ಸ್ವಾತಂತ್ರ್ಯದ ನಂತರ ವ್ಯವಸ್ಥೆಯು ಬದಲಾಗದಿದ್ದರೆ ಏನೂ ಬದಲಾಗುವುದಿಲ್ಲ ; ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ,  ಅರವಿಂದ್ ಕೇಜ್ರಿವಾಲ್ 

10-03-22 05:32 pm       HK Desk news   ದೇಶ - ವಿದೇಶ

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, "ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ," ಎಂದು ಹೇಳಿದರು.

ಚಂಡೀಗಢ, ಮಾ 10: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, "ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ," ಎಂದು ಹೇಳಿದರು.

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಉಲ್ಲೇಖವನ್ನು ಮಾಡಿದ್ದಾರೆ. "ಸ್ವಾತಂತ್ರ್ಯದ ನಂತರ ವ್ಯವಸ್ಥೆಯು ಬದಲಾಗದಿದ್ದರೆ ಏನೂ ಬದಲಾಗುವುದಿಲ್ಲ," ಎಂದು ತಿಳಿಸಿದ್ದಾರೆ.

See the source image

ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಅವರು ಏನನ್ನೂ ಬದಲಾಯಿಸಲಿಲ್ಲ," ಎಂದು ವಿಪಕ್ಷಗಳ ವಿರುದ್ಧ ಟೀಕೆ ಮಾಡಿದ ಅರವಿಂದ್ ಕೇಜ್ರಿವಾಲ್‌, "ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ," ಎಂದು ಹೇಳಿದರು. "ನಾವು ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ, ನಾವು ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದೇವೆ," ಎಂದು ಅರವಿಂದ್ ಕೇಜ್ರಿವಾಲ್ ಉಲ್ಲೇಖ ಮಾಡಿದರು.

See the source image

ನಾನು ಪಂಜಾಬ್‌ ಮುಖ್ಯಮಂತ್ರಿ ಆಗಲಿರುವ ನನ್ನ ಸಹೋದರ ಭಗವಂತ್‌ ಮಾನ್‌ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಆಪ್‌ 90ಕ್ಕೂ ಅಧಿಕ ಸ್ಥಾನವನ್ನು ದಾಟಿದೆ. ಫಲಿತಾಂಶಗಳು ಇನ್ನೂ ಕೂಡಾ ಬರುತ್ತಿದೆ. ಜನರು ನಮ್ಮ ಮೇಲೆ ಅಪಾರ ನಂಬಿಕೆಯನ್ನು ಇರಿಸಿದ್ದಾರೆ. ನಾವು ಆ ನಂಬಿಕೆಗೆ ದಕ್ಕೆ ಉಂಟು ಮಾಡುವುದಿಲ್ಲ. ನಾವು ಈ ದೇಶದ ರಾಜಕೀಯವನ್ನು ಬದಲಾವಣೆ ಮಾಡುತ್ತೇವೆ," ಎಂದು ತಿಳಿಸಿದರು.

ಇನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರುವಂತೆ ಕೇಜ್ರಿವಾಲ್ ಪಂಜಾಬ್ ಜನತೆಗೆ ಮನವಿ ಮಾಡಿದರು. "ನಾನು ಪಂಜಾಬ್‌ನ ಜನರನ್ನು ಎಎಪಿಗೆ ಸೇರಲು ಮನವಿ ಮಾಡಲು ಬಯಸುತ್ತೇನೆ. ಕೆಲವೊಮ್ಮೆ ಜನರು ಏನು ಮಾಡಬಹುದು ಎಂದು ಯೋಚಿಸುತ್ತಾರೆ. ಅವರು ಸಾಮಾನ್ಯ ಜನರು. ಆದರೆ ನಾನು ಜನರನ್ನು ಕೇಳಲು ಬಯಸುತ್ತೇನೆ. ಚನ್ನಿಯನ್ನು ಸೋಲಿಸಿದವರು ಯಾರು?," ಎಂದು ಪ್ರಶ್ನೆ ಮಾಡಿದರು.

Delhi Chief Minister and Aam Aadmi Party (AAP) national convenor Arvind Kejriwal on Thursday termed the massive victory of his party in Punjab as 'Inquilab'.