ಬ್ರೇಕಿಂಗ್ ನ್ಯೂಸ್
28-02-22 10:20 pm HK Desk news ದೇಶ - ವಿದೇಶ
ಕೀವ್, ಫೆ 28: ರಷ್ಯಾ ಹಾಗೂ ಉಕ್ರೇನ್ ಮಾತುಕತೆ ನಡೆಸಲು ಸಿದ್ಧವಾಗಿದೆ. ಈ ನಡುವೆ ರಷ್ಯಾದ ಪಡೆಗಳು ಕೀವ್ ಬಳಿಯ ವಾಯುನೆಲೆಯ ಮೇಲೆ ದಾಳಿ ನಡೆಸಿ ವಿಶ್ವದ ಅತಿದೊಡ್ಡ ವಿಮಾನವನ್ನು ನಾಶಪಡಿಸಿದೆ ಎಂದು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ.
ಎಎನ್-225 'ಮ್ರಿಯಾ' (AN-225 'Mriya') ಎಂಬ ವಿಮಾನವನ್ನು ನಾಶ ಮಾಡಲಾಗಿದೆ ಎಂದು ವರದಿಯು ಹೇಳಿದೆ. ಮ್ರಿಯಾ ಎಂದರೆ ಉಕ್ರೇನಿಯನ್ ಭಾಷೆಯಲ್ಲಿ 'ಕನಸು' ಎಂದಾಗಿದೆ. ಇದನ್ನು ಉಕ್ರೇನಿಯನ್ ಏರೋನಾಟಿಕ್ಸ್ ಕಂಪನಿ ಆಂಟೊನೊವ್ ತಯಾರಿಸಿದೆ. ವಿಶ್ವದ ಅತಿದೊಡ್ಡ ಸರಕು ವಿಮಾನವಾಗಿತ್ತು. ರಷ್ಯಾದ ಶೆಲ್ ದಾಳಿಯಿಂದಾಗಿ ಕೀವ್‌ನ ವಿಮಾನ ನಿಲ್ದಾಣದಲ್ಲಿ ಸುಟ್ಟುಹೋಗಿದೆ.
"ವಿಶ್ವದ ಅತಿ ದೊಡ್ಡ ವಿಮಾನ 'ಮ್ರಿಯಾ' (ದ ಡ್ರೀಮ್) ಅನ್ನು ರಷ್ಯಾದ ಸೇನಾಪಡೆಯು ಕೀವ್ ಬಳಿಯ ಏರ್‌ಫೀಲ್ಡ್‌ನಲ್ಲಿ ನಾಶಪಡಿಸಿದ್ದಾರೆ. ನಾವು ವಿಮಾನವನ್ನು ಮರುನಿರ್ಮಾಣ ಮಾಡುತ್ತೇವೆ. ನಾವು ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವದ ಉಕ್ರೇನ್‌ನ ನಮ್ಮ ಕನಸನ್ನು ಈಡೇರಿಸುತ್ತೇವೆ," ಎಂದು ಉಕ್ರೇನ್ ಟ್ವೀಟ್ ಮಾಡಿದೆ. ಹಾಗೆಯೇ ವಿಮಾನದ ನಾಶಕ್ಕೆ ನೋವು ವ್ಯಕ್ತಪಡಿಸಿದೆ.
ಟ್ವೀಟ್‌ನ ಜೊತೆಗೆ, ಉಕ್ರೇನ್‌ನ ಹ್ಯಾಂಡಲ್ ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿದೆ. "ಅವರು ಅತಿದೊಡ್ಡ ವಿಮಾನವನ್ನು ಸುಟ್ಟುಹಾಕಿದರು ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ," ಎಂದಿದೆ. ಕುಲೇಬಾ ಆನ್‌ಲೈನ್‌ನಲ್ಲಿ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. "ಇದು ವಿಶ್ವದ ಅತಿ ದೊಡ್ಡ ವಿಮಾನ, AN-225 'ಮ್ರಿಯಾ' (ಉಕ್ರೇನಿಯನ್ ಭಾಷೆಯಲ್ಲಿ 'ಕನಸು'). ರಷ್ಯಾ ನಮ್ಮ 'ಮ್ರಿಯಾ' ಅನ್ನು ನಾಶಪಡಿಸಿರಬಹುದು. ಆದರೆ ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವದ ಯುರೋಪಿಯನ್ ರಾಷ್ಟ್ರದ ನಮ್ಮ ಕನಸನ್ನು ಅವರು ಎಂದಿಗೂ ನಾಶಮಾಡಲು ಸಾಧ್ಯವಾಗುವುದಿಲ್ಲ. ನಾವು ಮೇಲುಗೈ ಸಾಧಿಸುತ್ತೇವೆ," ಎಂದು ವಿದೇಶಾಂಗ ಸಚಿವರು ಟ್ವೀಟ್ ಮಾಡಿದ್ದಾರೆ.
ವಿಮಾನದ ಪ್ರಸ್ತುತ ಸ್ಥಿತಿ ಏನೆಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಉಕ್ರೇನಿಯನ್ ಏರೋನಾಟಿಕ್ಸ್ ಕಂಪನಿ ಆಂಟೊನೊವ್ ಹೇಳಿದೆ. "ಪ್ರಸ್ತುತ, AN-225 ಅನ್ನು ತಜ್ಞರು ಪರಿಶೀಲಿಸುವವರೆಗೆ, ನಾವು ವಿಮಾನದ ತಾಂತ್ರಿಕ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಹೆಚ್ಚಿನ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿರಿ," ಎಂದು ವಿಮಾನ ತಯಾರಿಕಾ ಕಂಪನಿ ಟ್ವೀಟ್ ಮಾಡಿದೆ.
ರಷ್ಯಾ ಗುರುವಾರ ದೇಶದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್‌ನ ಅನೇಕ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಯುತ್ತಿದೆ. ಭಾನುವಾರದಂದು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ಗೆ ರಷ್ಯಾ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ರಷ್ಯಾ ಸೇನೆಯಿಂದ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದೆ. ಶನಿವಾರದ ಹೊತ್ತಿಗೆ, ಉಕ್ರೇನ್‌ನ ಸಂಘರ್ಷದಲ್ಲಿ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ 1,115 ಜನರು ಗಾಯಗೊಂಡಿದ್ದಾರೆ.
ರಷ್ಯಾದಲ್ಲಿ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ;
ರಷ್ಯಾವು ಉಕ್ರೇನ್ ಮೇಲೆ ಮಾಡಿದ ಆಕ್ರಮಣಕ್ಕೆ ರಷ್ಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾನುವಾರದಂದು ರಷ್ಯಾದ 44 ನಗರಗಳಲ್ಲಿ ನಡೆದ ಯುದ್ಧ-ವಿರೋಧಿ ಪ್ರತಿಭಟನೆಗಳಲ್ಲಿ ಪೊಲೀಸರು 900 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ದಾಳಿಯ ಪ್ರಾರಂಭದಿಂದ ಈವರೆಗೆ 4,000 ಕ್ಕೂ ಹೆಚ್ಚು ಮಂದಿಯನ್ನು ಬಂಧನ ಮಾಡಲಾಗಿದೆ ಎಂದು ಸ್ವತಂತ್ರ ಪ್ರತಿಭಟನೆ ಮೇಲ್ವಿಚಾರಣಾ ಗುಂಪು ಒವಿಡಿ ಮಾಹಿತಿ ನೀಡಿದೆ.
Russia and Ukraine ready to negotiate. Meanwhile, Russian Foreign Minister Dimitro Kuleba said Russian forces attacked airspace near Kiev and destroyed the world's largest aircraft.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm