ರೈಲ್ವೇ ಬಜೆಟ್ ನಲ್ಲಿ ಉತ್ತರ – ದಕ್ಷಿಣ ತಾರತಮ್ಯ ; ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಕೊಟ್ಟಿದ್ದರೆ, ದಕ್ಷಿಣಕ್ಕೆ ಕೇವಲ 59 ಕೋಟಿ ! ಡಿಎಂಕೆ ಸಂಸದೆ ಕನಿಮೋಳಿ ತರಾಟೆ

17-03-22 05:42 pm       HK Desk news   ದೇಶ - ವಿದೇಶ

ರೈಲ್ವೇ ಬಜೆಟ್ ನಲ್ಲಿ ಕೇಂದ್ರ ಸರಕಾರವು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ತಾರತಮ್ಯ ನಡೆ ತೋರಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಆಕ್ಷೇಪಿಸಿದ್ದಾರೆ.

ನವದೆಹಲಿ, ಮಾ.17: ರೈಲ್ವೇ ಬಜೆಟ್ ನಲ್ಲಿ ಕೇಂದ್ರ ಸರಕಾರವು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ತಾರತಮ್ಯ ನಡೆ ತೋರಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಆಕ್ಷೇಪಿಸಿದ್ದಾರೆ. ಪ್ರಸಕ್ತ ಸಾಲಿನ ರೈಲ್ವೇ ಬಜೆಟ್ ನಲ್ಲಿ ಹೊಸ ರೈಲ್ವೇ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೇಗೆ ಕೇವಲ 59 ಕೋಟಿ ಮೀಸಲಿರಿಸಿದ್ದರೆ, ಉತ್ತರ ರೈಲ್ವೇಗೆ 13 ಸಾವಿರ ಕೋಟಿ ಕೊಟ್ಟಿದ್ದಾರೆ. ಈ ಮೂಲಕ ನೀವು ತಾರತಮ್ಯ ಧೋರಣೆ ತೋರುತ್ತಿದ್ದೀರಿ ಎಂದು ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರಕಾರದ ಬಜೆಟ್ ನಲ್ಲಿ ಈ ರೀತಿಯ ತಾರತಮ್ಯ ಏಕೆ ಎಂದು ರೈಲ್ವೇ ಸಚಿವರನ್ನು ಸಂಸದೆ ಕನಿಮೋಳಿ ಪ್ರಶ್ನೆ ಮಾಡಿದ್ದಾರೆ. ಏಕ್ ಭಾರತ್ ಅನ್ನುವುದನ್ನು ನೀವು ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುವುದನ್ನು ಕೇಳಿದ್ದೇನೆ. ಏಕ್ ಭಾರತ್ ಅನ್ನೋದರಲ್ಲಿ ದಕ್ಷಿಣ ಭಾರತ ಬರೋದಿಲ್ಲವೇ.. ಹಾಗಿದ್ದರೆ ಈ ರೀತಿಯ ತಾರತಮ್ಯ ಏಕೆ ಎಂದು ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.

Mathrubhumi on Twitter: "Rs 59 crore for south and Rs 13,200 crore for north:  Kanimozhi speech on Rail Budget goes viral https://t.co/JGGfPD8xOA # Kanimozhi" / Twitter

ರೈಲ್ವೇ ಇಲಾಖೆಯಲ್ಲಿ ಸಾವಿರಾರು ಉದ್ಯೋಗ ಭರ್ತಿ ಆಗಿಲ್ಲ. ಅದನ್ನು ಭರ್ತಿಗೊಳಿಸುವಲ್ಲಿಯೂ ದಕ್ಷಿಣ ಭಾರತೀಯರಿಗೆ ಕೆಲಸ ಲಭಿಸುತ್ತಿಲ್ಲ. ನೀವು ದಕ್ಷಿಣ ಭಾರತೀಯರನ್ನು ಉದ್ಯೋಗದಿಂದ ದೂರವಿಡಲು ಬಯಸುತ್ತಿದ್ದೀರಾ.. ಮುಂದಿನ ವರ್ಷದಲ್ಲಿ ನೂರು ಶೇಕಡಾ ವಿದ್ಯುದೀಕರಣ ಈಡೇರಿಸುವ ವಾಗ್ದಾನ ನೀಡಿದ್ದೀರಿ. ಇದು ಹೇಗೆ ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಬೇಕು ಎಂದು ಕನಿಮೋಳಿ ಆಗ್ರಹ ಮಾಡಿದ್ದಾರೆ.

ಕೇಂದ್ರ ಸರಕಾರವು ದಕ್ಷಿಣವನ್ನು ಹೇಗೆ ನಡೆಸಿಕೊಳ್ಳುತ್ತಿದೆ ಅನ್ನುವುದಕ್ಕೆ ಇದು ಉದಾಹರಣೆ ಎಂದು ಆಕ್ಷೇಪಿಸಿರುವ ಕನಿಮೋಳಿ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭೆಯಲ್ಲಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹಿಂದಿಯಲ್ಲಿ ಉತ್ತರಿಸಲು ಯತ್ನಿಸಿದಾಗ, ಇಂಗ್ಲಿಷ್ ನಲ್ಲಿಯೇ ಉತ್ತರಿಸುವಂತೆ ಕನಿಮೋಳಿ ಕೇಳಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

A video of Tamil Nadu MP Kanimozhi criticising the union government for 'meagre' allocation of funds for South India has gone viral. During the debate on Budget 2022, Kanimozhi said only Rs 59 crore is earmarked for building new railway lines for the Southern Railway in the Union Budget 2022.