ಕೇಸರಿ ಜಯಭೇರಿ ನಡುವೆಯೂ ಜೈಲಿನಲ್ಲಿದ್ದೇ ಸ್ಪರ್ಧಿಸಿ ಗೆದ್ದ ಆಜಂ ಖಾನ್ ; ನೂರಕ್ಕೂ ಹೆಚ್ಚು ಎಫ್ಐಆರ್, ಜೈಲು ಪಾಲಾಗಿಸಿದ್ದ ವಕೀಲನೇ ಬಿಜೆಪಿ ಅಭ್ಯರ್ಥಿ !

10-03-22 09:50 pm       HK Desk news   ದೇಶ - ವಿದೇಶ

ಉತ್ತರ ಪ್ರದೇಶ ಚುನಾವಣೆಯಲ್ಲಿ ಕೆಲವರ ಪಾಲಿಗೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಬಿಜೆಪಿ ಅಧಿಕಾರದಲ್ಲಿದ್ದು ಪಕ್ಷದ ರಾಷ್ಟ್ರೀಯವಾದ ಚಿಂತನೆಗೆ ರಾಜ್ಯದ ಮತದಾರ ಒಲವು ತೋರಿದ್ದರೂ, ಜೈಲಿನಲ್ಲಿದ್ದುಕೊಂಡೇ ಚುನಾವಣೆ ಸ್ಪರ್ಧಿಸಿದ್ದವರನ್ನೂ ಕೈಬಿಟ್ಟಿಲ್ಲ.

ಲಕ್ನೋ, ಮಾ.10: ಉತ್ತರ ಪ್ರದೇಶ ಚುನಾವಣೆಯಲ್ಲಿ ಕೆಲವರ ಪಾಲಿಗೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಬಿಜೆಪಿ ಅಧಿಕಾರದಲ್ಲಿದ್ದು ಪಕ್ಷದ ರಾಷ್ಟ್ರೀಯವಾದ ಚಿಂತನೆಗೆ ರಾಜ್ಯದ ಮತದಾರ ಒಲವು ತೋರಿದ್ದರೂ, ಜೈಲಿನಲ್ಲಿದ್ದುಕೊಂಡೇ ಚುನಾವಣೆ ಸ್ಪರ್ಧಿಸಿದ್ದವರನ್ನೂ ಕೈಬಿಟ್ಟಿಲ್ಲ. ಮುಸ್ಲಿಂ ಬಾಹುಳ್ಯದ ರಾಮ್ ಪುರ್ ಕ್ಷೇತ್ರದಲ್ಲಿ ಸೀತಾಪುರ್ ಜೈಲಿನಿಂದಲೇ ಸ್ಪರ್ಧಿಸಿದ್ದ ಕುಖ್ಯಾತ ಕ್ರಿಮಿನಲ್ ಅಜಂ ಖಾನ್ ಸತತ ಹತ್ತನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಮಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಕೀಲ ಆಕಾಶ್ ಸಕ್ಸೇನಾ ಸ್ಪರ್ಧಿಸಿದ್ದರು. ಸಮಾಜವಾದಿ ಪಕ್ಷದಲ್ಲಿ ಹಾಲಿ ಶಾಸಕರಾಗಿದ್ದ ಆಜಂ ಖಾನ್ ವಿರುದ್ಧ 30ಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿದ್ದ ಸಕ್ಸೇನಾ ಈ ಬಾರಿಯಾದ್ರೂ ಅಜಂ ಖಾನ್ ಅವರನ್ನು ಸೋಲಿಸುತ್ತಾರೆಯೇ ಎನ್ನುವ ಕುತೂಹಲ ಉಂಟಾಗಿತ್ತು. ಯಾಕಂದ್ರೆ, ಆಜಂ ಖಾನ್ ಪ್ರಕರಣ ಒಂದರಲ್ಲಿ ಜೈಲು ಪಾಲಾಗಿದ್ದು, ಸೀತಾಪುರ್ ಜೈಲಿನಲ್ಲಿದ್ದಾರೆ. ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದ ಖಾನ್ ತನ್ನ ಬೆಂಬಲಿಗರ ಮೂಲಕವೇ ಗೆಲುವು ಕಂಡಿದ್ದಾರೆ. ತೀವ್ರ ಸ್ಪರ್ಧೆ ಒಡ್ಡಿದ್ದ ಸಕ್ಸೇನಾ ವಿರುದ್ಧ ಅಜಂ ಖಾನ್ 38 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದರು.

