ಉಕ್ರೇನಿಂದ 219 ಭಾರತೀಯರು ಮುಂಬೈಗೆ, ಆಪರೇಶನ್ ಗಂಗಾ ಶುರು ; ಪಶ್ಚಿಮ ಬಂಗಾಳದಿಂದ ಉಚಿತ ಟಿಕೆಟ್ ವ್ಯವಸ್ಥೆ

26-02-22 10:47 pm       HK Desk news   ದೇಶ - ವಿದೇಶ

ಉಕ್ರೇನಲ್ಲಿ ಜೀವ ಭಯದಲ್ಲಿ ಸಿಲುಕಿದ್ದ ಭಾರತದ 219 ಮಂದಿಯನ್ನು ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಕರೆ ತರಲಾಗಿದೆ. ಅದರಲ್ಲಿ 19 ಮಂದಿ ಕನ್ನಡಿಗರು ಇದ್ದಾರೆ ಎಂಬ ಮಾಹಿತಿಯಿದೆ. ಮುಂಬೈಗೆ ಆಗಮಿಸಿದ ಭಾರತೀಯ ಪ್ರಜೆಗಳನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ವಾಗತಿಸಿದ್ದಾರೆ.

ನವದೆಹಲಿ, ಫೆ.26 : ಉಕ್ರೇನಲ್ಲಿ ಜೀವ ಭಯದಲ್ಲಿ ಸಿಲುಕಿದ್ದ ಭಾರತದ 219 ಮಂದಿಯನ್ನು ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಕರೆ ತರಲಾಗಿದೆ. ಅದರಲ್ಲಿ 19 ಮಂದಿ ಕನ್ನಡಿಗರು ಇದ್ದಾರೆ ಎಂಬ ಮಾಹಿತಿಯಿದೆ. ಮುಂಬೈಗೆ ಆಗಮಿಸಿದ ಭಾರತೀಯ ಪ್ರಜೆಗಳನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ವಾಗತಿಸಿದ್ದಾರೆ.

ಎಲ್ಲ ಭಾರತೀಯರನ್ನು ಮರಳಿ ಕರೆತರುವುದು ನಮ್ಮ ಗುರಿ. ಈಗ 219 ಮಂದಿ ಬಂದಿದ್ದಾರೆ. ಸದ್ಯದಲ್ಲೇ ಇನ್ನೊಂದು ವಿಮಾನ ದೆಹಲಿಗೆ ಬರಲಿದೆ. ಅಲ್ಲಿರುವ ಎಲ್ಲ ಭಾರತೀಯರನ್ನು ಕರೆತರುವ ವರೆಗೂ ನಮ್ಮ ಆಪರೇಶನ್ ಗಂಗಾ ಯೋಜನೆ ಮುಂದುವರಿಯಲಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಯುದ್ಧ ಪೀಡಿತ ಉಕ್ರೇನ್ ದೇಶದಿಂದ ಭಾರತೀಯರನ್ನು ತಾಯ್ನಾಡಿಗೆ ತರುತ್ತಿರುವ ಪ್ರಯತ್ನಕ್ಕೆ ಆಪರೇಶನ್ ಗಂಗಾ ಎನ್ನುವ ಹೆಸರಿಡಲಾಗಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಬಗ್ಗೆ ಟ್ವೀಟ್ ಮಾಡಿದ್ದು ತಾಯ್ನಾಡಿಗೆ ಸ್ವಾಗತ, ಇದು ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದವರಿಗೆ ಉಚಿತ ಟಿಕೆಟ್

ಇದೇ ವೇಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉಕ್ರೇನ್ ದೇಶದಲ್ಲಿ ಸಿಕ್ಕಿಬಿದ್ದಿರುವ ತನ್ನ ರಾಜ್ಯದ ಜನರಿಗೆ ಉಚಿತ ಟಿಕೆಟ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ತಮ್ಮ ರಾಜ್ಯದ 199 ಮಂದಿ ಉಕ್ರೇನ್ ದೇಶದಲ್ಲಿದ್ದಾರೆ. ಅವರನ್ನು ಕರೆತರುವ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಜೊತೆಗೆ ವ್ಯವಹರಿಸಿದ್ದೇವೆ. ಅವರಿಗೆ ಮರಳಿ ಬರಲು ಉಚಿತ ವಿಮಾನ ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 

Ukrainian President Volodymyr Zelensky on Saturday spoke to Prime Minister Narendra Modi regarding the situation in Ukraine. He also urged India to extend political support in the United Nations Security Council. “Spoke with Prime Minister @narendramodi. Informed of the course of Ukraine repulsing Russian aggression. More than 100,000 invaders are on our land.