ಯುಕ್ರೇನ್ ಬಿಟ್ಟು ಬರಲ್ಲ.. ತಾಯಿ ಹೇಳಿದರೂ ಹಠಕ್ಕೆ ಬಿದ್ದ ಹರ್ಯಾಣದ ಹುಡುಗಿ ! ಬಂಕರಿನಡಿ ಅಡಗಿರುವ 17ರ ಯುವತಿಯ ಹಠಕ್ಕೇನು ಕಾರಣ ಗೊತ್ತಾ..!

27-02-22 09:08 pm       HK Desk news   ದೇಶ - ವಿದೇಶ

ಆಕೆಗೆ ಕೇವಲ 17ರ ಹರೆಯ. ಹರ್ಯಾಣ ಮೂಲದ ಹುಡುಗಿ. ಮೆಡಿಕಲ್ ಕಲಿಯಬೇಕೆಂಬ ಇಚ್ಛೆಯಿಂದ ಸಣ್ಣ ವಯಸ್ಸಿನಲ್ಲಿಯೇ ಉಕ್ರೇನ್ ರಾಜಧಾನಿ ಕೀನ್ ನಗರಕ್ಕೆ ತೆರಳಿದ್ದಳು. ಅದಕ್ಕೆ ಕಾರಣವಾಗಿದ್ದು ಉಕ್ರೇನಿನ ಯುದ್ಧ ಸ್ಥಿತಿಯಲ್ಲ, ಬದಲಾಗಿ ಕೇವಲ ಮನುಷ್ಯ ಪ್ರೀತಿ !  

ನವದೆಹಲಿ, ಫೆ.27 : ಆಕೆಗೆ ಕೇವಲ 17ರ ಹರೆಯ. ಹರ್ಯಾಣ ಮೂಲದ ಹುಡುಗಿ. ಮೆಡಿಕಲ್ ಕಲಿಯಬೇಕೆಂಬ ಇಚ್ಛೆಯಿಂದ ಸಣ್ಣ ವಯಸ್ಸಿನಲ್ಲಿಯೇ ಉಕ್ರೇನ್ ರಾಜಧಾನಿ ಕೀನ್ ನಗರಕ್ಕೆ ತೆರಳಿದ್ದಳು. ಆದರೆ, ಈಗ ಉಕ್ರೇನಲ್ಲಿ ರಷ್ಯಾ ಕಡೆಯಿಂದ ಬಾಂಬಿನ ಸುರಿಮಳೆಯಾಗುತ್ತಿದೆ. ಸದ್ಯಕ್ಕೆ ಬಂಕರಿನಡಿ ಅಡಗಿಕೊಂಡಿರುವ ಈಕೆ, ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾಳೆ. ಅದಕ್ಕೆ ಕಾರಣವಾಗಿದ್ದು ಉಕ್ರೇನಿನ ಯುದ್ಧ ಸ್ಥಿತಿಯಲ್ಲ, ಬದಲಾಗಿ ಕೇವಲ ಮನುಷ್ಯ ಪ್ರೀತಿ !  

ಹೌದು.. 17 ವರ್ಷದ ಯುವತಿ ನೇಹಾ ಒಂದು ವರ್ಷದ ಹಿಂದೆ ಉಕ್ರೇನ್ ತೆರಳಿ, ಮೆಡಿಕಲ್ ಓದಲು ಮುಂದಾಗಿದ್ದಳು. ಹಾಸ್ಟೆಲ್ ಹುಡುಕಿದಾಗ, ಸಿಗದೇ ಇದ್ದಾಗ ಕೊನೆಗೆ ಅಲ್ಲಿನ ಸಿವಿಲ್ ಇಂಜಿನಿಯರ್ ಒಬ್ಬರಿಗೆ ಸೇರಿದ ಬಂಗಲೆಯೊಂದರ ಮೂಲೆಯಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದಳು. ಆದರೆ, ಇತ್ತೀಚೆಗೆ ರಷ್ಯಾ ಯುದ್ಧ ಘೋಷಿಸಿತ್ತು. ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ದೇಶದ ಜನರನ್ನು ಸೇನೆಗೆ ಸೇರುವಂತೆ ಕರೆ ನೀಡಿದ್ದರು.  

