ಹವಾನಿಯಂತ್ರಿತ ಮನೆಯಲ್ಲಿ ಘೋರ ಅವಾಂತರ ; ನಿದ್ದೆ ಮಂಪರಿನಲ್ಲೇ ಜೀವಂತ ಸುಟ್ಟುಹೋದ ಐವರು ! ಗಾಳಿಯಾಡದ ಮನೆಗೆ ಏಸಿ ಹೊಗೆಯೇ ಶಾಪವಾಯ್ತು ! 

08-03-22 03:54 pm       HK News Desk   ದೇಶ - ವಿದೇಶ

ಪೂರ್ತಿ ಹವಾನಿಯಂತ್ರಿತ ಆಗಿದ್ದ ಎರಡಂತಸ್ತಿನ ಮನೆಯೊಂದಕ್ಕೆ ನಡುರಾತ್ರಿಯಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿ ಮಲಗಿದ್ದ ಎಂಟು ತಿಂಗಳ ಮಗು ಸೇರಿದಂತೆ ಕುಟುಂಬದ ಐವರು ಸದಸ್ಯರು ನಿದ್ದೆ ಮಂಪರಿನಲ್ಲೇ ಜೀವಂತ ಸುಟ್ಟು ಕರಕಲಾದ ಘಟನೆ ತಿರುವನಂತಪುರದಲ್ಲಿ ನಡೆದಿದೆ.

Photo credits : Kaumudi Online

ತಿರುವನಂತಪುರ, ಮಾ.8: ಪೂರ್ತಿ ಹವಾನಿಯಂತ್ರಿತ ಆಗಿದ್ದ ಎರಡಂತಸ್ತಿನ ಮನೆಯೊಂದಕ್ಕೆ ನಡುರಾತ್ರಿಯಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿ ಮಲಗಿದ್ದ ಎಂಟು ತಿಂಗಳ ಮಗು ಸೇರಿದಂತೆ ಕುಟುಂಬದ ಐವರು ಸದಸ್ಯರು ನಿದ್ದೆ ಮಂಪರಿನಲ್ಲೇ ಜೀವಂತ ಸುಟ್ಟು ಕರಕಲಾದ ಘಟನೆ ತಿರುವನಂತಪುರದಲ್ಲಿ ನಡೆದಿದೆ.

ರಾಜಧಾನಿ ಹೊರವಲಯದ ವರ್ಕಲಾ ಎಂಬಲ್ಲಿ ಈ ಭೀಕರ ಘಟನೆ ನಡೆದಿದ್ದು ಸ್ಥಳೀಯರು ಮತ್ತು ಅಧಿಕಾರಿಗಳಲ್ಲಿ ತೀವ್ರ ಅಚ್ಚರಿ ಸೃಷ್ಟಿಸಿದೆ. ರಾತ್ರೋರಾತ್ರಿ ಬೆಂಕಿ ಹೊತ್ತಿಕೊಂಡು ಇಡೀ ಮನೆ ಸುಟ್ಟು ಹೋಗಿದ್ದಲ್ಲದೆ, ಹೊರಗಡೆ ನಿಲ್ಲಿಸಿದ್ದ ಒಂದು ಕಾರು, ಮೂರು ದ್ವಿಚಕ್ರ ವಾಹನವೂ ಕರಕಲಾಗಿವೆ.‌

ಸ್ಥಳೀಯ ಮಟ್ಟದಲ್ಲಿ ತರಕಾರಿ ವ್ಯಾಪಾರಿಯಾಗಿ ಹೆಸರು ಗಳಿಸಿರುವ ಪ್ರತಾಪನ್ ಅವರ ಮನೆಗೆ ಸೋಮವಾರ ತಡರಾತ್ರಿ 1.30 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಪ್ರತಾಪನ್ (62), ಅವರ ಪತ್ನಿ ಶೆರ್ಲಿ (53), ಹಿರಿಯ ಮಗನ ಪತ್ನಿ ಅಭಿರಾಮಿ (25), ಕಿರಿಯ ಮಗ ಅಹಿಲ್(26) ಹಾಗೂ  ಅಭಿರಾಮಿ ಅವರ ಎಂಟು ತಿಂಗಳ ಮಗು ರಾಯನ್ ಮಲಗಿದಲ್ಲೇ ಶವವಾಗಿದ್ದಾರೆ. 

