ಸೇನೆ ಸೇರುವ ತುಡಿತದಲ್ಲಿ ದಿನವೂ ಹತ್ತು ಕಿಮೀ ಓಟ ; ಚಿತ್ರೋದ್ಯಮಿಯ ವಿಡಿಯೋದಿಂದ ಒಂದೇ ದಿನದಲ್ಲಿ ಯುವಕ ಇಂಟರ್ನೆಟ್ ಐಕಾನ್ ! ಸೇನೆ ಸೇರಲು ಆಫರ್ ಕೊಟ್ಟ ನಿವೃತ್ತ ಸೇನಾಧಿಕಾರಿ

23-03-22 06:47 pm       HK Desk news   ದೇಶ - ವಿದೇಶ

ಕೆಲಸ ಬಿಟ್ಟ ಬಳಿಕ ಸೇನೆ ಸೇರುವುದಕ್ಕಾಗಿ ದಿನವೂ ಹತ್ತು ಕಿಮೀ ಓಡಿಕೊಂಡೇ ಮನೆ ಸೇರುವುದನ್ನು ಕಾಯಕ ಮಾಡಿಕೊಂಡಿರುವ ನೋಯ್ಡಾದ ಯುವಕನೊಬ್ಬ ಈಗ ಅಂತರ್ಜಾಲದಲ್ಲಿ ಐಕಾನ್ ಆಗಿದ್ದಾನೆ.

ನವದೆಹಲಿ, ಮಾ.23: ಕೆಲಸ ಬಿಟ್ಟ ಬಳಿಕ ಸೇನೆ ಸೇರುವುದಕ್ಕಾಗಿ ದಿನವೂ ಹತ್ತು ಕಿಮೀ ಓಡಿಕೊಂಡೇ ಮನೆ ಸೇರುವುದನ್ನು ಕಾಯಕ ಮಾಡಿಕೊಂಡಿರುವ ನೋಯ್ಡಾದ ಯುವಕನೊಬ್ಬ ಈಗ ಅಂತರ್ಜಾಲದಲ್ಲಿ ಐಕಾನ್ ಆಗಿದ್ದಾನೆ.

ನೋಯ್ಡಾ ನಗರದ ಪ್ರದೀಪ್ ಮೆಹ್ರಾ ಎಂಬ 19 ವರ್ಷದ ಹುಡುಗ ಮೆಕ್ ಡೊನಾಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಶಿಫ್ಟ್ ಮುಗಿಯುತ್ತಲೇ ಹತ್ತು ಕಿಮೀ ದೂರದ ತನ್ನ ಮನೆಗೆ ಓಡಿಕೊಂಡೇ ಹೋಗುತ್ತಾನೆ. ಇದನ್ನು ಗಮನಿಸಿದ ಚಿತ್ರ ನಿರ್ಮಾಪಕ ವಿನೋದ್ ಕಪ್ರಿ ವಿಡಿಯೋ ಮಾಡಿ, ಆತನನ್ನು ಮಾತನಾಡಿಸುತ್ತಲೇ ತನ್ನ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋ ಭಾರೀ ವೈರಲ್ ಆಗಿದ್ದು, ಟ್ವಿಟರ್ ನಲ್ಲಿ ಲಕ್ಷಾಂತರ ಜನರು ನೋಡಿ ಹುಡುಗನ ಉತ್ಸಾಹಕ್ಕೆ ಹುರಿದುಂಬಿಸಿದ್ದಾರೆ. ಹಲವರು ಹುಡುಗನಿಗೆ ನೆರವಾಗುವುದಕ್ಕೂ ಮುಂದೆ ಬಂದಿದ್ದಾರೆ.

ನಿವೃತ್ತ ಸೇನಾಧಿಕಾರಿ ಸತೀಶ್ ದುವಾ, ವಿನೋದ್ ಕಪ್ರಿ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, ಸೇನೆ ಸೇರಬೇಕೆಂಬ ಯುವಕನ ಬದ್ಧತೆ ನೋಡಿ ಆಕರ್ಷಿತನಾಗಿದ್ದೇನೆ. ಆತನಿಗೆ ಸೇನೆ ಸೇರಲು ಬೇಕಾದ ತರಬೇತಿ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದುವಾ, ಈ ಬಗ್ಗೆ ಕುಮಾವೋ ರೆಜಿಮೆಂಟಿನ ಕರ್ನಲ್ ರಾಣಾ ಕಾಲಿಟಾ ಜೊತೆಗೆ ಮಾತನಾಡಿದ್ದೇನೆ. ನನ್ನ ಮೆರಿಟ್ ಆಧಾರದಲ್ಲಿ ಹುಡುಗನಿಗೆ ತರಬೇತಿ ನೀಡಲು ಹೇಳಿದ್ದೇನೆ, ಅವರು ತರಬೇತಿ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Who is Pradeep Mehra? Wiki, Indian Army Aspirant Biography, Age, Parents,  Family, Height, Age & More

