ಪೇಶಾವರದ ಶಿಯಾ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ; ಹೊಣೆ ಹೊತ್ತುಕೊಂಡ ಐಸಿಸ್ ಉಗ್ರರು ! 60ಕ್ಕೂ ಹೆಚ್ಚು ಸಾವು

05-03-22 07:00 pm       HK Desk news   ದೇಶ - ವಿದೇಶ

ಪಾಕಿಸ್ಥಾನದ ಪೇಶಾವರದ ಶಿಯಾ ಮುಸ್ಲಿಮರ ಜಾಮಿಯಾ ಮಸೀದಿಯಲ್ಲಿ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರು ಹೊತ್ತುಕೊಂಡಿದ್ದಾರೆ.

ನವದೆಹಲಿ, ಮಾ.5: ಪಾಕಿಸ್ಥಾನದ ಪೇಶಾವರದ ಶಿಯಾ ಮುಸ್ಲಿಮರ ಜಾಮಿಯಾ ಮಸೀದಿಯಲ್ಲಿ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರು ಹೊತ್ತುಕೊಂಡಿದ್ದಾರೆ.

ಪಾಕಿಸ್ಥಾನದ ಪೂರ್ವ ಪ್ರಾಂತ್ಯದ ಪ್ರಮುಖ ನಗರ ಪೇಶಾವರದಲ್ಲಿ ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ನಮಾಜ್ ನಡೆಯುತ್ತಿದ್ದಾಗಲೇ ಆತ್ಮಹತ್ಯಾ ಬಾಂಬರ್ ಒಳನುಗ್ಗಿದ್ದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಘಟನೆಯಲ್ಲಿ 60 ಜನರು ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ 50 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Islamic State claims responsibility for mosque explosion in Pakistan's  Peshawar | World News - Hindustan Times

2018ರ ಜುಲೈನಲ್ಲಿ ಪೇಶಾವರದ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದ್ದ ಬಾಂಬ್ ಸ್ಫೋಟದ ನಂತರ ಇದೇ ಮೊದಲ ಬಾರಿಗೆ ಇಷ್ಟು ಪ್ರಬಲವಾದ ಸ್ಫೋಟ ನಡೆದಿದೆ. ಶುಕ್ರವಾರದ ಬಾಂಬ್ ಸ್ಫೋಟದ ಘಟನೆಯನ್ನು ತಾವೇ ನಡೆಸಿದ್ದಾಗಿ ಐಸಿಸ್ ಭಯೋತ್ಪಾದಕರಿಗೆ ಸೇರಿದ ಅಮಕ್ ನ್ಯೂಸ್ ಏಜನ್ಸಿ ಹೇಳಿಕೊಂಡಿದೆ.

ಪೇಶಾವರದಿಂದ 200 ಕಿಮೀ ದೂರದ ರಾವಲ್ಪಿಂಡಿಯಲ್ಲಿ ಪಾಕಿಸ್ಥಾನ- ಆಸ್ಟ್ರೇಲಿಯಾ ಮಧ್ಯೆ ಟೆಸ್ಟ್ ಕ್ರಿಕೆಟ್ ಆರಂಭಗೊಂಡಿದ್ದು, ಅದೇ ಹಿನ್ನೆಲೆಯಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ ಎನ್ನಲಾಗುತ್ತಿದೆ. ಭದ್ರತಾ ಕಾರಣಗಳಿಂದಾಗಿ ಆಸ್ಟ್ರೇಲಿಯಾ ತಂಡ ಹಲವಾರು ವರ್ಷಗಳಿಂದ ಪಾಕಿಸ್ಥಾನಕ್ಕೆ ಪ್ರವಾಸ ಬರುವುದರಿಂದ ದೂರ ಉಳಿದಿತ್ತು. ಇದೀಗ ಟೆಸ್ಟ್ ಕ್ರಿಕೆಟ್ ಆರಂಭಗೊಂಡ ಬೆನ್ನಲ್ಲೇ ಸ್ಫೋಟ ನಡೆದಿದೆ. ಕೆಲವು ವರದಿಗಳ ಪ್ರಕಾರ, ಬಾಂಬ್ ದಾಳಿ ಘಟನೆಯನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಖೊರಸಾನ್ ಉಗ್ರರು ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಫ್ಘಾನಿಸ್ತಾನ ಮೂಲದ ವ್ಯಕ್ತಿ ಆತ್ಮಹತ್ಯಾ ಬಾಂಬರ್ ಆಗಿ ಶಿಯಾ ಮುಸ್ಲಿಮರ ಮಸೀದಿಗೆ ನುಗ್ಗಿ ಸ್ಫೋಟ ನಡೆಸಿದ್ದಾಗಿ ಹೇಳಲಾಗುತ್ತಿದೆ.

A bombing inside a mosque in the north-western Pakistani city of Peshawar has killed at least 60 people, medics say. A hospital spokesman said more than 200 people were wounded in the suspected suicide attack on the Shia mosque while Friday prayers were being held.