ರಷ್ಯಾದ ಜನರೊಂದಿಗೆ ನಿಲ್ಲುವಂತೆ ಟ್ವೀಟ್ ಮಾಡಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಗೆ ಶಾಕ್ ; ಟ್ವಿಟ್ಟರ್ ಹ್ಯಾಕ್ 

27-02-22 09:26 pm       HK Desk news   ದೇಶ - ವಿದೇಶ

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟ್ಟರ್ ಖಾತೆಯನ್ನು ಭಾನುವಾರ ಬೆಳಗ್ಗೆ ಹ್ಯಾಕ್ ಮಾಡಲಾಗಿದೆ. "ರಷ್ಯಾದ ಜನರೊಂದಿಗೆ ನಿಲ್ಲುವಂತೆ" ಅವರ ಅನುಯಾಯಿಗಳನ್ನು ಕೇಳುವ ಟ್ವೀಟ್ ಅವರ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಅದನ್ನು ಕೆಲವೇ ನಿಮಿಷಗಳಲ್ಲಿ ಅಳಿಸಲಾಗಿದೆ.

ನವದೆಹಲಿ ಫೆ 27: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟ್ಟರ್ ಖಾತೆಯನ್ನು ಭಾನುವಾರ ಬೆಳಗ್ಗೆ ಹ್ಯಾಕ್ ಮಾಡಲಾಗಿದೆ. "ರಷ್ಯಾದ ಜನರೊಂದಿಗೆ ನಿಲ್ಲುವಂತೆ" ಅವರ ಅನುಯಾಯಿಗಳನ್ನು ಕೇಳುವ ಟ್ವೀಟ್ ಅವರ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಅದನ್ನು ಕೆಲವೇ ನಿಮಿಷಗಳಲ್ಲಿ ಅಳಿಸಲಾಗಿದೆ.

ಹಿಂದಿಯಲ್ಲಿ "ರಷ್ಯಾದ ಜನರೊಂದಿಗೆ ನಿಂತುಕೊಳ್ಳಿ. ಈಗ ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್, ಇಥೆರಿಯಂ ಬಳಕೆಗೆ ಮಾನ್ವತೆ ನೀಡಲಾಗಿದೆ" ಎಂದು ಟ್ವೀಟ್ ಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದು ಪೂರ್ವ ಯುರೋಪಿಯನ್ ದೇಶದಲ್ಲಿ ಭಾರೀ ಹೋರಾಟ ಮತ್ತು ಸಾವು ನೋವುಗಳಿಗೆ ಕಾರಣವಾಯಿತು.

ಸುಮಾರು 2.7 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಖಾತೆಯಲ್ಲಿ ಹೆಸರು ಬದಲಾವಣೆಗೂ ಮುನ್ನ ಟ್ವೀಟ್ ಮಾಡಲಾಗಿದ್ದು, ಉಕ್ರೇನ್‍ನ ಜನರ ಜೊತೆ ನಿಲ್ಲಬೇಕಿದೆ. ಅದಕ್ಕಾಗಿ ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ಸ್ವೀಕರಿಸುತ್ತೇವೆ. ಬಿಟ್ ಕಾಯಿನ್ ಮತ್ತು ಎಥಿರಿಯಂ ಕರೆನ್ಸಿ ಮೂಲಕ ದೇಣಿಗೆ ನೀಡಿ ಎಂದು ಇಂಗ್ಲಿಷ್‍ನಲ್ಲಿ ಬರೆದು ಬಿಟ್ ಕಾಯಿನ್ ಮತ್ತು ಎಥಿರಿಯಂ ಕರೆನ್ಸಿಗಳ ವೆಬ್ ಲಿಂಕ್‍ನ್ನು ಜೆ.ಪಿ.ನಡ್ಡ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಜೆಪಿ ನಡ್ಡಾ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್‌ಗಳನ್ನು ತಕ್ಷಣವೇ ಅಳಿಸಲಾಗಿದೆ.

BJP President Nadda Twitter Account Tweets On Ukraine Crisis,  Cryptocurrency | pipanews.com

ಇನ್ನೊಂದು ಟ್ವೀಟ್​​ನಲ್ಲಿ ನನ್ನ ಖಾತೆ ಹ್ಯಾಕ್ ಆಗಿಲ್ಲ. ಎಲ್ಲ ದೇಣಿಗೆಯನ್ನು ಉಕ್ರೇನ್ ಸರ್ಕಾರಕ್ಕೆ ನೀಡಲಾಗುವುದು ಎಂದಿದೆ. ಇದೀಗ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಪುನಸ್ಥಾಪಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಟ್ವೀಟ್‌ನಲ್ಲಿ ಹಿಂದಿಯಲ್ಲಿ ಸಂದೇಶವಿದೆ ಮತ್ತು ಬಿಟ್‌ಕಾಯಿನ್ ಮತ್ತು ಎಥೆರಿಯಮ್ ವ್ಯಾಲೆಟ್‌ಗಳಿಗೆ ವಿಳಾಸಗಳಿವೆ. ಟ್ವೀಟ್ ಅನ್ನು ಬೆಳಗ್ಗೆ 9:52 ಕ್ಕೆ ಪೋಸ್ಟ್ ಮಾಡಲಾಗಿದೆ. 10 ನಿಮಿಷಗಳಲ್ಲಿ, ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸೂಚಿಸುವ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದ್ದು ಜನರು ರಷ್ಯಾವನ್ನು ಬೆಂಬಲಿಸಬೇಕು ಎಂದು ಹೇಳಿತ್ತು. 

Kerala start-ups must plug into EV potential: Rajeev Chandrasekhar - The  Hindu BusinessLine

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಅಧ್ಯಕ್ಷರ ಟ್ವೀಟರ್ ಖಾತೆ ಹ್ಯಾಕ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ತಕ್ಷಣವೇ ಲೋಪವನ್ನು ಸರಿಪಡಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೊದಲು ಪ್ರಧಾನಿ ನರೇಂದ್ರಮೋದಿ ಅವರ ಖಾತೆಯನ್ನೂ ಕೂಡ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.

ಭಾರತೀಯ ನಾಯಕರು ಅಥವಾ ಏಜೆನ್ಸಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಫೆಬ್ರವರಿ 15 ರಂದು ಸಂಸದ್ ಟಿವಿಯ ಯುಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

On February 27, the hackers took control of Bharatiya Janata Party’s President JP Nadda’s Twitter account. They posted a tweet seeking support for Ukraine via cryptocurrency. The tweet from the hackers read, “Stand with the people of Ukraine. Now accepting cryptocurrency donations. Bitcoins and Ethereum.”