ತಲವಾರ್ ಹಿಡಿದು ಹುಟ್ಟುಹಬ್ಬ ಆಚರಣೆ ; ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್, ಮೂವರು ಪೊಲೀಸ್ ವಶಕ್ಕೆ 

04-06-22 12:45 pm       Udupi Correspondent   ಸಿನಿಮಾ

ಸಿನಿಮಾ ಶೈಲಿಯಲ್ಲಿ ತಲವಾರ್ ಹಿಡಿದು ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಏಳು ಮಂದಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. 

ಉಡುಪಿ, ಜೂನ್ 4 : ಸಿನಿಮಾ ಶೈಲಿಯಲ್ಲಿ ತಲವಾರ್ ಹಿಡಿದು ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಏಳು ಮಂದಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. 

ಪಡುಬಿದ್ರಿ ನಿವಾಸಿಗಳಾದ ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದಂತೆ ತಲೆಮರೆಸಿಕೊಂಡಿರುವ ಬರ್ತ್ ಡೇ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಎಂಬವರ ಬಂಧನಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ತಂಡ ಬಲೆ ಬೀಸಿದೆ. 

ಮೇ 30 ರಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಮನೆಯಲ್ಲಿ ಏಳು ಮಂದಿ ಸ್ನೇಹಿತರು ಬರ್ತ್ ಡೇ ಪಾರ್ಟಿ ಮಾಡಿದ್ದರು. ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟುಹಬ್ಬ ಆಚರಿಸಿದ್ದು, ತಲವಾರಿನಲ್ಲಿ ಕೇಕ್ ಕತ್ತರಿಸಿದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಇಲಾಖೆಗೆ ತಿಳಿಯುತ್ತಿದ್ದಂತೆ ಮೇಲಧಿಕಾರಿಗಳು ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಇದರಿಂದ ಬರ್ತ್ ಡೇ ಪಾರ್ಟಿ ಮಾಡಿದ್ದ ಏಳು ಮಂದಿಗೆ ಸಂಕಷ್ಟ ಎದುರಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ‌ಇವರಿಗೆ ಕ್ರಿಮಿನಲ್ ಹಿನ್ನೆಲೆ ಇದೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

A case is registered in Padubidri police station as per orders from SP against seven persons who celebrated a birthday by cutting the cake using sword and made the video go viral on social media. Rowdysheeter Jeethendra Shetty, Ganesh Poojary and Sharath Shetty, all residents of Padubidri, are taken into custody. Kaup circle inspector Prakash and Padubidri sub inspector Purushotham are on the hunt for the arrest of Niranjan Shettigar, Tanuj, Sooraj and Anish.