ನನ್ನ ವಿಡಿಯೋ ನೋಡಿ ಹಲವರು ಪ್ರೇರಣೆ ಪಡೆದಿದ್ದಾರೆ ಅನ್ನುವುದನ್ನು ಕೇಳಿ ಆನಂದಗೊಂಡಿದ್ದೇನೆ. ವಿಡಿಯೋ ನೋಡಿ ಪ್ರೋತ್ಸಾಹಿಸಿದವರಿಗೆ ಅಭಿನಂದಿಸುತ್ತೇನೆ. ನನ್ನ ಗುರಿ ಇರುವುದರು ಸೇನೆ ಸೇರುವುದು ಒಂದೇ ಎಂದು ಪ್ರದೀಪ್ ಮೆಹ್ರಾ ಹೇಳಿದ್ದಾನೆ. 19 ವರ್ಷದ ಪ್ರದೀಪ್ ಮೆಹ್ರಾ ಮೂಲತಃ ಉತ್ತರಾಖಂಡ ಅಲ್ಮೋರಾ ಗ್ರಾಮದ ನಿವಾಸಿಯಾಗಿದ್ದು, ನೋಯ್ಡಾದಲ್ಲಿ ಇನ್ನೊಬ್ಬ ಸೋದರನ ಜೊತೆಗಿದ್ದು ಕೆಲಸ ಮಾಡುತ್ತಿದ್ದಾನೆ. ಇಬ್ಬರು ಸೋದರರು ನೋಯ್ಡಾದ ಬರೋಲಾದಲ್ಲಿ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದು ಅಣ್ಣ ರಾತ್ರಿ ಶಿಫ್ಟ್ ಇರುತ್ತಿದ್ದರೆ, ಹಗಲಲ್ಲಿ ಪ್ರದೀಪ್ ಕೆಲಸ ಮಾಡುತ್ತಾನೆ. ಹೀಗಾಗಿ ಆತನಿಗೆ ವರ್ಕೌಟ್ ಮಾಡುವುದಕ್ಕೆ ಸಮಯ ಸಿಗಲ್ಲ ಎಂದು ದಿನವೂ ಸಂಜೆ ವೇಳೆಗೆ ಕೆಲಸ ಬಿಟ್ಟು ಮನೆಗೆ ಓಡಿಕೊಂಡೇ ಹೋಗುತ್ತಾನೆ.

ಈತನ ವಿಡಿಯೋ ಮತ್ತು ಸೇನೆ ಸೇರಬೇಕೆಂಬ ತುಡಿತವನ್ನು ನೋಡಿದ ಬಾಲಿವುಡ್ ಸೆಲೆಬ್ರಿಟಿಗಳು ಭಾರೀ ಆಕರ್ಷಿತರಾಗಿದ್ದಾರೆ. ಕ್ರಿಕೆಟ್, ಸಿನಿಮಾ, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು ಹುಡುಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್, ಚಾಂಪ್ಯನ್ ಗಳು ಹುಟ್ಟಿಕೊಳ್ಳುವುದೇ ಹೀಗೆ. ಅದು ಕ್ರೀಡಾ ಕ್ಷೇತ್ರ ಆಗಿರಲಿ, ಇನ್ನಾವುದೇ ಕ್ಷೇತ್ರ ಆಗಿರಲಿ. ಆತ ಜೀವನದಲ್ಲಿ ಗುರಿ ಸಾಧಿಸುತ್ತಾನೆ. ನಿಜಕ್ಕೂ ಆತ ಪ್ಯೂರ್ ಗೋಲ್ಡ್ ಎಂದು ಕೊಂಡಾಡಿದ್ದಾರೆ.

ಹುಡುಗನ ಬಗ್ಗೆ ವಿಡಿಯೋ ಮಾಡಿದ್ದ ಚಿತ್ರೋದ್ಯಮಿ ವಿನೋದ್ ಕಪ್ರಿ, ಯಾಕೆ ಓಡುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾ ವಿಡಿಯೋ ಮಾಡುತ್ತಾರೆ. ಪ್ರದೀಪ್ ಮೆಹ್ರಾ, ಸೇನೆ ಸೇರುವ ಬಯಕೆಯನ್ನು ಹೇಳುತ್ತಾನೆ. ಓಡಿಕೊಂಡೇ ಮನೆ ಸೇರುವುದಲ್ಲದೆ, ನಾನೇ ಹೋಗಿ ಊಟ ತಯಾರಿಸಬೇಕು ಎನ್ನುತ್ತಾನೆ. ಯಾಕೆ ನೀನು ಹೋಗಿ ಊಟ ತಯಾರಿಸಬೇಕು, ಇವತ್ತು ಜೊತೆಯಾಗಿ ಊಟ ಮಾಡೋಣ ಬಾ ಎಂದು ವಿನೋದ್ ಕರೆಯುತ್ತಾರೆ. ಆದರೆ, ಆತ ನಯವಾಗಿ ನಿರಾಕರಿಸುತ್ತಲೇ ತನ್ನ ಸೋದರ ನೈಟ್ ಶಿಫ್ಟ್ ಮಾಡುತ್ತಿದ್ದು, ಆತ ಹೋಗುವ ಮುಂಚೆ ಊಟ ತಯಾರಿಸಬೇಕು. ನಾನು ಇಲ್ಲಿ ಊಟ ಮಾಡಿದರೆ ಆತ ಹಸಿವಿನಿಂದ ಇರಬೇಕಾಗುತ್ತದೆ ಎಂದು ಕಾಳಜಿ ವ್ಯಕ್ತಪಡಿಸುತ್ತಾನೆ. ಹುಡುಗನ ಜೊತೆಗಿನ ಸಂಭಾಷಣೆಯ ವಿಡಿಯೋವನ್ನು ವಿನೋದ್ ಕಪ್ರಿ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಲ್ಲದೆ, ಈತ ನಿಜಕ್ಕೂ ಪ್ಯೂರ್ ಗೋಲ್ಡ್ ಎಂದು ಬರೆದು ಶಹಭಾಷ್ ಎಂದಿದ್ದರು. ವಿಡಿಯೋ ಭಾರೀ ವೈರಲ್ ಆಗಿತ್ತು. 

 

In the famous video, Mehra revealed the reason behind his running. He wants to join the Army. After watching his video, several people across the country have offered to help the young man.Lt General (retired) Satish Dua applauded Mehra's strength and dedication while offering to help him pass the recruitment tests on his merit. Dua even got in touch with others from the Army to help Mehra fulfil his dream.