ಪೇಶಾವರದಲ್ಲಿ ಪ್ರಬಲ ಬಾಂಬ್ ಸ್ಫೋಟ ; ಶುಕ್ರವಾರದ ಪ್ರಾರ್ಥನೆಯಲ್ಲಿದ್ದಾಗಲೇ ಮಸೀದಿಯಲ್ಲಿ ಬ್ಲಾಸ್ಟ್ ! 30ಕ್ಕೂ ಹೆಚ್ಚು ಸಾವು  

04-03-22 04:59 pm       HK Desk news   ದೇಶ - ವಿದೇಶ

ಪಾಕಿಸ್ಥಾನದ ಪೂರ್ವ ಪ್ರಾಂತ್ಯದ ನಗರ ಪೇಶಾವರದಲ್ಲಿ ಮಸೀದಿ ಆವರಣದಲ್ಲಿ ಪ್ರಬಲ ಬಾಂಬ್ ಸ್ಫೋಟ ಆಗಿದ್ದು 30ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದಾರೆ.

ಕರಾಚಿ, ಮಾ.4: ಪಾಕಿಸ್ಥಾನದ ಪೂರ್ವ ಪ್ರಾಂತ್ಯದ ನಗರ ಪೇಶಾವರದಲ್ಲಿ ಮಸೀದಿ ಆವರಣದಲ್ಲಿ ಪ್ರಬಲ ಬಾಂಬ್ ಸ್ಫೋಟ ಆಗಿದ್ದು 30ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದಾರೆ.

ಇಂದು ಮಧ್ಯಾಹ್ನ ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿ ಆವರಣದಲ್ಲಿ ಭಾರೀ ಸಂಖ್ಯೆಯ ಜನರು ಸೇರಿದ್ದಾಗಲೇ ಬಾಂಬ್ ಸ್ಫೋಟ ಸಂಭವಿಸಿದೆ. 30ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪೇಶಾವರದ ಕಿಸ್ಸಾ ಖ್ವಾನಿ ಬಾಜಾರ್ ಎಂಬಲ್ಲಿನ ಜಾಮಿಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಹತ್ತಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಸಾವು- ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಯಾವ ಸಂಘಟನೆ ನಡೆಸಿದೆ ಅನ್ನುವುದು ಗೊತ್ತಾಗಿಲ್ಲ.

A powerful bomb exploded inside a Shiite Muslim mosque in Pakistan's northwestern city of Peshawar on Friday, killing more than 30 worshippers and wounding dozens more, many of them critically, police said.