ಕೇಜ್ರಿ ಟೋಪಿಗೆ ಸಿಖ್ಖರ ಜೈಕಾರ, ಅಧಿಕಾರಕ್ಕೆ ಕಿತ್ತಾಡಿದ ನಾಯಕರಿಗೆ ಶಾಕ್, ಸಿಎಂ ಚನ್ನಿಗೆ ಹಿನ್ನಡೆ, ಅಮರಿಂದರ್ ಕಾಲೆಳೆದ ಸಿಧು 3ನೇ ಸ್ಥಾನಕ್ಕೆ, ಅಮರಿಂದರ್, ಬಾದಲ್ ಗೂ ಮುಖಭಂಗ! ಹೊಸ ಸಿಎಂ ಭಗವಂತ  

10-03-22 12:08 pm       HK Desk news   ದೇಶ - ವಿದೇಶ

ದೆಹಲಿಗೆ ಮಾತ್ರ ಸೀಮಿತ ಆಗಿದ್ದ ಅರವಿಂದ ಕೇಜ್ರಿವಾಲರ ಆಪ್ ಈಗ ಪಂಜಾಬಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಸ್ಥಾಪಿಸುವತ್ತ ಮುನ್ನುಗ್ಗಿದೆ.

ಚಂಡೀಗಢ, ಮಾ.10: ದೆಹಲಿಗೆ ಮಾತ್ರ ಸೀಮಿತ ಆಗಿದ್ದ ಅರವಿಂದ ಕೇಜ್ರಿವಾಲರ ಆಪ್ ಈಗ ಪಂಜಾಬಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಸ್ಥಾಪಿಸುವತ್ತ ಮುನ್ನುಗ್ಗಿದೆ. ಕಾಂಗ್ರೆಸ್ ನಾಯಕರ ಒಳಜಗಳ, ಅಧಿಕಾರಕ್ಕಾಗಿ ನಡೆಸಿದ್ದ ಕಿತ್ತಾಟಕ್ಕೆ ಅಲ್ಲಿನ ಮತದಾರ ಚಾಟಿ ಬೀಸಿದ್ದಾನೆ. ಆಪ್ 87 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಕೇವಲ 15 ಕ್ಷೇತ್ರಗಳಲ್ಲಿ ಮುನ್ನಡೆ ಉಳಿಸಿಕೊಂಡಿದೆ.

ಸುದೀರ್ಘ ಕಾಲದಿಂದ ಸಿಖ್ಖರ ನಾಡಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಾಲಿಗೆ ಅತ್ಯಂತ ಹೀನಾಯ ಸೋಲಿನ ಫಲಿತಾಂಶವನ್ನು ಮತದಾರ ನೀಡಿದ್ದಾನೆ. ವಿಚಿತ್ರ ಅಂದರೆ, ಸಿಎಂ ಚರಣ್ ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಚ್ಚರಿಯ ಹಿನ್ನಡೆ ಸಾಧಿಸಿದ್ದಾರೆ. ಚನ್ನಿ ಮಂತ್ರಿ ಮಂಡಲದ 17 ಮಂದಿಯ ಪೈಕಿ 12 ಮಂದಿ ಹಿನ್ನಡೆ ಅನುಭವಿಸಿದ್ದಾರೆ.

New twist in Punjab politics, Navjot Singh Sidhu resigns as state Congress  chief

ಸಿಧು ಸ್ಪರ್ಧಿಸಿದ್ದ ಅಮೃತಸರ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಆಪ್ ಪಕ್ಷದ ಜೀವನಜ್ಯೋತ್ ಕೌರ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಅಕಾಲಿದಳದ ಅಭ್ಯರ್ಥಿ ಬಿಕ್ರಿಮ್ ಮಜೀತಿಯಾ ಇದ್ದಾರೆ. ಪಂಜಾಬಲ್ಲಿ ಹಿಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯ ಎದ್ದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದ ಸಿಧು ಪಾಲಿಗೆ ತೀವ್ರ ಮುಖಭಂಗ ಆಗುವಂತಾಗಿದೆ.

