ರಾಹುಲ್ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78 ವರ್ಷದ ಅಜ್ಜಿ ! ರಾಹುಲ್ ಈ ದೇಶಕ್ಕೆ ಬೇಕು ಎಂದ ವೃದ್ಧೆ   

04-04-22 07:32 pm       HK Desk news   ದೇಶ - ವಿದೇಶ

ಉತ್ತರಾಖಂಡದ 78 ವರ್ಷದ ಅಜ್ಜಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟಿದ್ದಾರೆ. ರಾಹುಲ್ ಗಾಂಧಿಯಂತಹ ನಾಯಕ ಈ ದೇಶಕ್ಕೆ ಅಗತ್ಯ ಎಂದು ಹೇಳಿ ತನ್ನಲ್ಲಿದ್ದ 50 ಲಕ್ಷ ಮೌಲ್ಯದ ಚರಾಸ್ತಿ ಮತ್ತು ಹತ್ತು ತೊಲೆ ಬಂಗಾರವನ್ನು ರಾಹುಲ್ ಹೆಸರಿಗೆ ನೀಡಿದ್ದಾರೆ.

ನವದೆಹಲಿ, ಎ.4 : ಉತ್ತರಾಖಂಡದ 78 ವರ್ಷದ ಅಜ್ಜಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟಿದ್ದಾರೆ. ರಾಹುಲ್ ಗಾಂಧಿಯಂತಹ ನಾಯಕ ಈ ದೇಶಕ್ಕೆ ಅಗತ್ಯ ಎಂದು ಹೇಳಿ ತನ್ನಲ್ಲಿದ್ದ 50 ಲಕ್ಷ ಮೌಲ್ಯದ ಚರಾಸ್ತಿ ಮತ್ತು ಹತ್ತು ತೊಲೆ ಬಂಗಾರವನ್ನು ರಾಹುಲ್ ಹೆಸರಿಗೆ ನೀಡಿದ್ದಾರೆ.

ಡೆಹ್ರಾಡೂನ್ ನಿವಾಸಿ ಪುಷ್ಪಾ ಮುಂಜಿಯಾಲ್ ಎಂಬ 78 ವರ್ಷದ ವೃದ್ಧೆ ಈ ರೀತಿ ತನ್ನ ಆಸ್ತಿಯನ್ನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬರೆದುಕೊಟ್ಟಿರುವಾಕೆ. ತನ್ನ ಆಸ್ತಿ ಪತ್ರದ ವೀಲನ್ನು ಬರೆದು ಡೆಹ್ರಾಡೂನ್ ಕೋರ್ಟಿನಲ್ಲಿ ರಿಜಿಸ್ಟರ್ ಮಾಡಿದ್ದಾರೆ.

Rahul Gandhi hails Indian women's cricket team after its WC campaign ends |  Deccan Herald

ರಾಹುಲ್ ಗಾಂಧಿ ಮತ್ತು ಅವರ ಚಿಂತನೆಗಳು ಈ ದೇಶಕ್ಕೆ ಅಗತ್ಯವಿದೆ. ಅವರ ಮಾತುಗಳು ಮತ್ತು ಚಿಂತನೆಗಳಿಂದ ತುಂಬ ಆಕರ್ಷಿತಳಾಗಿದ್ದೇನೆ. ಹಾಗಾಗಿ ನನ್ನ ಆಸ್ತಿಯನ್ನು ಅವರಿಗೆ ಬರೆದು ಕೊಡಲು ಮುಂದಾಗಿದ್ದೇನೆ ಎಂದು ಪುಷ್ಪಾ ಮುಂಜಿಯಾಲ್ ಹೇಳಿದ್ದಾರೆ. ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಪ್ರೀತಮ್ ಸಿಂಗ್ ಅವರ ಮನೆಯಲ್ಲಿ ಪುಷ್ಪಾ ಮಂಜಿಯಾಲ್, ತನ್ನ ಆಸ್ತಿಯನ್ನು ರಾಹುಲ್ ಗಾಂಧಿಗೆ ವಿಲ್ ಬರೆದುಕೊಟ್ಟಿದ್ದಾರೆ ಎಂದು ಡೆಹ್ರಾಡೂನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಲಾಲ್ ಚಂದ್ ಶರ್ಮಾ ಹೇಳಿದ್ದಾರೆ. 

A 78-year-old woman from Uttarakhand's Dehradun has named all her property after Congress leader Rahul Gandhi, including assets worth 50 lakhs and 10 tola of gold.Pushpa Munjial has presented a will in the Dehradun court, giving the ownership title of her properties to Rahul Gandhi.Pushpa Munjial described Rahul Gandhi and his ideas as necessary for the country. She said she is very much influenced by the thoughts of Rahul Gandhi and that is why she is giving her property to him.Congress Metropolitan President Lalchand Sharma said that Pushpa Munjial willed her property to Rahul Gandhi at the residence of former state president Pritam Singh.