ಲಂಕಾದಲ್ಲಿ ದಂಗೆಯೆದ್ದ ಜನ, ಮಿಲಿಟರಿ ವಾಹನಗಳಿಗೆ ಬೆಂಕಿ ; ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ, ಮಿಲಿಟರಿಗೆ ಅಧಿಕಾರ ಕೊಟ್ಟು ಉದ್ರಿಕ್ತರ ಜನರ ಬಂಧನಕ್ಕೆ ಸೂಚನೆ

02-04-22 12:29 pm       HK Desk news   ದೇಶ - ವಿದೇಶ

ಶ್ರೀಲಂಕಾದಲ್ಲಿ ಜನರು ದಂಗೆಯೇಳುವ ಲಕ್ಷಣ ಕಂಡುಬಂದಿರುವುದರಿಂದ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಕೊಲಂಬೋ, ಎ.2: ಶ್ರೀಲಂಕಾದಲ್ಲಿ ಜನರು ದಂಗೆಯೇಳುವ ಲಕ್ಷಣ ಕಂಡುಬಂದಿರುವುದರಿಂದ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಹಣದುಬ್ಬರದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಊಟಕ್ಕೂ ತತ್ವಾರ ಎದುರಾಗಿರುವುದರಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಶುಕ್ರವಾರ ಅಧ್ಯಕ್ಷ ರಾಜಪಕ್ಸ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳು, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ತೀವ್ರ ಹಿಂಸಾಚಾರದಲ್ಲಿ ತೊಡಗಿದ್ದಾರೆ. ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ರಾಜಧಾನಿ ಕೊಲಂಬೋದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು ದೇಶಾದ್ಯಂತ ಜನರು ರೊಚ್ಚಿಗೇಳುವ ಸ್ಥಿತಿ ಎದುರಾಗಿದೆ.

ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷೆ ದೃಷ್ಟಿಯಿಂದ ಎಮರ್ಜೆನ್ಸಿ ಘೋಷಿಸಲಾಗಿದೆ. ಜನರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ದೃಷ್ಟಿಯಿಂದ ಮಿಲಿಟರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಎಮರ್ಜೆನ್ಸಿ ಘೋಷಣೆಯ ಬೆನ್ನಲ್ಲೇ ಅಧ್ಯಕಅಷ ರಾಜಪಕ್ಸ ಹೇಳಿದ್ದಾರೆ. ದೇಶಾದ್ಯಂತ ಅಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ಜನರು ತರಕಾರಿ, ಅಕ್ಕಿ ಪಡೆಯುವುದಕ್ಕಾಗಿ ಹೈರಾಣು ಅನುಭವಿಸುತ್ತಿದ್ದಾರೆ. ಅಂಗಡಿಗಳಲ್ಲಿ ಜೀವನಾವಶ್ಯಕ ವಸ್ತುಗಳೇ ಇಲ್ಲವಾಗಿದ್ದು, ದುಬಾರಿ ದರ ಉಂಟಾಗಿದೆ.

Sri Lanka lifts curfew after violent protests over economic crisis |  Business Standard News

1948ರಲ್ಲಿ ಬ್ರಿಟನ್ ಕೈಯಿಂದ ಸ್ವಾತಂತ್ರ್ಯ ಪಡೆದ ಬಳಿಕ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುಸ್ಥಿತಿ ಉಂಟಾಗಿದೆ. ಶುಕ್ರವಾರ ರಾತ್ರಿಯೇ ಪಶ್ಚಿಮ ಶ್ರೀಲಂಕಾ ಮತ್ತು ಕೊಲಂಬೋದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಜನರು ಹೊರ ಬರದಂತೆ ಮಿಲಿಟರಿ ಮತ್ತು ಪೊಲೀಸರ ಮೂಲಕ ತಡೆ ಹೇರಲಾಗಿದೆ. ಆದರೆ, ಜನರು ಅಧ್ಯಕ್ಷ ಮತ್ತು ಪ್ರಧಾನಿ ರಾಜಿನಾಮೆ ನೀಡುವಂತೆ ಘೋಷಣೆ ಕೂಗುತ್ತಾ ಬೀದಿಯಲ್ಲಿ ಮೆರವಣಿಗೆ ನಡೆಸಿದ್ದಾರೆ.

ದಕ್ಷಿಣ ಲಂಕಾದ ಗಾಲೆ, ಮೊರಾಟುವಾ, ಮಟಾರಾ ನಗರಗಳಲ್ಲಿ ಜನರು ದಂಗೆ ಎದ್ದಿದ್ದು, ಮಿಲಿಟರಿ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿಯ ಕುಟುಂಬಸ್ಥರ ವಿರುದ್ಧ ಧಿಕ್ಕಾರ ಕೂಗುತ್ತಾ ದೇಶ ಬಿಟ್ಟು ಹೋಗುವಂತೆ ಹಿಂಸಾಚಾರ ಆರಂಭಿಸಿದ್ದಾರೆ.

President Gotabaya Rajapakse has declared a nationwide state of emergency as Sri Lanka witnessed a rebellion.