ಅಂದು ನಗೆಬುಗ್ಗೆ ಹಾರಿಸುತ್ತಿದ್ದ ಭಗವಂತ್ ಮಾನ್ ; ಜಡ್ಜ್ ಆಗಿ ಕುಳಿತಿದ್ದ ಸಿಧು ಎದ್ದು ಬಿದ್ದು ನಗುತ್ತಿದ್ದರು ! ನಟಿಸುವುದೇ ರಾಜಕಾರಣ ಎಂದಿದ್ದವನಿಗೆ ಸಿಎಂ ಪಟ್ಟ !

10-03-22 10:08 pm       HK Desk news   ದೇಶ - ವಿದೇಶ

ಅದು 2006ರಲ್ಲಿ ಪ್ರಸಾರ ಆಗುತ್ತಿದ್ದ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮ. ನವಜೋತ್ ಸಿಂಗ್ ಸಿಧು ನಗೆ ಚಟಾಕಿ ಹಾರಿಸುವ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕುಳಿತಿದ್ದರು.

ನವದೆಹಲಿ, ಮಾ.10: ಅದು 2006ರಲ್ಲಿ ಪ್ರಸಾರ ಆಗುತ್ತಿದ್ದ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮ. ನವಜೋತ್ ಸಿಂಗ್ ಸಿಧು ನಗೆ ಚಟಾಕಿ ಹಾರಿಸುವ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕುಳಿತಿದ್ದರು. ಅತ್ತ ಭಗವಂತ್ ಮಾನ್, ನಗೆ ಬುಗ್ಗೆ ಹಾರಿಸುವ ಕಲಾವಿದನಾಗಿ ವೇದಿಕೆಯಲ್ಲಿ ನಟಿಸುತ್ತಿದ್ದರು. ಭಗವಂತ್ ತೂರಿ ಬಿಡುತ್ತಿದ್ದ ಪ್ರತಿ ಮಾತಿಗೆ ಎದ್ದು ಬಿದ್ದು ನಗುತ್ತಾ ರಿಯಾಲಿಟಿ ಶೋ ನೋಡುತ್ತಿದ್ದವರಲ್ಲೂ ನಗೆ ಉಬ್ಬಿಸುತ್ತಿದ್ದರು ಸಿಧು. ಆಗೆಲ್ಲಾ ಗ್ರೇಟ್ ಇಂಡಿಯನ್ ಕಾಮಿಡಿ ಚಾಲೆಂಜ್ ಜನಪ್ರಿಯ ಕಾರ್ಯಕ್ರಮ ಆಗಿತ್ತು.

ಒಂದು ದಿನ ಕಾರ್ಯಕ್ರಮದ ನಡುವೆ, ಸಿಧು ಒಂದು ಪ್ರಶ್ನೆ ತೂರಿ ಬಿಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಗವಂತ್ ಮಾನ್, ನಾನೊಮ್ಮೆ ಒಬ್ಬರು ರಾಜಕಾರಣಿಯ ಬಳಿ ರಾಜಕಾರಣ ಎಂದರೇನು ಎಂದು ಪ್ರಶ್ನಿಸಿದ್ದೆ. ಅದಕ್ಕೆ ಸರಕಾರ ನಡೆಸುವುದು ಹೇಗೆ ಎಂದು ನಟಿಸುವುದೇ ರಾಜಕಾರಣ ಎಂದಿದ್ದರು. ಪ್ರತಿಯಾಗಿ ಗೌವರ್ನಮೆಂಟ್ ಅಂದರೇನು ಎಂದೂ ಅವರನ್ನೇ ಕೇಳಿದ್ದೆ. ಅದಕ್ಕೆ ಅವರು, ಯಾವುದೇ ವಿಚಾರವನ್ನು ಹತ್ತಿರದಿಂದ ನೋಡುವುದು (ಗೌರ್) ಮತ್ತು ಮರುಕ್ಷಣದಲ್ಲೇ ಮರೆತು ಬಿಡುವುದು (ಮೆಂಟ್) ಎಂದು ಉತ್ತರ ನೀಡಿದ್ದರು ಎಂಬುದನ್ನು ಸಹಜ ಎನ್ನುವ ರೀತಿ ಹೇಳಿದ್ದರು. ಇದನ್ನು ಕೇಳಿದ ಆದಾಗಲೇ ರಾಜಕಾರಣಿಯಾಗಿದ್ದ ನವಜೋತ್ ಸಿಧು ಎದ್ದು ಬಿದ್ದು ನಕ್ಕಿದ್ದರು. ಆಗ ಸಿಧು ಬಿಜೆಪಿಯಲ್ಲಿದ್ದರು.

Laughter will not stop watching Bhagwant Mann's comedy, 5 occasions when  stomach ache started due to laughter - Hayat News

ಆದರೆ ಕಾಲ ಬದಲಾಗುತ್ತಲೇ ಭಗವಂತ್ ಮಾನ್ ಕೂಡ ರಾಜಕಾರಣಕ್ಕೆ ಬಂದಿದ್ದರು. ಸಿಧು ಪ್ರತಿಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರೆ, ಇತ್ತ ಭಗವಂತ್ ಮಾನ್ ಕಳೆದ ಬಾರಿ ಮೊದಲ ಬಾರಿಗೆ ಆಪ್ ಪಕ್ಷದಿಂದ ಶಾಸಕರಾಗಿದ್ದರು. ಸಿಧು ಬಹುಕಾಲದಿಂದ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿರಬೇಕಿದ್ದರೆ, ಅಂದು ಜೋಕರ್ ಆಗಿ ನಗಿಸುತ್ತಿದ್ದ ಭಗವಂತ್ ಮಾನ್, ಈಗ ಸಿಎಂ ಆಗುವತ್ತ ಹೊರಟಿದ್ದಾರೆ.

ಅಂದು ಭಗವಂತ್ ಮಾನ್, ಗ್ರೇಟ್ ಇಂಡಿಯನ್ ಲಾಫರ್ ಚಾಲೆಂಜ್ ರಿಯಾಲಿಟಿ ಶೋವನ್ನು ಗೆದ್ದಿದ್ದರು. ತೀರ್ಪು ನೀಡಿದ್ದವರಲ್ಲಿ ಇಂದು ಎದುರಾಳಿಯಾಗಿರುವ ಸಿಧು ಕೂಡ ಇದ್ದರು. ಆದರೆ, 15 ವರ್ಷಗಳಲ್ಲಿಯೇ ತೀರ್ಪು ನೀಡಿದ್ದ ಸಿಧುವನ್ನೇ ಹಿಂದಿಕ್ಕಿರುವ ಒಂದು ಕಾಲದ ಕಾಮಿಡಿಯನ್ ಭಗವಂತ್ ಮಾನ್, ಇಂದು ಸಿಖ್ಖರ ನಾಡಿನ ಸಿಎಂ ಸ್ಥಾನಕ್ಕೇರುವ ಸನ್ನಾಹದಲ್ಲಿದ್ದಾರೆ. ರಾಜಕಾರಣ ಅಂದರೆ ಇದೇ ತಾನೇ.. 

It is 2006. Bhagwant Mann is on stage cracking jokes. Navjot Singh Sidhu sits on the other side and judges the contestants of The Great Indian Laughter Challenge as they come up one by one.