ಪ್ರತಿಭಟನೆ ಹತ್ತಿಕ್ಕಲು ಲಂಕಾದಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ

03-04-22 12:06 pm       HK Desk news   ದೇಶ - ವಿದೇಶ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆ, ದಂಗೆಯನ್ನು ಹತ್ತಿಕ್ಕಲು ಶ್ರೀಲಂಕಾ ಸರಕಾರ ಸಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಿದೆ.

ಕೊಲಂಬೋ, ಎ.3: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆ, ದಂಗೆಯನ್ನು ಹತ್ತಿಕ್ಕಲು ಶ್ರೀಲಂಕಾ ಸರಕಾರ ಸಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಿದೆ. ವಾರಾಂತ್ಯದಲ್ಲಿ ದೇಶಾದ್ಯಂತ ಕರ್ಫ್ಯೂ ವಿಧಿಸಿ, ಜನರ ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾಗಿರುವ ಮಧ್ಯೆಯೇ ಜಾಲತಾಣಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ.

ಶುಕ್ರವಾರ ದೇಶದ ಹಲವು ಕಡೆಗಳಲ್ಲಿ ಜನರು ದಂಗೆಯೇಳುವ ಲಕ್ಷಣ ಕಂಡುಬರುತ್ತಿದ್ದಂತೆ ತುರ್ತು ಪರಿಸ್ಥಿತಿ ಹೇರಿ ದೇಶಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಆಮೂಲಕ ಜನರು ಬೀದಿಗೆ ಇಳಿಯದಂತೆ ಪೊಲೀಸರ ಮೂಲಕ ಹತ್ತಿಕ್ಕುವ ಯತ್ನ ಮಾಡಲಾಗಿದೆ. ಭಾನುವಾರ ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ ವಿಧಿಸಿದ್ದು, ಟ್ವಿಟರ್, ಫೇಸ್ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಸೇರಿದಂತೆ ಎಲ್ಲ ರೀತಿಯ ಜಾಲತಾಣಗಳು ಭಾನುವಾರ ಸ್ಥಗಿತಗೊಂಡಿದೆ.

Sri Lanka Blocks Social Media, Declares Nationwide Curfew To Curb Protests  Amid Crisis

ಆಹಾರ, ಇನ್ನಿತರ ಸಾಮಗ್ರಿಗಳ ಕೊರತೆ ಎದುರಾಗಿರುವುದರಿಂದ ದೇಶಾದ್ಯಂತ ಜನರು ದಂಗೆಯೇಳಲು ಮುಂದಾಗಿದ್ದಾರೆ. ಹೀಗಾಗಿ ಸೋಮವಾರದ ವರೆಗೂ ದೇಶದಲ್ಲಿ ಕರ್ಫ್ಯೂ ಹೇರಿದ್ದು ಪೊಲೀಸರು ಬೀದಿಗೆ ಇಳಿದಿದ್ದಾರೆ. ಪ್ರತಿಭಟನೆ ನಡೆಸುವ ಮಂದಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಎಲ್ಲ ರೀತಿಯ ಅಂಗಡಿ, ವಹಿವಾಟು ಬಂದ್ ಆಗಿದ್ದು, ಜನರು ಮನೆಯಿಂದ ಹೊರಬರದಂತೆ ಪೊಲೀಸರು ತಡೆಯುತ್ತಿದ್ದಾರೆ.

President Gotabaya Rajapaksa issued a notice prohibiting anyone from being on any public road, in a park, on trains, or on the seashore, unless they have written permission from the authorities.The curfew began at dusk on Saturday.The social media sites blocked include Facebook, Twitter andInstagram.WhatsApp is also down, and mobile phone users received a message saying this was "as directed by the Telecommunications Regulatory Commission".