UP Assembly Elections 2022: Case against BJP candidate Akash Saxena in  Rampur know the whole matter - रामपुर में भाजपा प्रत्याशी आकाश सक्सेना पर  मुकदमा, जानिए पूरा मामला

ಆಜಂ ಖಾನ್ 1989ರಲ್ಲಿ ಆಕಾಶ್ ಸಕ್ಸೇನಾ ಅವರ ತಂದೆಯನ್ನು ಸೋಲಿಸಿ ಶಾಸಕರಾಗಿದ್ದರು. ಆಗ ಬಿಜೆಪಿ ಮಂತ್ರಿಯಾಗಿದ್ದ ಶಿವ್ ಬಹಾದುರ್ ಸಕ್ಸೇನಾ ಅವರನ್ನು ಸೋಲಿಸಿ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಆಜಂ ಖಾನ್, ಇಲ್ಲಿ ಸತತ ಗೆಲುವಿನ ಸರದಾರರಾಗಿದ್ದರು. ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ, ಆಜಂ ಖಾನ್ ವಿರುದ್ಧ 50ಕ್ಕೂ ಹೆಚ್ಚು ಕೇಸುಗಳನ್ನು ಹಾಕಿದ್ದು ನಾನೇ, ಗೂಂಡಾ ವ್ಯಕ್ತಿಯನ್ನು ಜೈಲಿಗೆ ಹಾಕಿದ್ದು ನಾನೇ ಎಂದು ಹೇಳಿಕೊಂಡು ಪ್ರಚಾರ ನಡೆಸಿದ್ದರು. ಇದೇ ವೇಳೆ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಖಾಜಿಮ್ ಆಲಿ ಖಾನ್, ಆಜಂ ಖಾನ್ ಭ್ರಷ್ಟಾಚಾರ, ಕ್ರಿಮಿನಲ್ ಚಟುವಟಿಕೆಯನ್ನು ಹೊರಗೆಳೆದಿದ್ದು ನಾನು ಎಂದು ಪ್ರಚಾರ ಮಾಡಿದ್ದರು.

ರಾಮ್ ಪುರ್ ಜಿಲ್ಲೆಯ ನವಾಬ ಹಿನ್ನೆಲೆಯ ಕುಟುಂಬಸ್ಥರಾಗಿರುವ ಕಾಜಿಮ್ ಆಲಿ ಖಾನ್, ನಾಲ್ಕು ಬಾರಿ ಶಾಸಕರಾಗಿ ಅನುಭವ ಇದ್ದವರು. ರಾಮಪುರ್ ಕ್ಷೇತ್ರದ ಸಂಸದ ಸ್ಥಾನವನ್ನು ಇವರ ಕುಟುಂಬಸ್ಥರೇ ಈ ಹಿಂದೆ ಹೊಂದಿದ್ದರು. ಬಿಲಾಸ್ ಪುರ್ ಕ್ಷೇತ್ರದಲ್ಲಿ 1996ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಕಾಜಿಮ್ ಆಲಿ ಖಾನ್, ಮುಸ್ಲಿಂ ಬಾಹುಳ್ಯದ ರಾಮ್ ಪುರದಲ್ಲಿ ಆಜಂ ಖಾನ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಆದರೆ, ಜೈಲಿನಲ್ಲಿದ್ದೇ ಸ್ಪರ್ಧಿಸಿದ್ದ ಅಜಂ ಖಾನ್ ಕಡೆಗೂ ಗೆಲುವಿನ ನಗೆ ಬೀರಿದ್ದು ವಿಶೇಷ. 2017ರಲ್ಲಿ ಬಿಜೆಪಿ ಅಭ್ಯರ್ಥಿ ಶಿವ್ ಬಹಾದುರ್ ಸಕ್ಸೇನಾ ವಿರುದ್ಧ 46,842 ಮತಗಳಿಂದ ಗೆದ್ದಿದ್ದ ಅಜಂ ಖಾನ್, 2012ರಲ್ಲಿ ಕಾಂಗ್ರೆಸ್ ಪಕ್ಷದ ಡಾ.ತನ್ವೀರ್ ಅಹ್ಮದ್ ಖಾನ್ ವಿರುದ್ಧ 63,269 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಆಜಂ ಖಾನ್ ವಿರುದ್ಧ ರಾಮ್ ಪುರ್ ಜಿಲ್ಲೆ ಒಂದರಲ್ಲೇ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಹೆಚ್ಚಿನವುಗಳಲ್ಲಿ ಪ್ರತಿವಾದಿ ವಕೀಲರಾಗಿ 46 ವರ್ಷದ ಆಕಾಶ್ ಸಕ್ಸೇನಾ ವಾದಿಸುತ್ತಿದ್ದಾರೆ.

