ಕೋಜಿಕ್ಕೋಡ್ ; ಡೇಂಜರ್ ಬೋರ್ಡ್ ಹಾಕಿದ್ದರೂ ಲೆಕ್ಕಿಸದೆ ಹೊಳೆ ಮಧ್ಯೆ ಫೋಟೋ ಶೂಟ್ ! ಹೊಳೆಗೆ ಬಿದ್ದು ನವ ವಿವಾಹಿತ ದುರಂತ ಸಾವು 

05-04-22 12:12 pm       HK Desk news   ದೇಶ - ವಿದೇಶ

ಹೊಳೆಯ ನಡುವೆ ಬಂಡೆಯಲ್ಲಿ ನಿಂತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದಾಗ ಮದುಮಗ ಬಂಡೆಯಿಂದ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೋಜಿಕ್ಕೋಡ್ ಜಿಲ್ಲೆಯ ಕುತ್ಯಾಡಿ ನದಿಯಲ್ಲಿ ನಡೆದಿದೆ. 

ಕೋಜಿಕ್ಕೋಡ್, ಎ.5 : ಹೊಳೆಯ ನಡುವೆ ಬಂಡೆಯಲ್ಲಿ ನಿಂತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದಾಗ ಮದುಮಗ ಬಂಡೆಯಿಂದ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೋಜಿಕ್ಕೋಡ್ ಜಿಲ್ಲೆಯ ಕುತ್ಯಾಡಿ ನದಿಯಲ್ಲಿ ನಡೆದಿದೆ. 

ಮೂರು ವಾರಗಳ ಹಿಂದಷ್ಟೇ ವಿವಾಹಿತರಾಗಿದ್ದ ರೆಜಿನ್ ಲಾಲ್ ಮತ್ತು ಕಾನಿಕಾ ದಂಪತಿ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಹೊಳೆಯ ಮಧ್ಯದ ಬಂಡೆ ಮೇಲೆ ನಿಂತು ಪೋಸು ಕೊಡುತ್ತಿದ್ದ ವೇಳೆ ವರ ರೆಜಿನ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ನೀರಿಗೆ ಬಿದ್ದಿದ್ದು ಸ್ಥಳೀಯರು ಸೇರಿ ಇಬ್ಬರನ್ನೂ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು ವಧು ಗಂಭೀರ ಸ್ಥಿತಿಯಲ್ಲಿದ್ದಾಳೆ. ಮಾರ್ಚ್ 14 ರಂದು ಇವರ ವಿವಾಹ ನಡೆದಿತ್ತು.
 
ಪೆರುವಣ್ಣಮುಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ ರೆಜಿನ್ ಕುಟ್ಟಿಯಾಡಿ ಪರಿಸರದ ನಿವಾಸಿಯಾಗಿದ್ದು ನದಿಯ ಅಪಾಯದ ಬಗ್ಗೆ ಅರಿವು ಹೊಂದಿದ್ದ. ನದಿಯಲ್ಲಿ ಆಗಿಂದಾಗ್ಗೆ ಅಲೆಗಳು ಬರುವುದು, ಬಂಡೆಗೆ ಅಪ್ಪಳಿಸುವುದರಿಂದ ಅಪಾಯ ಎಂದು ಬೋರ್ಡ್ ಹಾಕಲಾಗಿತ್ತು. ಕುಟ್ಟಿಯಾಡಿಯ ಜಾನಕಿಪುಝ ಹೊಳೆಯ ಮಧ್ಯೆ ದಂಪತಿ ಫೋಟೋ ಶೂಟ್ ಮಾಡುತ್ತಿದ್ದರು. 

ಬಂಡೆಗಳ ಆಕರ್ಷಣೆಯ ನಡುವೆ ಆಳವಾದ ಹೊಂಡವಿದೆ. ಹಾಗಾಗಿ ಅಲ್ಲಿಗೆ ತೆರಳುವುದು ಅಪಾಯ ಎಂದು ಸೂಚನೆ ನೀಡಲಾಗಿತ್ತು. ಇಕೋ ಟೂರಿಸಂ ಹೆಸರಲ್ಲಿ ಫೋಟೋ ಶೂಟ್ ಮಾಡಲೆಂದು ಪ್ರವಾಸಿಗರು ಬರುತ್ತಿದ್ದರು. ಆದರೆ ಸ್ಥಳೀಯ ವ್ಯಕ್ತಿಯೇ ಆಗಿರುವ ರೆಜಿನ್, ಅದೇ ಹೊಳೆಯಲ್ಲಿ ನೀರಿಗೆ ಬಿದ್ದು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ. ಇದೇ ಜಾಗದಲ್ಲಿ ಈ ಹಿಂದೆಯೂ ದುರಂತ ಸಂಭವಿಸಿದ್ದರಿಂದ ಫೋಟೋ ಶೂಟ್ ಮಾಡದಂತೆ ನಿಷೇಧ ಹಾಕಲಾಗಿತ್ತು.

A post-wedding shoot has turned tragic for a groom, who drowned in the Kuttiadipuzha in Kozhikode. The accident happened at Janakikadupuzha in Kuttiadi, Kozhikode. The dead has been identified as Rejil of Kadiyangad in Kuttiadi. Though his wife got stuck in the water currents, was able to save her. She has been admitted in the hospital in a serious condition.