Ukraine Russia War: 'Won't Abandon': Young Indian Picks Life in Bunker with  Wife, 3 Kids of Ukrainian Landlord as He Joins War dgtl - Anandabazar

ಅಧ್ಯಕ್ಷರ ಕರೆಗೆ ಓಗೊಟ್ಟು ನೇಹಾ ನೆಲೆಸಿದ್ದ ಬಂಗಲೆಯ ಮಾಲೀಕನೂ ಸೇನೆಗೆ ಸೇರಲು ಮುಂದಾಗಿದ್ದಾನೆ. ಕೈಯಲ್ಲಿ ಗನ್ ಹಿಡಿದು ಸೇನೆಯ ಜೊತೆಗೆ ಹೋರಾಟಕ್ಕೆ ನಿಂತಿದ್ದಾನೆ. ಇತ್ತ ಬಂಗಲೆಯಲ್ಲಿ ಉಳಿದುಕೊಂಡಿದ್ದು ಆತನ ಪತ್ನಿ ಮತ್ತು ಸಣ್ಣ ಮೂರು ಮಕ್ಕಳು. ಇದರ ನಡುವೆ ನೇಹಾಗೆ ರೊಮೇನಿಯಾ ಮೂಲಕ ಮರಳಿ ಭಾರತಕ್ಕೆ ಬರುವ ಅವಕಾಶ ದೊರಕಿತ್ತು. ಆದರೆ, ಸಣ್ಣ ಮಕ್ಕಳು ಮತ್ತು ಅವರ ತಾಯಿಯ ಜೊತೆಗೆ ಸೇನಾ ಬಂಕರಿನಡಿ ಅಡಗಿರುವ ನೇಹಾ ಅಲ್ಲಿಂದ ತನ್ನ ಜೊತೆಗಿರುವ ಮಕ್ಕಳು ಮತ್ತು ತಾಯಿಯನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ. ಈ ಬಗ್ಗೆ ತನ್ನ ತಾಯಿಗೆ ಕರೆ ಮಾಡಿರುವ ನೇಹಾ, ನಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಇವರನ್ನು ಈ ಸ್ಥಿತಿಯಲ್ಲಿ ಬಿಟ್ಟು ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಏನಾಗುತ್ತೋ ಆಗಲಿ, ನಾನಿಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದಾಳೆ.

War in Ukraine: Belgium Closes Airspace to Russian Airlines in Show of  Unity - TopologyPro One - News Aggregator and Search Portal

ನೇಹಾ ತಾಯಿ ಹರ್ಯಾಣದ ದಾದ್ರಿ ಜಿಲ್ಲೆಯ ಚಾರ್ಕಿ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಂದೆ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದು, ಈಕೆ ಯುಕ್ರೇನ್ ತೆರಳುವ ಕೆಲವು ವರ್ಷಗಳ ಹಿಂದೆ ಕರ್ತವ್ಯ ಸಂದರ್ಭದಲ್ಲಿಯೇ ಮೃತಪಟ್ಟಿದ್ದರು. ಇದರಿಂದ ಸೇನೆ ಬಗ್ಗೆ ನೇಹಾಗೆ ತುಂಬಾನೇ ಗೌರವ ಬೆಳೆದಿತ್ತು. ಈಗ ಆಕೆಯ ಜೊತೆಗೇ ಇದ್ದ ಮನೆಯ ಮಾಲೀಕನೇ ಸೇನಾ ಯೋಧನಾಗಲು ರೆಡಿಯಾಗಿದ್ದಾರೆ. ಇದನ್ನು ಕಂಡು, ನೇಹಾ ಆತನ ಕುಟುಂಬಕ್ಕೆ ಧೈರ್ಯ ಹೇಳುತ್ತಾ ಜೊತೆಗೆ ನಿಂತಿದ್ದಾಳೆ. ನಮ್ಮ ಹತ್ತಿರದಲ್ಲಿಯೇ ಬಾಂಬು ಸಿಡಿಯುತ್ತಿರುವ ಸದ್ದು ಕೇಳುತ್ತಿದೆ. ಆದರೆ, ನಾವು ಸೇಫ್ ಆಗಿದ್ದೇವೆ ಎಂದು ನೇಹಾ ತನ್ನ ತಾಯಿಗೆ ಗರ್ವದಿಂದ ಹೇಳಿಕೊಂಡಿದ್ದಾಳೆ.

