ಭಾರತೀಯ ಸೇನೆಯ ಎಡವಟ್ಟು ; ಗಡಿಭಾಗದಿಂದ ಅಕಸ್ಮಾತ್ ತೂರಿಹೋದ ಕ್ಷಿಪಣಿ ! ನೂರು ಕಿಮೀ ದೂರದ ಪಾಕ್ ನೆಲದಲ್ಲಿ ಬಿದ್ದ ಬ್ರಹ್ಮೋಸ್ ಮಿಸೈಲ್ !

12-03-22 08:33 pm       HK Desk news   ದೇಶ - ವಿದೇಶ

ಅತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಸರದಿಯಂತೆ ಬಾಂಬಿನ ಸುರಿಮಳೆ ಗರೆಯುತ್ತಿದ್ದರೆ, ಇತ್ತ ಭಾರತದ ಕಡೆಯಿಂದಲೂ ಪಾಕಿಸ್ಥಾನಕ್ಕೆ ಸದ್ದಿಲ್ಲದೆ ಕ್ಷಿಪಣಿ ದಾಳಿಯಾಗಿದೆ ! ಹೌದು.. ಕಳೆದ ಮಾ.9ರಂದು ಸೇನೆಯ ಎಡವಟ್ಟಿನಿಂದಾಗಿ ಭಾರತದ ಕಡೆಯಿಂದ ಕ್ಷಿಪಣಿಯೊಂದು ಪಾಕಿಸ್ಥಾನದತ್ತ ಹಾರಿ ಹೋಗಿ ಬಿದ್ದಿದೆ.

ನವದೆಹಲಿ, ಮಾ.12: ಅತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಸರದಿಯಂತೆ ಬಾಂಬಿನ ಸುರಿಮಳೆ ಗರೆಯುತ್ತಿದ್ದರೆ, ಇತ್ತ ಭಾರತದ ಕಡೆಯಿಂದಲೂ ಪಾಕಿಸ್ಥಾನಕ್ಕೆ ಸದ್ದಿಲ್ಲದೆ ಕ್ಷಿಪಣಿ ದಾಳಿಯಾಗಿದೆ ! ಹೌದು.. ಕಳೆದ ಮಾ.9ರಂದು ಸೇನೆಯ ಎಡವಟ್ಟಿನಿಂದಾಗಿ ಭಾರತದ ಕಡೆಯಿಂದ ಕ್ಷಿಪಣಿಯೊಂದು ಪಾಕಿಸ್ಥಾನದತ್ತ ಹಾರಿ ಹೋಗಿ ಬಿದ್ದಿದೆ. ಈ ಬಗ್ಗೆ ಭಾರತದ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು ತಾಂತ್ರಿಕ ಎಡವಟ್ಟಿನಿಂದ ತಪ್ಪು ಆಗಿದ್ದು ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ.

