ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಅವಘಡ ; 60 ಗುಡಿಸಲು ಭಸ್ಮ, 7 ಜನ ಸಾವು 

12-03-22 12:12 pm       HK Desk news   ದೇಶ - ವಿದೇಶ

ರಾಷ್ಟ್ರ ರಾಜಧಾನಿಯ ಗೋಕುಲಪುರಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 60 ಗುಡಿಸಲು ಭಸ್ಮವಾಗಿದ್ದು, 7 ಜನ ಸಾವನ್ನಪ್ಪಿದ ಘಟನೆ ನಡೆದಿದೆ.

ನವದೆಹಲಿ, ಮಾ 12: ರಾಷ್ಟ್ರ ರಾಜಧಾನಿಯ ಗೋಕುಲಪುರಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 60 ಗುಡಿಸಲು ಭಸ್ಮವಾಗಿದ್ದು, 7 ಜನ ಸಾವನ್ನಪ್ಪಿದ ಘಟನೆ ನಡೆದಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗೋಕುಲಪುರಿ ಪಿಎಸ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ದೆಹಲಿ ಅಗ್ನಿಶಾಮಕ ಸೇವೆಯ ಮಾಹಿತಿಯ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ ದುರಂತದಲ್ಲಿ ಸಾವನ್ನಪ್ಪಿದ್ದ 7 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಈಶಾನ್ಯ ದೆಹಲಿ ಹೆಚ್ಚುವರಿ ಡಿಸಿಪಿ ಮಾತನಾಡಿ, ಘಟನೆ ನಡೆದಾಕ್ಷಣ ನಾವು ಕಾರ್ಯಪ್ರವೃತ್ತರಾಗಿದ್ದು, ಸ್ಥಳಕ್ಕೆ ತಲುಪಿದ್ದೆವು. ಜೊತೆಗೆ ಅಗ್ನಿ ಶಾಮಕದಳದವರನ್ನು ಸಂಪರ್ಕಿಸಿದ್ದೇವೆ. ಅವರು ಕೂಡ ಉತ್ತಮಾಗಿ ಸ್ಪಂದನೆ ನೀಡಿದ್ದಾರೆ. ಬೆಂಕಿಯನ್ನು ಸುಮಾರು 4 ಗಂಟೆ ವೇಳೆಗೆ ನಂದಿಸಿದ್ದೇವೆ. ಆದರೆ ಅಷ್ಟರಲ್ಲಾಗಲೇ 30 ಗುಡಿಸಲು ಸುಟ್ಟುಹೋಗಿದ್ದು, 7 ಜನರು ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಘಟನೆ ಕುರಿತು ಮಾಹಿತಿ ಕಲೆಹಾಕಿದ ಬಳಿಕ ಸ್ಥಳಕ್ಕೆ 13 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

As many as seven people lost their lives in a massive fire that broke out in the shanties of Delhi’s Gokulpuri area on Saturday. At least 60 huts were gutted in the fire.The fire fighting department received a call at around 1 am on Saturday and were told about the incident. Around 13 fire tenders reached the spot and doused the flames within a few hours.