ಪಂಜಾಬ್ ನಲ್ಲಿ ಕಾಂಗ್ರೆಸ್​ ಸ್ಥಾನವನ್ನ  ಆಮ್ ಆದ್ಮಿ ಪಕ್ಷ ತುಂಬಿದೆ, ಅರವಿಂದ್ ಕೇಜ್ರಿವಾಲ್​​ ಪ್ರಧಾನಿ ಆಗ್ತಾರೆ ; ರಾಘವ್​ ಚಡ್ಡಾ

10-03-22 12:49 pm       HK Desk news   ದೇಶ - ವಿದೇಶ

ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಈ ಮೂಲಕ ಕಾಂಗ್ರೆಸ್ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಕೇಸರೆರಚಾಟದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವಿಚಾರವಾಗಿ ರಾಘವ್​ ಚಡ್ಡಾ ಮಾತನಾಡಿದ್ದಾರೆ.

ನವದೆಹಲಿ, ಮಾ 10: ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಈ ಮೂಲಕ ಕಾಂಗ್ರೆಸ್ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಕೇಸರೆರಚಾಟದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವಿಚಾರವಾಗಿ ರಾಘವ್​ ಚಡ್ಡಾ ಮಾತನಾಡಿದ್ದಾರೆ.

ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಸ್ಥಾನವನ್ನ ಇದೀಗ ಎಎಪಿ ತುಂಬುತ್ತಿದ್ದು, ಬರುವ ದಿನಗಳಲ್ಲಿ ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದಿದ್ದಾರೆ. ಪಂಜಾಬ್​ನಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದು, ದಶಕಗಳಿಂದ ಇಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳ ಗದ್ದುಗೆ ಅಲಗಾಡುತ್ತಿದೆ ಎಂದರು. ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್​​ ಬಿಜೆಪಿಗೆ ಪ್ರಮುಖ ಸವಾಲು ಆಗಲಿದ್ದು, ಅವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು. ಎಎಪಿ ಇದೀಗ ಕಾಂಗ್ರೆಸ್​ ಸ್ಥಾನ ತುಂಬುತ್ತಿದೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿರುವ ಎಎಪಿ ಮುಖಂಡ ಮನೀಶ್ ಸಿಸೋಡಿಯಾ, ಕೇಜ್ರಿವಾಲ್​ ಮಾದರಿ ಆಡಳಿತಕ್ಕೆ ಪಂಜಾಬ್​​ ಮನಸೋತಿದ್ದು, ಆಡಳಿತ ನಡೆಸಲು ಅವಕಾಶ ನೀಡಿದೆ. ಈ ಮಾದರಿ ಬರುವ ದಿನಗಳಲ್ಲಿ ರಾಷ್ಟ್ರದ ತುಂಬೆಲ್ಲ ವಿಸ್ತರಣೆಯಾಗಲಿದೆ ಎಂದರು.

As the Aam Aadmi Party (AAP) stacked up a spectacular victory in Punjab, wiping out the Congress and taking its second state after Delhi, the party's Raghav Chadha said AAP has "now become a national party" and will soon replace the Congress as the country's biggest opposition.