು. ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ರಷ್ಯಾ ಕಾರ್ಯಾಚರಣೆಯನ್ನು ಆತ್ಮಘಾತುಕ ಕೃತ್ಯ ಎಂದು ಹೇಳಿದ್ದಾರೆ. ಇದಕ್ಕೆ ಬೆಲೆ ತೆರಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೇ ವೇಳೆ, ಟೆಲಿವಿಶನ್ ಘೋಷಣೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ಪುತಿನ್, ಇದು ಯುಕ್ರೇನ್ ಒಳಗಿನ ಪ್ರತ್ಯೇಕತವಾದಿ ಶಕ್ತಿಗಳನ್ನು ಕೆಡಹುವ ಪ್ರಯತ್ನ ಅಷ್ಟೇ. ಇದಕ್ಕೆ ಹೊರಗಿನ ಶಕ್ತಿಗಳು ಕೈಹಾಕುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಾವು ಯುಕ್ರೇನ್ ದೇಶವನ್ನು ವಶಪಡಿಸುವ ಇರಾದೆ ಹೊಂದಿಲ್ಲ. ಆದರೆ ಅವರ ಮಿಲಿಟರಿ ಶಕ್ತಿಯನ್ನು ಶಕ್ತಿಹೀನ ಮಾಡುವ ಉದ್ದೇಶ ಹೊಂದಿದ್ದೇವೆ. ನಮಗೆ ಬೆದರಿಕೆ ಆಗುವಷ್ಟರ ಮಟ್ಟಿಗೆ ಯುಕ್ರೇನ್ ಬೆಳೆಯಬಾರದು. ಇದಕ್ಕಾಗಿ ಸ್ಪೆಷಲ್ ಮಿಲಿಟರಿ ಆಪರೇಶನ್ ಶುರು ಮಾಡಿದ್ದೇವೆ ಎಂದು ಪುತಿನ್ ಹೇಳಿದ್ದಾರೆ. ಯುಕ್ರೇನ್ ಮಿಲಿಟರಿ ಶಕ್ತಿಗಳು ಗಡಿಯಲ್ಲಿ ಜಮಾಯಿಸುವ ಅವಶ್ಯಕತೆ ಇಲ್ಲ. ಅವರು ಶಸ್ತ್ರ ಕೆಳಗಿಟ್ಟು ಮನೆಗೆ ಹೋಗಲಿ ಎಂದು ಪುತಿನ್ ಗುಡುಗಿದ್ದಾರೆ.

Ukraine-Russia crisis: who's winning the international influence war? |  Ukraine | The Guardian

ಹೊರಗಿನ ಶಕ್ತಿಗಳು ಮೂಗು ತೂರಿಸಬೇಡಿ

ಯಾವುದೇ ಬಾಹ್ಯ ಶಕ್ತಿಗಳು ನಮ್ಮ ನಡುವೆ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ. ಯಾರೇ ಆಗಲಿ, ಮೂಗು ತೂರಿಸಿಕೊಂಡು ಬಂದರೆ ನಿಮಗೆ ಇತಿಹಾಸದಲ್ಲೇ ಕಂಡರಿಯದ ರೀತಿ ತಿರುಗೇಟು ನೀಡಲಿದ್ದೇವೆ. ಹೀಗಾಗಿ ನೀವು ಈ ಬಗ್ಗೆ ನಿರ್ಧಾರಕ್ಕೆ ಬರುವ ಮುನ್ನ ಎಚ್ಚರಿಕೆ ವಹಿಸಿಕೊಳ್ಳಿ ಎಂದಿರುವ ಪುತಿನ್, ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಅಮೆರಿಕ ಸೇರಿದಂತೆ ನ್ಯಾಟೋ ಮಿತ್ರ ರಾಷ್ಟ್ರಗಳು ಈಗಾಗ್ಲೇ ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಆದರೆ, ರಷ್ಯಾ ಈ ನಿರ್ಬಂಧಗಳನ್ನು ಕಡೆಗಣಿಸಿದ್ದು, ಯುಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದೆ.

