ಯುದ್ಧದಲ್ಲಿ ರಷ್ಯಾಕ್ಕೆ ಭಾರೀ ಹೊಡೆತ ; 5300 ಸೈನಿಕರು ಸಾವು, ಉಕ್ರೇನ್‌ನ ಕನಿಷ್ಠ 16 ಮಕ್ಕಳು ಜೀವ ಬಲಿ ! 

28-02-22 06:50 pm       HK Desk news   ದೇಶ - ವಿದೇಶ

ರಷ್ಯಾ ನಡೆಸಿದ ಬಾಂಬ್ ಹಾಗೂ ಶೆಲ್ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಕನಿಷ್ಠ 16 ಮಕ್ಕಳು ಸಾವನ್ನಪ್ಪಿದ್ದಾರೆ. ನಾಗರಿಕರ ಸಾವು-ನೋವು ಅಪಾರವಾಗಿದೆ ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ತಿಳಿಸಿದ್ದಾರೆ.

ನವದೆಹಲಿ, ಫೆ 28: ರಷ್ಯಾ ನಡೆಸಿದ ಬಾಂಬ್ ಹಾಗೂ ಶೆಲ್ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಕನಿಷ್ಠ 16 ಮಕ್ಕಳು ಸಾವನ್ನಪ್ಪಿದ್ದಾರೆ. ನಾಗರಿಕರ ಸಾವು-ನೋವು ಅಪಾರವಾಗಿದೆ ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನಮ್ಮ ದೇಶದ 16 ಮಕ್ಕಳು ಸಾವನ್ನಪ್ಪಿದ್ದಾರೆ. ವಿವಿಧ ದೇಶಗಳ ನಿರ್ಬಂಧಗಳಿಂದಾಗಿ ರಷ್ಯಾದ ಆರ್ಥಿಕತೆಯು ಪ್ರತಿದಿನವೂ ದುರ್ಬಲಗೊಳ್ಳುತ್ತಿದೆ. ಇದುವರೆಗೆ ಸುಮಾರು 5,300 ರಷ್ಯಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

Live updates: ICRC asked to repatriate bodies of soldiers | National News |  tahlequahdailypress.com

ರಷ್ಯಾದ ವಿಮಾನಗಳಿಗಾಗಿ ಯುರೋಪಿನ ವಾಯುಪ್ರದೇಶವನ್ನು ಭಾನುವಾರ ಮುಚ್ಚಲಾಗಿದೆ. ಆ ದೇಶದ ಆರ್ಥಿಕತೆಯು ಪ್ರತಿದಿನ ದುರ್ಬಲಗೊಳ್ಳುತ್ತಿದೆ. ರಷ್ಯಾವು ಸಂಪೂರ್ಣವಾಗಿ ಸಾವುನೋವುಗಳನ್ನು ಎದುರಿಸುತ್ತಿದೆ. ಸರಿಸುಮಾರು 5,300 ರಷ್ಯಾದ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ವಿದೇಶಿ ಪಾಲುದಾರ ರಾಷ್ಟ್ರಗಳು ಯುದ್ಧ ನಿಲ್ಲಿಸಲು ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರಬೇಕು ಎಂದು ಇದೇ ವೇಳೆ ಉಕ್ರೇನ್‌ ರಾಯಭಾರಿ ವಿನಂತಿಸಿದ್ದಾರೆ.

News, Breaking News, Latest News, News Headlines, Live News, Today News  CNN-News18

ಶಾಂತಿ ಮಾತುಕತೆಯ ಸಮಯದಲ್ಲೂ ದಾಳಿ ಆರೋಪ; 

ಯುದ್ಧವನ್ನು ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರಲು ನಾವು ನಮ್ಮ ಎಲ್ಲಾ ಪಾಲುದಾರ ದೇಶಗಳನ್ನು ಕೇಳಿಕೊಳ್ಳುತ್ತಿದ್ದೇವೆ. ಇಂದು, ನಮ್ಮ ನಿಯೋಗವು ಮೊದಲ ಸುತ್ತಿನ ಶಾಂತಿ ಮಾತುಕತೆ ನಡೆಸಲು ಹೋಗಿದೆ. ಶಾಂತಿ ಮಾತುಕತೆಯ ಸಮಯದಲ್ಲಿಯೂ ನಿರಂತರ ಶೆಲ್ ದಾಳಿ, ಬಾಂಬ್ ದಾಳಿ ನಡೆಯುತ್ತಿವೆ ಎಂದು ಅಸಹಾಯಕತೆಯನ್ನು ತೋಡಿಕೊಂಡರು.

See the source image

ಉಕ್ರೇನಿಯನ್ ನಿರಾಶ್ರಿತರ ಸಂಖ್ಯೆ 4 ಲಕ್ಷವನ್ನು ಮೀರಿದೆ. ಯುದ್ಧವನ್ನು ನಿಲ್ಲಿಸದಿದ್ದರೆ ಈ ಸಂಖ್ಯೆ 7 ಮಿಲಿಯನ್ ದಾಟಬಹುದು. ಗಡಿಯಲ್ಲಿ ಬಹಳ ಉದ್ದವಾದ ಸರತಿ ಸಾಲುಗಳಲ್ಲಿ ಉಕ್ರೇನ್‌ ಜನ ನಿಂತಿದ್ದು, ಗಡಿ ದಾಟಲು ಪ್ರಯತ್ನಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಇಗೊರ್ ಪೊಲಿಖಾ, ಭಾರತೀಯ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.

At least 16 children have died in Ukraine due to Russian bombing and shelling. The death toll of civilians is immense, said Ukraine's Ambassador to India Dr. Said Igor Polikha.