AAP's Bhagwant Mann tries to woo voters in high-stakes Dhuri battle |  Business Standard News

ಇದೇ ವೇಳೆ, ಆಪ್ ಪಕ್ಷದ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮನ್ನ್ ಧುರಿ ವಿಧಾನಸಭೆ ಕ್ಷೇತ್ರದಲ್ಲಿ 17 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆಪ್ ಪಕ್ಷವು ಪಂಜಾಬ್ ನಲ್ಲಿ 88 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಚಂಡೀಗಢದ ಪಕ್ಷದ ಕಚೇರಿಯ ಬಳಿ ಸಂಭ್ರಮಾಚರಣೆ ಕಾಣಿಸಿಕೊಂಡಿದೆ. ಕಾರ್ಯಕರ್ತರು ಸಿಹಿ ಹಂಚಿ, ಕುಣಿದು ಕುಪ್ಪಳಿಸಿದ್ದಾರೆ.

Bundle of lies': Oppn parties trash CM Amarinder Singh's 3-year report card  | Cities News,The Indian Express

ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತನ್ನ ತವರು ಕ್ಷೇತ್ರ ಪಾಟಿಯಾಲದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆಪ್ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೋಹ್ಲಿ 6 ಸಾವಿರ ಮತಗಳಿಂದ ಅಮರಿಂದರ್ ಸಿಂಗ್ ಕ್ಷೇತ್ರದಲ್ಲಿ ಮುನ್ನಡೆ ಕಂಡಿದ್ದಾರೆ. ಅಕಾಲಿದಳ ಪಕ್ಷದ ವರಿಷ್ಠ ಪ್ರಕಾಶ್ ಸಿಂಗ್ ಬಾದಲ್ ಲಾಂಬಿ ಕ್ಷೇತ್ರದಲ್ಲಿ ಹಿನ್ನಡೆ ಕಂಡಿದ್ದಾರೆ. ಅವರ ಪುತ್ರ, ಮಾಜಿ ಡಿಸಿಎಂ ಸುಖಬೀರ್ ಬಾದಲ್ ಜಲಾಲಬಾದ್ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಇದೇ ವೇಳೆ, ಹಾಲಿ ಹಣಕಾಸು ಸಚಿವ ಮನ್ ಪ್ರೀತ್ ಬಾದಲ್ ಬತಿಂಡಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸಿನಿಂದ ಮೋಗಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಚಿತ್ರನಟ ಸೋನು ಸೂದ್ ಸೋದರಿ ಮಾಳವಿಕಾ ಸೂದ್ ಕೂಡ ಹಿನ್ನಡೆ ಕಂಡಿದ್ದಾರೆ.

Arvind Kejriwal promises Rs 1,000 to women, Rs 5,000 to jobless youths  monthly if voted to power in- The New Indian Express

ಆಪ್ ಪಕ್ಷವು ಭಾರೀ ಬಹುಮತ ಸಾಧಿಸುವುದರೊಂದಿಗೆ ಹಾಲಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಕೆಲವೇ ಕ್ಷಣಗಳಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸುಳಿವು ನೀಡಿದ್ದಾರೆ. ಭಗವಂತ್ ಮನ್ನ್ ಸಿಖ್ಖರ ನಾಡಲ್ಲಿ ಹೊಸ ಮುಖ್ಯಮಂತ್ರಿ ಆಗುವತ್ತ ದಾಂಗುಡಿ ಇಟ್ಟಿದ್ದಾರೆ. ಅರವಿಂದ ಕೇಜ್ರಿವಾಲ್ ಹುಟ್ಟುಹಾಕಿದ್ದ ಆಪ್ ಪಕ್ಷ ಮೊದಲ ಬಾರಿಗೆ ದೆಹಲಿ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಲು ಮುಂದಾಗಿದ್ದು ಹೊಸ ಮೈಲಿಗಲ್ಲು. ಆಪ್ ಆಡಳಿತ ಶೈಲಿಗೆ ಮತದಾರ ಜೈಕಾರ ಹಾಕಿದ್ದು ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

The counting of votes for the recently held 117-seat Punjab election 2022 began at 8 am today (March 10, 2022). Punjab went for polling on February 20, 2022. According to the state's Chief Electoral Officer (CEO), Punjab, which has over 2.14 crore eligible voters, recorded 71.95 per cent polling, down from 77 per cent recorded in 2017.