ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿ ; ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಗೆ ಸೋಲು, ನವಾಜ್ ಶರೀಫ್ ತಮ್ಮ ಶೆಹಬಾಜ್ ಷರೀಫ್ ಪ್ರಧಾನಿ ಗಾದಿಯತ್ತ

10-04-22 07:27 pm       HK Desk news   ದೇಶ - ವಿದೇಶ

ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಿ ಮಾಡಲಾಗಿದೆ. ಇದರ ಬೆನ್ನಲ್ಲೇ ವಿರೋಧ ಪಕ್ಷ ಪಾಕಿಸ್ಥಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಸ್ವತಃ ಪಾಕಿಸ್ಥಾನದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ.

ಇಸ್ಲಮಾಬಾದ್, ಎ.10: ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಿ ಮಾಡಲಾಗಿದೆ. ಇದರ ಬೆನ್ನಲ್ಲೇ ವಿರೋಧ ಪಕ್ಷ ಪಾಕಿಸ್ಥಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಸ್ವತಃ ಪಾಕಿಸ್ಥಾನದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ.

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಶೆಹಬಾಜ್ ಷರೀಫ್ (70) ಪ್ರಧಾನಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮೂರು ಬಾರಿ ಪಾಕಿಸ್ಥಾನದ ಪ್ರಧಾನಿಯಾಗಿದ್ದ ನವಾಜ್ ಶರೀಫ್ ದೇಶ ಬಿಟ್ಟು ಹೋದ ಬಳಿಕ ಅವರ ತಮ್ಮನಾಗಿರುವ ಶೆಹಬಾಜ್ ಷರೀಫ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದರು. ಮುಸ್ಲಿಂ ಲೀಗ್ ಪಕ್ಷವನ್ನು ನವಾಜ್ ಶರೀಫ್ ಹೆಸರಲ್ಲಿಯೇ ಮುನ್ನಡೆಸಿದ್ದರು.

Former Pak PM Nawaz Sharif accuses PM Imran Khan of 'high treason' against  country

ಇತ್ತೀಚೆಗೆ ಪಾಕಿಸ್ಥಾನದಲ್ಲಿ ಬಿಕ್ಕಟ್ಟು ಎದುರಾದ ಬಳಿಕ ವಿರೋಧ ಪಕ್ಷಗಳ ಜಂಟಿ ಸಭೆಯಲ್ಲಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನಿ ಸ್ಥಾನಕ್ಕೆ ಶೆಹಬಾಜ್ ಶರೀಫ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಇದೇ ವೇಳೆ ಇಮ್ರಾನ್ ಖಾನ್ ಅವರ ಪಾಕಿಸ್ಥಾನ್ ಇ-ತೆಹ್ರೀಕ್ ಪಕ್ಷವು ಪ್ರಧಾನಿ ಸ್ಥಾನಕ್ಕೆ ವಿದೇಶಾಂಗ ಸಚಿವ ಷಾ ಮೆಹಬೂಬ್ ಖುರೇಷಿ ಅವರನ್ನು ಆಯ್ಕೆ ಮಾಡಿದೆ.

Imran Khan could resign Wednesday, but colleague says 'there will be a  match till the last ball'

342 ಸದಸ್ಯ ಬಲದ ಸಂಸತ್ತಿನಲ್ಲಿ ಭಾನುವಾರ ಬೆಳಗ್ಗೆ ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದವು. ಅವಿಶ್ವಾಸದ ಪರವಾಗಿ 174 ಮತಗಳು ಚಲಾವಣೆಯಾಗಿದ್ದು, ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಹೊರ ನಡೆಯಬೇಕಾಯಿತು. ಇಮ್ರಾನ್ ಖಾನ್ ಪದಚ್ಯುತಿ ಬೆನ್ನಲ್ಲೇ ಇಮ್ರಾನ್ ಆಪ್ತರ ಮನೆಗಳಿಗೆ ಕೇಂದ್ರೀಯ ತನಿಖಾ ತಂಡವು ದಾಳಿ ನಡೆಸಿದೆ.

Pakistan’s Prime Minister Imran Khan was ousted early on Sunday, April 10,  when he lost a vote of confidence in parliament, after being deserted by coalition partners who blame him for a crumbling economy and failure to deliver on his campaign promises.Candidates for Pakistan’s next prime minister are due to file nomination papers on Sunday, with reports calling Nawaz Sharif’s brother Shehbaz a frontrunner.