ಯುಕ್ರೇನಿನ ಎರಡು ನಗರಗಳ ಮೇಲಿನ ದಾಳಿ ತಾತ್ಕಾಲಿಕ ಸ್ಥಗಿತ, ನಾಗರಿಕರಿಗೆ ತೆರವುಗೊಳ್ಳಲು ಅವಕಾಶ, ಉಳಿದೆಡೆ ಮುಂದುವರಿದ ಬಾಂಬಿಂಗ್ !

05-03-22 04:04 pm       HK Desk news   ದೇಶ - ವಿದೇಶ

ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ರಷ್ಯಾ ಯುಕ್ರೇನಿನ ಎರಡು ನಗರಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾರಿಯೊಪೊಲ್ ಮತ್ತು ವೊಲ್ನೊವೋಕಾ ಎಂಬ ಎರಡು ನಗರಗಳಲ್ಲಿ ಕದನ ವಿರಾಮ ಘೋಷಿಸಿದ್ದು ಅಲ್ಲಿನ ನಾಗರಿಕರು ಬೇರೆಡೆ ಸ್ಥಳಾಂತರಗೊಳ್ಳಲು ಅವಕಾಶ ನೀಡಲಾಗಿದೆ.

ನವದೆಹಲಿ, ಮಾ.5:ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ರಷ್ಯಾ ಯುಕ್ರೇನಿನ ಎರಡು ನಗರಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾರಿಯೊಪೊಲ್ ಮತ್ತು ವೊಲ್ನೊವೋಕಾ ಎಂಬ ಎರಡು ನಗರಗಳಲ್ಲಿ ಕದನ ವಿರಾಮ ಘೋಷಿಸಿದ್ದು ಅಲ್ಲಿನ ನಾಗರಿಕರು ಬೇರೆಡೆ ಸ್ಥಳಾಂತರಗೊಳ್ಳಲು ಅವಕಾಶ ನೀಡಲಾಗಿದೆ.

ಇದೇ ವೇಳೆ, ಯುಕ್ರೇನ್ ಎಲ್ಲ ರೀತಿಯ ಷರತ್ತುಗಳಿಗೆ ಒಪ್ಪಿದಲ್ಲಿ ಅದರ ಜೊತೆ ಮಾತುಕತೆ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಎರಡು ನಗರಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು, ಇಂದು ಬೆಳಗ್ಗೆ ಚೆರ್ನಿಹಿವ್ ನಗರದಲ್ಲಿ ಪ್ರಬಲ ಬಾಂಬ್ ದಾಳಿ ನಡೆಸಲಾಗಿದೆ. ಇರ್ಪಿನ್ ಎಂಬಲ್ಲಿ ಸೇನಾ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ.

Russia Ukraine War: More than 50,000 refugees left Kyiv under 48 hours of  Putin's invasion, says UN | World News – India TV

ಇದರ ಬೆನ್ನಲ್ಲೇ ಮಾರಿಯೊಪೊಲ್ ನಗರದಲ್ಲಿ ಜನರು ತಮ್ಮ ಊರು, ಮನೆಗಳನ್ನು ಬಿಟ್ಟು ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿರುವ ವಿದೇಶಿ ವಿದ್ಯಾರ್ಥಿಗಳು, ಇತರ ಪ್ರಜೆಗಳು ಸುರಕ್ಷಿತವಾಗಿ ತೆರಳಲು ಅನುವು ಮಾಡಲಾಗಿದೆ. ಈವರೆಗೆ ಯುಕ್ರೇನ್ ಪೂರ್ವ ಪ್ರಾಂತ್ಯದ ನಗರಗಳ ಮೇಲೆ ನಡೆಸುತ್ತಿದ್ದ ದಾಳಿಯನ್ನು ರಷ್ಯಾ ಈಗ ಉತ್ತರಕ್ಕೂ ವ್ಯಾಪಿಸಿದ್ದು, ಅಲ್ಲಿಯೂ ಭೀತಿ ವ್ಯಕ್ತವಾಗಿದೆ. ಯುಕ್ರೇನ್ ಅಧಿಕಾರಿಗಳು ಉತ್ತರ ಪ್ರಾಂತದ ಸುಮಿ ನಗರವನ್ನು ಬಿಟ್ಟು ಜನರು ತೆರಳುವಂತೆ ಹೇಳಿದ್ದಾರೆ. ಒಂದೋ ಮನೆಯ ಒಳಗಿರಿ. ಇಲ್ಲದಿದ್ದರೆ ಮನೆ ಬಿಟ್ಟು ಹೋಗಿ ಎಂದು ಕರೆ ನೀಡಿದ್ದಾರೆ.

ಯುಕ್ರೇನ್ ಮೇಲಿನ ದಾಳಿಗೆ ಹತ್ತು ದಿನ ಪೂರೈಸಿದ್ದು, ಖೇರ್ಸನ್ ಸೇರಿದಂತೆ ಹಲವು ನಗರಗಳನ್ನು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಇದೇ ವೇಳೆ, ಬಂದರು ನಗರಿ ಮಾರಿಯೊಪೊಲ್ ನಲ್ಲಿಯೂ ರಷ್ಯಾ ಮಿಲಿಟರಿ ಸುತ್ತುವರಿದಿದ್ದಾರೆ. ರಷ್ಯಾ ಎರಡು ದಿನಗಳಿಂದ ವಾಯುಪಡೆಯ ಮೂಲಕವೂ ದಾಳಿ ಆರಂಭಿಸಿದ್ದು, ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅದನ್ನು ತಡೆಯಲು ನ್ಯಾಟೋ ಪಡೆಗಳಿಗೆ ನೋ ಫ್ಲೈಯಿಂಗ್ ಝೋನ್ ಎಂದು ಘೋಷಣೆ ಮಾಡುವಂತೆ ಕೇಳಿಕೊಂಡಿದ್ದರು. ಯುಕ್ರೇನ್ ವಾಯು ಪ್ರದೇಶದಲ್ಲಿ ರಷ್ಯಾದ ವಿಮಾನಗಳು ಹಾರಾಟ ನಡೆಸದಂತೆ ತಡೆ ಹೇರಬೇಕು ಎಂದು ನ್ಯಾಟೋಗೆ ಹೇಳಿದ್ದರು. ಆದರೆ, ಯುಕ್ರೇನ್ ಕೋರಿಕೆಯನ್ನು ನ್ಯಾಟೋ ರಾಷ್ಟ್ರಗಳು ನಿರಾಕರಿಸಿವೆ. ನ್ಯಾಟೋ ಒಂದು ವೇಳೆ ಆ ರೀತಿಯ ಕ್ರಮಕ್ಕೆ ಮುಂದಾದದಲ್ಲಿ ಯುರೋಪ್ ನಲ್ಲಿ ಮತ್ತೊಂದು ಭೀಕರ ಯುದ್ಧ ಎದುರಾಗಲು ಕಾರಣವಾಗುತ್ತದೆ.

attacks on two ukrainian cities have come to a temporary halt, citizens are allowed to be cleared, and continued bombing elsewhere!