ಇಸ್ರೇಲ್ ಬಂದು ತನ್ನವರನ್ನು ಸ್ಥಳಾಂತರ ಮಾಡಿದೆ, ಭಾರತಕ್ಕೆ ಏಕೆ ಆಗುತ್ತಿಲ್ಲ ; ಯುಕ್ರೇನಲ್ಲಿ ಭಾರತೀಯರ ಅಳಲು 

28-02-22 01:22 pm       HK Desk news   ದೇಶ - ವಿದೇಶ

ಉಕ್ರೇನಿನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕೀವ್ ನಲ್ಲಿ ಸಿಲುಕಿಕೊಂಡು ನಾಲ್ಕು ದಿನ ಕಳೆದರೂ ಭಾರತದಿಂದ ಸಮರೋಪಾದಿ ಕಾರ್ಯ ಆಗಿಲ್ಲವೆಂದು ಭಾರತೀಯ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ನವದೆಹಲಿ, ಫೆ.28 : ಉಕ್ರೇನಿನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕೀವ್ ನಲ್ಲಿ ಸಿಲುಕಿಕೊಂಡು ನಾಲ್ಕು ದಿನ ಕಳೆದರೂ ಭಾರತದಿಂದ ಸಮರೋಪಾದಿ ಕಾರ್ಯ ಆಗಿಲ್ಲವೆಂದು ಭಾರತೀಯ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಭಾನುವಾರ ರಷ್ಯಾ ಸೇನೆ ಖಾರ್ಕಿವ್ ನಗರ ಪ್ರವೇಶಿಸಿದ್ದು ನಾಗರಿಕರು ಬಂಕರುಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರಲ್ಲಿ ಕರ್ನಾಟಕದ ವಿದ್ಯಾರ್ಥಿಗಳೂ ಇದ್ದು ತಮಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. 

Russia-Ukraine war LIVE: Kyiv, Moscow make counterclaims on Day 5 |  Hindustan Times

ಎರಡು ದಿನಗಳಿಂದ ನಿದ್ದೆ ಮಾಡಲಾಗುತ್ತಿಲ್ಲ. ಬಾಂಬಿನ ಸದ್ದು ರಾತ್ರಿಯಿಡೀ ಕೇಳಿಬರುತ್ತಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಶನಿವಾರ ಮಧ್ಯಾಹ್ನ ಇಸ್ರೇಲಿನ ನಿಯೋಗ ಬಂದು ಬಸ್ಸಿನ ಮೂಲಕ ಅವರ ವಿದ್ಯಾರ್ಥಿಗಳನ್ನು ಕರೆದುಕೊಂಡು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಭಾರತ ಸರ್ಕಾರಕ್ಕೆ ಏಕೆ ಆ ಕೆಲಸ ಮಾಡಲಾಗುತ್ತಿಲ್ಲ ಎಂದು ಕರ್ನಾಟಕ ಮೂಲದ ವಿದ್ಯಾರ್ಥಿನಿ ಶಿವಾನಿ ಮಡಿವಾಳರ್ ಪ್ರಶ್ನಿಸಿದ್ದಾರೆ. 

ಯುದ್ಧ ಪ್ರಾರಂಭಗೊಂಡ ತಕ್ಷಣ ಖಾರ್ಕಿವ್ ನಲ್ಲಿ ನೆಲೆಸಿರುವ ಸಾವಿರಾರು ವಿದ್ಯಾರ್ಥಿಗಳು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಆದರೆ ಅವರಿಂದ ಯಾವುದೇ ನೆರವು ದೊರೆತಿಲ್ಲ ಎಂದು ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ.

Indian students have expressed outrage against the government for not being co-operative with India after spending four days in Kharkiv, Ukraine's second largest city.