UP Polls: Swami Prasad Maurya says farewell to old constituency Padrauna,  to contest from Fazilnagar - Elections News

ಸಚಿವ ಸ್ಥಾನ ಬಿಟ್ಟು ಬಿಜೆಪಿ ತ್ಯಜಿಸಿದ್ದ ಮೌರ್ಯಗೆ ಸೋಲು

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಬಿಟ್ಟು ಸಮಾಜವಾದಿ ಪಾರ್ಟಿ ಸೇರಿದ್ದ ರಾಜ್ಯದ ಪ್ರಮುಖ ಓಬಿಸಿ ನಾಯಕ, ಸ್ವಾಮಿ ಪ್ರಸಾದ್ ಮೌರ್ಯ ಅಚ್ಚರಿಯ ಸೋಲು ಕಂಡಿದ್ದಾರೆ. ಫಾಜಿಲ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವಾಮಿ ಪ್ರಸಾದ್ ವಿರುದ್ಧ ಬಿಜೆಪಿಯ ಸುರೇಂದ್ರ ಕುಮಾರ್ ಕುಶ್ವಾಹ ಗೆಲುವು ಕಂಡಿದ್ದಾರೆ. ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದ ಮೌರ್ಯ, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದಿದ್ದರು. ರಾಜ್ಯದಲ್ಲಿ ಹಿಂದುಳಿದ ವರ್ಗದ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಸಮಾಜವಾದಿ ಪಾರ್ಟಿ ಸೇರಿದ್ದರು.

Punjab Assembly Polls 2022: Rajnath Singh to address public meetings in  poll-bound state today | India News | Zee News

1.8 ಲಕ್ಷ ಮತಗಳಿಂದ ಗೆದ್ದ ರಾಜನಾಥ್ ಪುತ್ರ

ನೋಯ್ಡಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ, ಪಂಕಜ್ ಸಿಂಗ್ 1.8 ಲಕ್ಷ ಭಾರೀ ಮತಗಳಿಂದ ಗೆಲುವು ಕಂಡಿದ್ದಾರೆ. ಹಲವು ವರ್ಷಗಳಿಂದ ರಾಜ್ಯ ಯುವಮೋರ್ಚಾದಲ್ಲಿ ನಾಯಕರಾಗಿದ್ದ ಪಂಕಜ್ ಸಿಂಗ್ ಈಗ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿದ್ದಾರೆ. ಹಾಲಿ ಶಾಸಕರಾಗಿರುವ ಪಂಕಜ್ ಸಿಂಗ್, ಅದೇ ಕ್ಷೇತ್ರದಲ್ಲಿ ಮತ್ತೆ ಆಯ್ಕೆಯಾಗಿದ್ದಾರೆ.

In Rampur, Samajwadi Party's candidate Mohammad Azam Khan is leading against BJP's Akash Saxena (Honey) by 38,374. The counting of votes are in progress. Candidates in the fray were SP's Azam Khan, Congress' Kazim Ali Khan, BJP's Aakash Saxena, AAP's Faisal Khan, BSP's Sadaqat Hussain, and two independents Habib Ul Zafar Khan and Javed Khan.