Putin's Ukraine ploy is all about fooling the folks back home

ಸೂಕ್ತ ಎದಿರೇಟು ನೀಡಲಿದ್ದೇವೆ – ಬಿಡೆನ್

ರಷ್ಯಾ ಅಧ್ಯಕ್ಷ ಪುತಿನ್ ಮಾತಿಗೆ ತೀವ್ರ ಎದಿರೇಟು ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಈ ಯುದ್ಧ ಮತ್ತು ಅದರಿಂದಾಗುವ ಆರ್ಥಿಕ ನಷ್ಟ, ಸಾವು- ನೋವುಗಳಿಗೆ ರಷ್ಯಾವೇ ಹೊಣೆ ಹೊರಬೇಕು. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸಂಯುಕ್ತ ರೀತಿಯಲ್ಲಿ ಎದಿರೇಟು ನೀಡಲಿದೆ. ಇದರ ಪರಿಣಾಮಗಳಿಗೆ ರಷ್ಯಾವೇ ಹೊಣೆಗಾರ ಎಂದು ಹೇಳಿದ್ದಾರೆ. ಆದರೆ ಜಗತ್ತಿನ ಜನರ ಪ್ರಾರ್ಥನೆಗಳು ಯುಕ್ರೇನ್ ಜನರ ಪರವಾಗಿರುತ್ತದೆ. ಯಾವುದೇ ಪ್ರಚೋದನೆ ಇಲ್ಲದೆ ದಾಳಿಗೆ ಮುಂದಾಗಿರುವ ರಷ್ಯನ್ ಪಡೆಗಳ ಕಾರಣದಿಂದಾಗಿ ಅಮಾಯಕ ಜನರು ಸಾವನ್ನಪ್ಪುವ ಸ್ಥಿತಿ ಬಂದಿದೆ. ಇದರಿಂದ ಭೀಕರ ದುರಂತ ಎದುರಾಗಬಹುದು ಎಂದು ಜೋ ಬಿಡೆನ್ ಹೇಳಿದ್ದಾರೆ.

ಈಗಾಗ್ಲೇ ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆಯಲ್ಲಿ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ರಷ್ಯಾ ಯುದ್ಧಕ್ಕೆ ಮುಂದಾಗದಂತೆ ಮನವಿಯನ್ನು ಮಾಡಿದ್ದವು. ಯುದ್ಧದಿಂದ ಜಗತ್ತಿಗೆ ಅಪಾಯ ಎದುರಾಗಬಹುದು. ಯಾವುದೇ ಸಂದರ್ಭದಲ್ಲೂ ಯುದ್ಧಕ್ಕೆ ಮುಂದಾಗಬೇಡಿ. ಏನೇ ಸಮಸ್ಯೆ ಇದ್ದರೂ ಅದನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳಿ ಎಂದು ಭಾರತ ಸಲಹೆ ಮಾಡಿತ್ತು. 15 ರಾಷ್ಟ್ರಗಳ ಪ್ರತಿನಿಧಿಗಳು ಬುಧವಾರವೂ ಸಭೆ ನಡೆಸಿದ್ದು, ಅದರಲ್ಲಿ ರಷ್ಯಾಕ್ಕೆ ಯುದ್ಧ ಮುಂದಾಗದಂತೆ ಮನವಿ ಮಾಡಿದ್ದವು. ಆದರೆ, ಸಭೆಯ ಬಳಿಕ ದಿಢೀರ್ ಆಗಿ ರಷ್ಯಾ ಅಧ್ಯಕ್ಷ ಯುಕ್ರೇನ್ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ.

Russian President Vladimir Putin announced today a military operation in Ukraine to defend separatists in the east of the country, called the Donbas region. "I have made the decision of a military operation," he said in a surprise statement on television shortly before 6 am. Weeks of intense diplomacy to avert war and the imposition of Western sanctions on Russia failed to deter Mr Putin, who had massed between 150,000 and 200,000 troops along the borders of Ukraine. Russia also called on Ukrainian soldiers to lay down their arms, and justified the invasion by claiming a "genocide" in Ukraine's east.