ಶಸ್ತ್ರ ನೀಡುತ್ತೇವೆ, ನಾಝಿಗಳ ರೀತಿಯ ರಷ್ಯಾ ಸೇನೆ ವಿರುದ್ಧ ಹೋರಾಡಿ ; ಪ್ರಜೆಗಳಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ

25-02-22 11:27 am       HK Desk news   ದೇಶ - ವಿದೇಶ

ರಷ್ಯಾ ಕಡೆಯಿಂದ ಬಾಂಬುಗಳ ಸುರಿಮಳೆ ಆಗುತ್ತಲೇ ಉಕ್ರೇನ್ ದೇಶದ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಮ್ಮ ದೇಶದ ಪ್ರಜೆಗಳಿಗೆ ಶಸ್ತ್ರ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದಾರೆ.

ನವದೆಹಲಿ, ಫೆ.24 : ರಷ್ಯಾ ಕಡೆಯಿಂದ ಬಾಂಬುಗಳ ಸುರಿಮಳೆ ಆಗುತ್ತಲೇ ಉಕ್ರೇನ್ ದೇಶದ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಮ್ಮ ದೇಶದ ಪ್ರಜೆಗಳಿಗೆ ಶಸ್ತ್ರ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದಾರೆ. ರಷ್ಯಾ ಆಕ್ರಮಣದ ವಿರುದ್ಧ ದೇಶವನ್ನು ರಕ್ಷಿಸಲು ಬಯಸುವ ಪ್ರಜೆಗಳಿಗೆ ಸರಕಾರದ ಕಡೆಯಿಂದ ಶಸ್ತ್ರಗಳನ್ನು ನೀಡುವುದಾಗಿ ಹೇಳಿದ್ದಾರೆ.

ರಷ್ಯಾ ಆಕ್ರಮಣದ ವಿರುದ್ಧ ಸೆಣಸಲು ಬಯಸುವ ಪ್ರಜೆಗಳು ಹೊರಗೆ ಬನ್ನಿ. ರಷ್ಯಾ ವಿರುದ್ಧ ಪ್ರತಿಭಟಿಸಿ. ತಮ್ಮ ಭೂಪ್ರದೇಶವನ್ನು ಉಳಿಸುವುದಕ್ಕಾಗಿ ಶಸ್ತ್ರ ಕೈಗೆತ್ತಿಕೊಂಡು ಹೋರಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಟ್ವೀಟ್ ನಲ್ಲಿ ಹೇಳಿದ್ದಾರೆ. ಇದಲ್ಲದೆ, ರಷ್ಯಾದ ದಾಳಿಯನ್ನು ಜರ್ಮನಿಯ ನಾಝಿಗಳ ದಾಳಿಗೆ ಹೋಲಿಸಿದ್ದಾರೆ. ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ನಾಝಿಗಳ ಸೈನ್ಯ ಮಾಡಿದಂತೆ ಯಾವುದೇ ಪ್ರಚೋದನೆ ಇಲ್ಲದೆ ರಷ್ಯಾ ಬೆಳ್ಳಂಬೆಳಗ್ಗೆ ದಾಳಿ ಆರಂಭಿಸಿದೆ. ರಷ್ಯಾವು ರಕ್ಕಸನ ರೀತಿ ಹಿಂಬಾಗಿಲಲ್ಲಿ ಬಂದು ಆಕ್ರಮಣ ಮಾಡಿದೆ. ಆದರೆ ನಮ್ಮ ದೇಶವು ಇದಕ್ಕೆ ಪ್ರತ್ಯುತ್ತರ ನೀಡಲಿದೆ. ಮಾಸ್ಕೋ ಎಣಿಸಿಕೊಂಡಂತೆ ಯಾವುದೂ ಆಗೋದಿಲ್ಲ. ನಮ್ಮ ಸ್ವಾತಂತ್ರ್ಯವನ್ನು ನಾವು ಬಿಟ್ಟುಕೊಡಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

Ukraine war necessary if Russia recognises breakaway regions - pro-Kremlin  MP | Reuters

ಕಳೆದೊಂದು ತಿಂಗಳಿಂದ ಗಡಿಯಲ್ಲಿ ಸೇನಾ ಜಮಾವಣೆಗೊಂಡು ಯುದ್ಧ ಸನ್ನದ್ಧ ಸ್ಥಿತಿಯಿದ್ದರೂ, ಗುರುವಾರ ಬೆಳಗ್ಗೆ ದಿಢೀರ್ ಆಗಿ ರಷ್ಯಾ ಅಧ್ಯಕ್ಷ ಪುತಿನ್ ಉಕ್ರೇನ್ ಮೇಲೆ ಯುದ್ಧ ಸಾರಿದ್ದರು. ಅಲ್ಲದೆ, ಆ ಕೂಡಲೇ ಉಕ್ರೇನ್ ದೇಶದ ನಾಲ್ಕು ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಆರಂಭಿಸಲಾಗಿತ್ತು. ಯುದ್ಧ ಘೋಷಣೆ ವೇಳೆ ಹೇಳಿಕೆ ನೀಡಿದ್ದ ಪುತಿನ್, ಉಕ್ರೇನ್ ಸೇನೆ ಶಸ್ತ್ರ ಕೆಳಗಿಟ್ಟು ಮನೆಗೆ ನಡೆಯಲಿ. ಅವರನ್ನು ನಿಶಸ್ತ್ರ ಮಾಡುವುದಷ್ಟೇ ನಮ್ಮ ಗುರಿ ಎಂದು ಹೇಳಿದ್ದಾರೆ. 

Ukrainian President Volodymyr Zelensky said the government will give weapons to all Ukrainian citizens who want to defend their country against Russian aggression.