See the source image

ಇದೇ ಮಾತುಗಳನ್ನು ಆಕೆಯ ಬಾಲ್ಯದ ಗೆಳತಿಯಾಗಿರುವ ಸವಿತಾ ಜಾಖರ್ ಗೂ ತಿಳಿಸಿದ್ದಾಳೆ. ಸವಿತಾ ತನಗೆ ನೇಹಾ ಹೇಳಿರುವ ವಿಚಾರವನ್ನು ತನ್ನ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಹೃದಯ ಕಲಕುವಂತಿದೆ. ನೇಹಾ ಯುಕ್ರೇನ್ ಹೋದಾಗಿನಿಂದಲೂ ಆ ಕುಟುಂಬದ ಒಟ್ಟಿಗೇ ಇದ್ದಾಳೆ. ಯುದ್ಧ ಆರಂಭಗೊಂಡಾಗ, ಮನೆಯ ಮಾಲೀಕನೇ ಈಕೆಯನ್ನು ಭಾರತಕ್ಕೆ ತೆರಳುವಂತೆ ಸೂಚಿಸಿದ್ದರು. ಆಕೆಯ ತಾಯಿಯೂ ಮಗಳನ್ನು ಯುದ್ಧ ಭೂಮಿಯಿಂದ ಕರೆತರಲು ಶ್ರಮ ಪಟ್ಟಿದ್ದರು. ಅದರಂತೆ, ನೇಹಾ ಒಮ್ಮೆ ರೊಮೇನಿಯಾದ ಗಡಿ ವರೆಗೂ ಬಂದಿದ್ದಳು. ಆದರೆ, ನೇಹಾಗೆ ಅಲ್ಲಿ ಬಂದಾಗ ಏನನ್ನಿಸಿತ್ತೋ ಏನೋ.. ಇಂಥ ಸಂದಿಗ್ಧ ಸ್ಥಿತಿಯಲ್ಲೂ ತನ್ನ ಜೊತೆಗಿದ್ದ ಕುಟುಂಬವನ್ನು ಬಿಟ್ಟು ಬರಲು ಒಪ್ಪದೇ ಅಲ್ಲಿಯೇ ಉಳಿದುಕೊಂಡಿದ್ದಾಳೆ.

ಆಕೆಗೆ ಅಲ್ಲಿನ ಸ್ಥಿತಿಯ ಬಗ್ಗೆ ಅರಿವಿದೆ. ಅಲ್ಲಿ ಜೀವಕ್ಕೂ ಅಪಾಯ ಬರಬಹುದೆಂಬುದು ತಿಳಿದಿದ್ದರೂ ಅಲ್ಲಿಯೇ ಉಳಿದುಕೊಂಡಿದ್ದಾಳೆ. ಸಂದಿಗ್ಧ ಸ್ಥಿತಿಯಲ್ಲಿ ಜೊತೆಗಿದ್ದ ಕುಟುಂಬವನ್ನು ಬಿಟ್ಟು ಬರಲು ಆಕೆ ಮನಸ್ಸು ಒಪ್ಪುತ್ತಿಲ್ಲ. ಆದರೆ, ಆ ಕುಟುಂಬದ ಜೊತೆಗೆ ಗಟ್ಟಿಯಾಗಿ ನಿಲ್ಲಲು ಆ ಹುಡುಗಿಗೆ ಅಷ್ಟೊಂದು ಶಕ್ತಿ ನೀಡಿದ್ದು ಯಾವುದು ಅನ್ನೋದು ನನಗೆ ತಿಳಿಯುತ್ತಿಲ್ಲ ಎಂದು ಸವಿತಾ ತನ್ನ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. 

A mid a sea of stranded Indians in war-torn Ukraine, a young medical student has decided to stay back despite destruction for the cause of humanity and empathy.