ಮಿಲಿಟರಿ ಸಿಬಂದಿ ಎಂದಿನಂತೆ ತರಬೇತಿಯಲ್ಲಿದ್ದಾಗ ಎಡವಟ್ಟು ನಡೆದುಹೋಗಿದೆ. ಅಕಸ್ಮಾತ್ತಾಗಿ ಕ್ಷಿಪಣಿ ಉಡಾವಣೆ ಆಗಿದ್ದು, ಪಾಕಿಸ್ಥಾನದ ಒಳಗಿನ ನೂರು ಕಿಮೀ ದೂರಕ್ಕೆ ಹೋಗಿ ಬಿದ್ದಿದೆ. ಇದರಿಂದ ಯಾವುದೇ ಸಾವು ನೋವು ಆಗಿಲ್ಲ. ಈ ಬಗ್ಗೆ ಭಾರತದ ಸೇನೆಯಿಂದ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ಥಾನದ ವಾಯು ಪ್ರದೇಶದ 40 ಸಾವಿರ ಅಡಿ ಎತ್ತರದಲ್ಲಿ ಕ್ಷಿಪಣಿ ಹಾರಿದ್ದು 100 ಕಿಮೀ ದೂರದ ಖಾಲಿ ಜಾಗದಲ್ಲಿ ಬಿದ್ದಿದೆ. ಆದರೆ, ಕ್ಷಿಪಣಿಯಲ್ಲಿ ಯಾವುದೇ ಸಿಡಿತಲೆ ಇಲ್ಲದೇ ಇದ್ದುದರಿಂದ ಅದು ಸ್ಫೋಟಗೊಂಡಿಲ್ಲ. ಈ ಬಗ್ಗೆ ಪಾಕಿಸ್ಥಾನದ ಕಡೆಯಿಂದ ಪ್ರತಿಭಟನೆ ವ್ಯಕ್ತವಾಗಿದ್ದು, ತನಿಖೆಗೆ ಆದೇಶ ಮಾಡಿದೆ. ಯಾವುದೇ ಪ್ರಚೋದನೆ ಇಲ್ಲದೆ ತನ್ನ ವಾಯು ಪ್ರದೇಶವನ್ನು ಅತಿಕ್ರಿಮಿಸಿದ್ದು ಯಾಕೆ ಎಂದು ಅಲ್ಲಿನ ಅಧಿಕಾರಿಗಳು ಭಾರತದ ವಿದೇಶಾಂಗ ಇಲಾಖೆಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಪ್ಯಾಸೆಂಜರ್ ವಿಮಾನ ಅಥವಾ ಸಾಮಾನ್ಯ ನಾಗರಿಕರ ಪ್ರಾಣಕ್ಕೆ ಆಪತ್ತು ಬರಬಹುದಿತ್ತು. ಈ ರೀತಿಯ ಎಡವಟ್ಟು ಯಾವತ್ತೂ ಆಗದಂತೆ ನೋಡಿಕೊಳ್ಳಿ ಎಚ್ಚರಿಸಿದ್ದಾರೆ.

Missile That Went into Pakistan Accidentally Fired due to Tech Glitch,  High-level Court of Inquiry Ordered: India

ಒಂದು ದಿನದ ಹಿಂದೆ, ಪಾಕಿಸ್ಥಾನದ ಮಿಲಿಟರಿ ಜನರಲ್ ಮೇಜರ್ ಬಾಬರ್ ಇಫ್ತಿಕಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಾಕಿಸ್ಥಾನದ ಪೂರ್ವ ಭಾಗದ ಮಿಯಾನ್ ಚನ್ನು ಎಂಬ ಪ್ರದೇಶದಲ್ಲಿ ಅತಿ ವೇಗದಲ್ಲಿ ಬಂದ ಕ್ಷಿಪಣಿಯೊಂದು ಬಿದ್ದಿದೆ. ಅದು ಹರ್ಯಾಣ ಪ್ರಾಂತ್ಯದ ಸೀರ್ಸಾ ಎನ್ನುವ ಜಾಗದಿಂದ ಉಡಾವಣೆ ಆಗಿತ್ತು ಎಂದು ಹೇಳಿದ್ದರು. ಪಾಕಿಸ್ಥಾನದ ಕಡೆಯಿಂದ ಈ ಹೇಳಿಕೆ ಬಿಡುಗಡೆ ಆಗುತ್ತಲೇ ಭಾರತೀಯ ಸೇನೆ ತನ್ನ ಎಡವಟ್ಟು ಬಗ್ಗೆ ಹೇಳಿಕೊಂಡಿದೆ.

ಸೇನೆಯ ಮಾಹಿತಿ ಪ್ರಕಾರ, ಉಡಾಯಿಸಲ್ಪಟ್ಟ ಕ್ಷಿಪಣಿಯನ್ನು ಬ್ರಹ್ಮೋಸ್ ಸೂಪರ್ ಸಾನಿಕ್ ಎಂದು ಗುರುತಿಸಲಾಗಿದೆ. ಹೀಗಾಗಿ ಸಾಮಾನ್ಯ ಕ್ಷಿಪಣಿಗಿಂತ ಮೂರು ಪಟ್ಟು ಭಾರೀ ಸದ್ದಿನೊಂದಿಗೆ ಪಾಕಿಸ್ಥಾನದ ನೆಲದಲ್ಲಿ ಬಿದ್ದಿತ್ತು. ಈ ರೀತಿಯ ಎಡವಟ್ಟು ಆಗಿರುವುದನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಲೆದಂಡಕ್ಕೆ ಸೂಚನೆ ನೀಡಿದೆ.

India Friday confirmed that a missile had entered Pakistan from India Wednesday due to “accidental firing” caused by “a technical malfunction” in the “course of routine maintenance”.  Sources said this was a BrahMos supersonic cruise missile.