ಪ್ಯಾಲೆಸ್ತೀನಲ್ಲಿ ಭಾರತದ ರಾಯಭಾರಿ ನಿಗೂಢ ಸಾವು ; ಕಚೇರಿಯಲ್ಲೇ ಸಾವನ್ನಪ್ಪಿದ ಸ್ಥಿತಿಯಲ್ಲಿ ಮುಕುಲ್ ಆರ್ಯ ಶವ ಪತ್ತೆ ! 

07-03-22 07:20 pm       HK Desk news   ದೇಶ - ವಿದೇಶ

ಪ್ಯಾಲೆಸ್ತೀನ್ ದೇಶದಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ಮುಕುಲ್ ಆರ್ಯ ನಿಗೂಢ ಸಾವನ್ನಪ್ಪಿದ್ದು ಅವರ ಮೃತದೇಹ ಭಾನುವಾರ ರಮಲ್ಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪತ್ತೆಯಾಗಿದೆ. 

ನವದೆಹಲಿ, ಮಾ.7 :ಪ್ಯಾಲೆಸ್ತೀನ್ ದೇಶದಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ಮುಕುಲ್ ಆರ್ಯ ನಿಗೂಢ ಸಾವನ್ನಪ್ಪಿದ್ದು ಅವರ ಮೃತದೇಹ ಭಾನುವಾರ ರಮಲ್ಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪತ್ತೆಯಾಗಿದೆ. 

ಪ್ಯಾಲೆಸ್ಟೇನ್ನಲ್ಲಿರುವ ಭಾರತೀಯ ರಾಯಭಾರಿ ಮುಕುಲ್ ನಿಧನ ಆಗಿರುವುದನ್ನು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಟ್ವೀಟ್ ಮಾಡಿದ್ದು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‌

Mukul Arya Palestine: Know more about Mukul Arya, India's representative at  Ramallah who was found dead in embassy

ಮುಕುಲ್ ಆರ್ಯ ಸಾವಿನ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. 2008ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಆರ್ಯ, ಈ ಮೊದಲು ಕಾಬೂಲ್ ಮತ್ತು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಕೆಲಸ ಮಾಡಿದ್ದರು. 

ಮೃತದೇಹವನ್ನು ಭಾರತಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡುವಂತೆ ಮತ್ತು ಸಾವಿಗೆ ಕಾರಣ ಪತ್ತೆ ಮಾಡಲು ಪ್ಯಾಲೆಸ್ತೀನ್ ಅಧ್ಯಕ್ಷ ಅಬ್ಬಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ‌ಘಟನೆ ಬಗ್ಗೆ ಪ್ಯಾಲೆಸ್ತೀನ್ ವಿದೇಶಾಂಗ ಸಚಿವ, ಭಾರತದ ವಿದೇಶ ಮಂತ್ರಿ ಜೈಶಂಕರ್ ಜೊತೆ ಮಾತುಕತೆ ನಡೆಸಿದ್ದಾರೆ. ‌

The Palestinian Foreign Ministry says President Mahmoud Abbas and Prime Minister Mohammed Shataya have ordered security and police officers to visit the residence of Mokal Arya and conduct a thorough investigation into the situation.