Election 2022 Live:  ಉತ್ತರದಲ್ಲಿ ಬಿಜೆಪಿ ಕಮಾಲ್ ; ಯೋಗಿಗೇ ಮತ್ತೆ ಜೈಕಾರ, ಸಿಖ್ಖರ ನಾಡಲ್ಲಿ ಕೇಜ್ರಿಗೆ ಕಿರೀಟ, ಕಾಂಗ್ರೆಸ್ ಧೂಳೀಪಟ! ಗೋವಾದಲ್ಲೂ ಕಮಲ ಕಲಿಗಳ ಮುನ್ನಡೆ !

10-03-22 10:59 am       HK Desk news   ದೇಶ - ವಿದೇಶ

 ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಚ್ಚಳವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಉತ್ತರ ಪ್ರದೇಶದ ಮತದಾರ ಸಂಪೂರ್ಣ ಬೆಂಬಲ ನೀಡಿದ್ದಾನೆ.

ನವದೆಹಲಿ, ಮಾ.10 : ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಚ್ಚಳವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಉತ್ತರ ಪ್ರದೇಶದ ಮತದಾರ ಸಂಪೂರ್ಣ ಬೆಂಬಲ ನೀಡಿದ್ದಾನೆ. ಬೆಳಗ್ಗೆ 10.30 ಗಂಟೆಯ ವರೆಗಿನ ಫಲಿತಾಂಶದಲ್ಲಿ ಬಿಜೆಪಿ 263 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಸಮಾಜವಾದಿ ಪಾರ್ಟಿ 111 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.

ಅತಂತ್ರ ಫಲಿತಾಂಶ ನಿರೀಕ್ಷಿಸಿದ್ದ ಗೋವಾದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರ ಸ್ಥಾಪಿಸುವ ಸಾಧ್ಯತೆ ಕಂಡುಬಂದಿದೆ. ಬಿಜೆಪಿ 17 ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಇದೇ ವೇಳೆ, ಟಿಎಂಸಿ ಮತ್ತು ಇತರರು ಎಂಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

Cong wants to divide nation for votes: Yogi Adityanath hits out at Punjab  CM over 'UP, Bihar ke bhaiya' remark - Elections News

ಮಣಿಪುರದಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 17 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳು ಬೇಕಾಗಿದ್ದು, ಬಹುತೇಕ ಅತಂತ್ರ ಫಲಿತಾಂಶ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ಥಾಪಿಸುವತ್ತ ಮುನ್ನುಗ್ಗಿದೆ. ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಕಾಂಗ್ರೆಸ್ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಪಂಜಾಬ್ ನಲ್ಲಿ ಆಡಳಿತಾರೂಢ ಕಾಂಗ್ರೆಸಿಗೆ ತೀವ್ರ ಮುಖಭಂಗ ಆಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಆಪ್ ಪಕ್ಷ ಮುನ್ನಡೆ ತೋರಿದೆ. ಆಪ್ ಪಕ್ಷ 88 ಸ್ಥಾನಗಳಲ್ಲಿ ಮುನ್ನಡೆ, ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆ, ಅಕಾಲಿದಳ 8 ಸ್ಥಾನಗಳಲ್ಲಿ ಮುನ್ನಡೆ ಇರುವುದು ಕಂಡುಬಂದಿದೆ. ಪಂಜಾಬ್ ನಲ್ಲಿ ಸಮೀಕ್ಷೆ ಭವಿಷ್ಯದಂತೆ ಬಹುತೇಕ ಕ್ಲೀನ್ ಸ್ವೀಪ್ ಸಾಧಿಸುವ ಸಾಧ್ಯತೆ ಕಂಡುಬಂದಿದೆ. ಸಿಖ್ಖರ ನಾಡಿನಲ್ಲಿ ಕಳೆದ ಚುನಾವಣೆಯಲ್ಲಿ ಆಪ್ 20 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಇಡೀ ರಾಜ್ಯವನ್ನು ಆವರಿಸಿಕೊಂಡಿದ್ದು, ಕಾಂಗ್ರೆಸಿನ ಒಳಜಗಳದ ಲಾಭವನ್ನು ಪಡೆದುಕೊಂಡಿದೆ.

bjp flag animation|modi wave - YouTube

ಒಟ್ಟಿನಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಮತ್ತೆ ಬಹುಮತ ಗಳಿಸುವತ್ತ ಮುನ್ನುಗ್ಗಿದೆ. ಪಂಜಾಬ್ ನಲ್ಲಿ ಆಪ್ ಗೆ ಅಧಿಕಾರ ಕೊಟ್ಟರೆ, ಗೋವಾದಲ್ಲಿ ಬಿಜೆಪಿ ಮತ್ತೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Early numbers show that the Bharatiya Janata Party (BJP) has crossed the halfway mark. The saffron party, led by Chief Minister Yogi Adityanath, is looking to retain its power in Uttar Pradesh.