ಜನಾದೇಶ ಗೆದ್ದವರಿಗೆ ಶುಭಾಶಯಗಳು, ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ; ರಾಹುಲ್​ ಗಾಂಧಿ ಟ್ವೀಟ್ 

10-03-22 05:42 pm       HK Desk news   ದೇಶ - ವಿದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶ ಗೆದ್ದವರಿಗೆ ಶುಭಾಶಯಗಳು. ಈ ಚುನಾವಣಾ ಫಲಿತಾಂಶದಿಂದ ನಾವು ಸಾಕಷ್ಟು ವಿಚಾರ ಕಲಿತ್ತಿದ್ದೇವೆ ಎಂದಿದ್ದಾರೆ.

ನವದೆಹಲಿ, ಮಾ 10: ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶ ಗೆದ್ದವರಿಗೆ ಶುಭಾಶಯಗಳು. ಈ ಚುನಾವಣಾ ಫಲಿತಾಂಶದಿಂದ ನಾವು ಸಾಕಷ್ಟು ವಿಚಾರ ಕಲಿತ್ತಿದ್ದೇವೆ ಎಂದಿದ್ದಾರೆ.

ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಶ್ರಮ ಹಾಗೂ ಸಮರ್ಪಣೆಗೆ ನನ್ನ ಕೃತಜ್ಞತೆಗಳು. ಈ ಫಲಿತಾಂಶದಿಂದ ನಾವು ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಉತ್ತರಪ್ರದೇಶ, ಪಂಜಾಬ್​, ಗೋವಾ. ಉತ್ತರಾಖಂಡ್​, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ಎರಡಂಕಿ ದಾಟಿಲ್ಲ. ಈ ರಾಜ್ಯದಲ್ಲಿ ಎಎಪಿ ಬಹುಮತ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಅತ್ತ ಗೋವಾದಲ್ಲಿ ಕಾಂಗ್ರೆಸ್​ ಅನ್ನು ಹಿಂದಿಕ್ಕಿರುವ ಬಿಜೆಪಿಗೆ ಮ್ಯಾಜಿಕ್​ ನಂಬರ್​ ದಾಟಲು ಇನ್ನು 3 ಸ್ಥಾನದ ಅಗತ್ಯವಿದೆಯಷ್ಟೆ. ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್​ನಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ.

Congress leader Rahul Gandhi on Thursday said his party “humbly accepts the people’s verdict” and congratulated the winners of the assembly elections in five states.