Fire in Varkala: AC aggravated the level of disaster, fire spread from house,  five die after smoke inhalation - KERALA - GENERAL | Kerala Kaumudi Online

ರಾತ್ರಿ ವೇಳೆ, ಮನೆ ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ಮನೆಮಂದಿಯನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಫೋನ್ ಕರೆಯನ್ನೂ ಮಾಡಿದರೂ, ಯಾರೂ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಸಿಬಂದಿ ಬಂದು ಮನೆಯ ಬಾಗಿಲನ್ನು ಒಡೆದು ಒಳಹೊಕ್ಕಿದ್ದಾರೆ. ಅಗ್ನಿಶಾಮಕ ಸಿಬಂದಿ ಬರುವಾಗ ಗಂಟೆ 2.45 ಆಗಿತ್ತು. ಮನೆಯೊಳಗೆ ನೋಡಿದಾಗ, ಮಲಗಿದಲ್ಲಿಯೇ ಬೆಡ್ ಸಹಿತ ಶವಗಳು ಉರಿಯುತ್ತಿದ್ದವು. ಹಿರಿಯ ಮಗ ನಿಹಿಲ್ (29) ಸುಟ್ಟ ಗಾಯಗಳೊಂದಿಗೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎನ್ನುವ ಬಗ್ಗೆ ಖಚಿತವಾಗಿ ಅಗ್ನಿಶಾಮಕ ಸಿಬಂದಿಯೂ ಹೇಳಲಿಲ್ಲ. ಎರಡು ಅಂತಸ್ತಿನ ಮನೆಯಾಗಿದ್ದು ಮನೆಯಲ್ಲಿ ಗಾಳಿಯಾಡುವುದಕ್ಕೂ ಜಾಗ ಇರಲಿಲ್ಲ. ಕಿಟಕಿ, ಬಾಗಿಲು ಪೂರ್ತಿ ಬಂದ್ ಆಗಿದ್ದು ಏಸಿ ಚಾಲನೆಯಲ್ಲಿತ್ತು. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಒಳಭಾಗದಲ್ಲಿ ಹೊಗೆ ತುಂಬಿಕೊಂಡಿತ್ತು. ಮನೆಮಂದಿ ಹೊಗೆಯಿಂದಾಗಿಯೇ ನಿದ್ದೆಯ ಮಂಪರಿನಲ್ಲೇ ಪ್ರಜ್ಞೆ ತಪ್ಪಿದ್ದಾರೆ ಎನ್ನಲಾಗುತ್ತಿದೆ.‌ 

house

ಹೊರಗೆ ನಿಲ್ಲಿಸಿದ್ದ ಪೋರ್ಶೆ ಕಾರಿಗೆ ಬೆಂಕಿ ಹೊತ್ತಿಕೊಂಡು ಮೂರು ದ್ವಿಚಕ್ರ ವಾಹನಗಳು ಸುಟ್ಟು ಹೋಗಿದ್ದು ಅಲ್ಲಿಂದಲೇ ಎರಡಂತಸ್ತಿನ ಮನೆಗೆ ಬೆಂಕಿ ಹರಡಿತ್ತು. ಒಳಗೆ ನಿದ್ದೆಯಲ್ಲಿದ್ದವರಿಗೆ ಎಚ್ಚರ ಆಗಿರಲಿಲ್ಲ. ಹವಾ ನಿಯಂತ್ರಣ ಇದ್ದುದರಿಂದ ಏಸಿ ಮೆಷಿನಲ್ಲಿ ಯಾವ ಅನಿಲ ಒಳ ಹೋಗುತ್ತದೋ ಅದಷ್ಟೇ ಒಳಗಿರುತ್ತದೆ. ಏಸಿ ಮೆಷಿನಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಒಳಗಡೆ ಕಲುಷಿತ ವಾಯು ಪೂರೈಕೆಯಾಗಿದ್ದು ಅದನ್ನು ಸೇವಿಸಿದವರು ನಿದ್ದೆಯಲ್ಲೇ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು ಎನ್ನುವ ಶಂಕೆಯನ್ನು ಅಗ್ನಿಶಾಮಕ ಸಿಬಂದಿ ವ್ಯಕ್ತಪಡಿಸಿದ್ದಾರೆ. ‌

ಘಟನೆ ಬಗ್ಗೆ ಸ್ಥಳೀಯರು ಮತ್ತು ಅಧಿಕಾರಿ ವಲಯದಿಂದ ತೀವ್ರ ಆಘಾತ ವ್ಯಕ್ತವಾಗಿದ್ದು ಡಿಐಜಿ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದಾರೆ. ಇದೇ ವೇಳೆ, ಘಟನೆ ಬಗ್ಗೆ ಭಾರೀ ಸಂಶಯವೂ ಕೇಳಿಬಂದಿದ್ದು ಕಾರಿಗೆ ಬೆಂಕಿ ಹತ್ತಿಕೊಳ್ಳಲು ಹೊರಗಿನ ಕೈವಾಡ ಇದೆಯೇ, ಶಾರ್ಟ್ ಸರ್ಕ್ಯೂಟ್ ಆಗಿ ಸಹಜವಾಗಿಯೇ ಬೆಂಕಿ ಹತ್ತಿದೆಯೇ ಎಂಬ ಪ್ರಶ್ನೆ ಕೇಳಿಬಂದಿದೆ.

Fire and rescue officials said the death of five members of a family in Varkala was after they inhaled smoke. They stated that the burns are not the cause of death and that preliminary examination did not find any suspicion.