ಕಪಿಲ್ ಸಿಬಲ್ ಚಾಟಿ ಬೆನ್ನಲ್ಲೇ ಪಂಚ ರಾಜ್ಯಗಳ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ಗೇಟ್ ಪಾಸ್ ; ಹೊಸತಾಗಿ ಪಕ್ಷ ಸಂಘಟಿಸಲು ಸೋನಿಯಾ ಪ್ಲಾನ್

16-03-22 02:12 pm       HK Desk news   ದೇಶ - ವಿದೇಶ

ಪಂಚ ರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಿಗೆ ರಾಜಿನಾಮೆ ನೀಡಲು ಸೂಚಿಸಿದ ಬೆನ್ನಲ್ಲೇ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜಿನಾಮೆ ನೀಡಿದ್ದಾರೆ.

ನವದೆಹಲಿ, ಮಾ.16 : ಪಂಚ ರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಿಗೆ ರಾಜಿನಾಮೆ ನೀಡಲು ಸೂಚಿಸಿದ ಬೆನ್ನಲ್ಲೇ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜಿನಾಮೆ ನೀಡಿದ್ದಾರೆ.

ಇತ್ತೀಚೆಗೆ ಚುನಾವಣೆ ನಡೆದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿರುವುದನ್ನು ಎಐಸಿಸಿ ಜನರಲ್ ಸೆಕ್ರಟರಿ ರಣದೀಪ್ ಸುರ್ಜೇವಾಲಾ ತಮ್ಮ ಟ್ವಿಟರ್ ನಲ್ಲಿ ಹಾಕ್ಕೊಂಡಿದ್ದರು. ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷರ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂಬ ಬಗ್ಗೆ ಹಿರಿಯ ನಾಯಕ ಕಪಿಲ್ ಸಿಬಲ್ ಟೀಕಿಸಿದ ಒಂದೇ ದಿನದಲ್ಲಿ ಈ ರೀತಿಯ ಬೆಳವಣಿಗೆ ನಡೆದಿತ್ತು.

Congress veterans slam Kapil Sibal for Gandhis remark | India News - Times  of India

ಪಂಜಾಬ್ ನಲ್ಲಿ ಚರಣ್ ಜಿತ್ ಚನ್ನಿಯನ್ನು ಸಿಎಂ ಮಾಡಿದ್ದು ಹೇಗೆ, ಅವರನ್ನು ಸಿಎಂ ಎಂದು ಘೋಷಿಸಲು ರಾಹುಲ್ ಗಾಂಧಿಗೆ ಯಾವ ಅಧಿಕಾರ ಇತ್ತು ಎಂದು ಕಪಿಲ್ ಸಿಬಲ್ ಪ್ರಶ್ನೆ ಮಾಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಪಂಜಾಬ್ ಸಿಎಂ ಆಗಿದ್ದ ಅಮರಿಂದರ್ ಸಿಂಗ್ ಅವರನ್ನು ಬದಲಿಸಿ, ನವಜೋತ್ ಸಿಂಗ್ ಸಿಧು ಸೂಚನೆಯಂತೆ ಚರಣಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಮಾಡಲಾಗಿತ್ತು. ಅಲ್ಲದೆ, ಚನ್ನಿ ಮತ್ತು ಸಿಧು ನೇತೃತ್ವದಲ್ಲಿ ಪಂಜಾಬ್ ನಲ್ಲಿ ಚುನಾವಣೆ ಎದುರಿಸಲಾಗಿತ್ತು. ಚುನಾವಣೆಯಲ್ಲಿ ಭಾರೀ ಸೋಲು ಅನುಭವಿಸಿದ್ದರಿಂದ ಕಾಂಗ್ರೆಸ್ ನಾಯಕರಿಂದಲೇ ಈ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

ಇದೀಗ ಪಂಚ ರಾಜ್ಯಗಳ ಕಾಂಗ್ರೆಸ್ ಘಟಕಗಳ ಅಧ್ಯಕ್ಷರನ್ನು ರಾಜಿನಾಮೆ ನೀಡಲು ಸೂಚಿಸಿದ್ದು, ಅಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಉತ್ತರಾಖಂಡ, ಗೋವಾ ಘಟಕಗಳ ಅಧ್ಯಕ್ಷರು ಕೂಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅಲ್ಲಿ ಹೊಸತಾಗಿ ಕಾಂಗ್ರೆಸ್ ಘಟಕ ರಚನೆಯಾಗಲಿದೆ.

Congress president Sonia Gandhi has asked presidents of five state units of the party to resign. The direction comes days after the party fared poorly in elections to the assemblies of these five states.